ದ.ಕ. ಜಿಲ್ಲಾ ಖಾಝಿ ಸಿಎಎ ಪರ ಭಾಷಣ ಮಾಡಿಲ್ಲ : ಮಸೀದಿಯ ಆಡಳಿತ ಕಮಿಟಿ ಸ್ಪಷ್ಟಣೆ

ಪುತ್ತೂರು, ಜ.12: ಆತೂರು ಬದ್ರಿಯಾ ಜುಮಾ ಮಸೀದಿಯ ವತಿಯಿಂದ ನಡೆದ ದ್ಸಿಕ್ರ್ ಹಲ್ಕಾದ 19ನೇ ವಾರ್ಷಿಕ ಸಮಾರೋಪ ಸಮಾರಂಭದಲ್ಲಿ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರು ಎನ್‌ಆರ್‌ಸಿ, ಸಿಎಎ, ಎನ್‌ಪಿಆರ್ ಪರ ಭಾಷಣ ಮಾಡಿದ್ದಾರೆ ಎಂಬುದು ಸತ್ಯಕ್ಕೆ ದೂರವಾದ ಮಾತು. ತ್ವಾಖಾ ಉಸ್ತಾದ್ ಅಂತಹ ಯಾವುದೇ ಭಾಷಣ ಮಾಡಿಲ್ಲ ಎಂದು ಮಸೀದಿ ಆಡಳಿತ ಸಮಿತಿ ಸ್ಪಷ್ಟೀಕರಣ ನೀಡಿದೆ.
ತ್ವಾಖಾ ಉಸ್ತಾದ್ ಆರ್‌ಸಿ, ಸಿಎಎ, ಎನ್‌ಪಿಆರ್ ಅನ್ನು ತೀವ್ರವಾಗಿ ವಿರೋಧಿಸುತ್ತಾರೆ ಎಂದು ಮಸೀದಿಯ ಪ್ರಕಟನೆ ತಿಳಿಸಿದೆ.
ತ್ವಾಖಾ ಉಸ್ತಾದ್ ಅವರು ಸಿಎಎ ಅನ್ನು ಬೆಂಬಲಿಸಿ ಭಾಷಣ ಮಾಡಿದ್ದಾರೆ ಎಂದು ಹೇಳಲಾದ ವೀಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಿಗೆ ಈ ಸ್ಪಷ್ಟೀಕರಣ ಬಂದಿದೆ.
Next Story





