ತಪ್ಪುಗಳನ್ನು ತೋರಿಸದೆ ಮುತ್ತು ಕೊಡಬೇಕಾ ?: ಡಿಸಿಎಂ ಸವದಿ ವಿರುದ್ಧ ಸಿದ್ದರಾಮಯ್ಯ ಕಿಡಿ
"ಬ್ಲೂ ಫಿಲಂ ನೋಡುವವರಿಂದ....."

ಕೊಪ್ಪಳ, ಜ.12: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಡಳಿತರೂಢ ಸರಕಾರದ ತಪ್ಪುಗಳನ್ನು ತೋರಿಸದರೇ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಕೊಳಕು ಹೇಳಿಕೆ ನೀಡಬಾರದು ಎನ್ನುತ್ತಾರೆ. ಹಾಗಾದರೆ ತಪ್ಪುಗಳನ್ನು ತೋರಿಸದೆ ಮುತ್ತು ಕೊಡಬೇಕಾ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತೀರುಗೇಟು ನೀಡಿದ್ದಾರೆ.
ರವಿವಾರ ಕೊಪ್ಪಳ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ಲೂ ಫಿಲಂ ನೋಡಿದ ಸವದಿಯಿಂದ ನಾವು ಪಾಠ ಕಲಿಬೇಕಿಲ್ಲ. ಕೊಳಕು ಅಂದರೆ ಏನು? ಆಡಳಿತರೂಢ ಸರಕಾರದ ತಪ್ಪುಗಳನ್ನು ತೋರಿಸದೆ ತಪ್ಪಾ ಎಂದು ಪ್ರಶ್ನಿಸಿದ್ದಾರೆ. ಮೋದಿ ಮೋದಿ ಎಂದು ಕೂಗುವುದು ಫ್ಯಾಶನ್ ಆಗಿದೆ. ಆರೆಸ್ಸೆಸ್ಸಿನವರು ಇದನ್ನು ಫ್ಯಾಶನ್ ಮಾಡಿಕೊಂಡಿದ್ದಾರೆ. ಜಾತ್ರೆಯಲ್ಲೂ ಮೋದಿ ಎಂದು ಕೂಗಿದರೆ ಏನು ಪ್ರಯೋಜನ? ಅವರಿಗೆ ಯಾವುದೇ ರಾಜಕೀಯ ಗಂಧಗಾಳಿ ಇಲ್ಲ. ಬ್ಲೂ ಫಿಲಂ ನೋಡುವವರಿಂದ ನಾನು ಪಾಠ ಕಲಿಯಬೇಕಿಲ್ಲ. ಅಲ್ಲದೆ, ಸವದಿ ಬಳಿ ಸಿಡಿ ಇದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.
ನಾನು ಐದು ವರ್ಷ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಅಧಿಕಾರ ಇಲ್ಲವೆಂದು ನನಗೆ ಯಾವುದೇ ಭ್ರಮನಿರಸನ ಆಗಿಲ್ಲ ಎಂದು ಹೇಳಿದರು.





