ತೆಕ್ಕಾರು: ಪೌರತ್ವ ಕಾಯ್ದೆ ವಿರುದ್ಧ ಎಸ್ ಬಿ ಎಸ್ ವತಿಯಿಂದ ಪ್ರತಿಭಟನೆ

ಉಪ್ಪಿ೦ಗಡಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಎಸ್ ಬಿ ಎಸ್ ತೆಕ್ಕಾರು ಶಾಖೆ ವತಿಯಿಂದ ತೆಕ್ಕಾರು ಮದ್ರಸಾ ವಠಾರದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆ ಜೊತೆಗೆ ನಾಡಿನ ಶಾಂತಿಗಾಗಿ ಮಹಲರತುಲ್ ಬದ್ರಿಯ್ಯ ಪ್ರಾರ್ಥನಾ ಮಜ್ಲಿಸ್ ನಡೆಸಲಾಯಿತು. ಬಳಿಕ ಕಾಯ್ದೆ ವಿರುದ್ಧ ವಿದ್ಯಾರ್ಥಿಗಳು ಅಝಾದಿ ಘೋಷಣೆ ಕೂಗಿದರು.
ಎಸ್ಸೆಸ್ಸೆಫ್ ಉಪ್ಪಿನಂಗಡಿ ಡಿವಿಷನ್ ಸದಸ್ಯ ಬಾತಿಶ್ ಕೆ,ಪಿ ತೆಕ್ಕಾರು ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ಖತೀಬ್ ಅಬ್ದುಲ್ ರವೂಫ್ ಅಹ್ಸನಿ, ಮದ್ರಸಾ ಪ್ರಿನ್ಸಿಪಾಲ್ ಖಾಲಿದ್ ಸಖಾಫಿ ಪಂಜ, ಸ್ಥಳೀಯ ಉಸ್ತಾದ್ ಇಸ್ಹಾಕ್ ಝುಹ್ರಿ, ಎಸ್ಸೆಸ್ಸೆಫ್ ಸರಳಿಕಟ್ಟೆ ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ಆಶೀಕ್. ಎಸ್ವೈಎಸ್ ತೆಕ್ಕಾರು ಬ್ರಾಂಚ್ ಸದಸ್ಯ ಮುಹಮ್ಮದ್.ಟಿ (ಚೇರಮೋನು), ಎಸ್ಸೆಸ್ಸೆಫ್ ತೆಕ್ಕಾರು ಯುನಿಟ್ ಸದಸ್ಯ ಫಾರೂಕ್ ಟಿ.ಕೆ ಉಪಸ್ಥಿತರಿದ್ದರು.
ಎಸ್ ಬಿ ಎಸ್ ಶಾಖಾ ಅಧ್ಯಕ್ಷ ಇರ್ಫಾನ್ ಟಿ.ಕೆ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ರವೂಫ್ ಅಲಿ ಬಿ.ಟಿ ವಂದಿಸಿದರು. ಕ್ಯಾಂಪಸ್ ಅಮೀರ್ ರಿಜಾಝ್ ಬಿ.ಟಿ ನಿರೂಪಿಸಿದರು.










