ಕುಲಶೇಖರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ

ಮಂಗಳೂರು, ಜ.13: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪದವು ಪೂರ್ವ ವಾರ್ಡಿನ ಕುಲಶೇಖರ ಮೇಲ್ತೋಟದಲ್ಲಿ ಚರಂಡಿ ರಚನೆ ಕಾಮಗಾರಿಗೆ ಶಾಸಕ ಡಿ.ವೇದವ್ಯಾಸ್ ಕಾಮತ್ ಸೋಮವಾರ ಶಿಲಾನ್ಯಾಸ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಕುಲಶೇಖರ ಮೇಲ್ತೋಟದಲ್ಲಿ ಮಳೆನೀರು ಸರಾಗವಾಗಿ ಹರಿದು ಹೋಗಲು ಚರಂಡಿ ನಿರ್ಮಾಣ ಮಾಡುವ ಕಾಮಗಾರಿಗೆ 20 ಲಕ್ಷ ರೂ.ಅನುದಾನ ಒದಗಿಸಲಾಗಿದೆ. ಕಳೆದ ಹಲವಾರು ತಿಂಗಳಿನಿಂದ ಈ ಕಾಮಗಾರಿ ನಡೆಸುವಂತೆ ಸಾರ್ವಜನಿಕರು ಮನವಿ ಸಲ್ಲಿಸಿದ್ದರು. ಆ ಪ್ರಕಾರ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಕುಲಶೇಖರ ಪರಿಸರದಲ್ಲಿ ಈಗಾಗಲೇ ಅನೇಕ ಅಭಿವೃದ್ಧಿ ಕಾಮಗಾರಿಗಳ ಪಟ್ಟಿ ತಯಾರಿಸಲಾಗಿದೆ. ವಿವಿಧ ಇಲಾಖೆಗಳಿಂದ ಅದಕ್ಕಾಗಿ ಯೋಜನೆ ರೂಪಿಸಲಾಗಿದೆ ಎಂದರು.
ಈ ಸಂದರ್ಭ ಸ್ಥಳೀಯ ಮುಖಂಡರಾದ ಸುಜನ್‌ದಾಸ್ ಕುಡುಪು, ವಸಂತ್ ಜೆ ಪೂಜಾರಿ, ವಿಶ್ವಜೀತ್, ದಿನೇಶ್, ಪ್ರಸನ್ನ, ಹರಿಣಿ, ಪ್ರೇಮ್, ಸುಧೀರ್, ಸಂದೀಪ್, ರವಿ ಉಮಿಕ್ಕಾನ್, ಜಯಂತಿ, ನವೀನ್, ಲಾನ್ಸಿ, ಸಂಪತ್, ಐರಿ, ರಿಚರ್ಡ್, ಸುಧಾ ನಾರಾಯಣ್, ಗೀತಾ, ಮೆಲ್ರಿಕ್, ನೆವಿಲ್ ಮುಂತಾದವರು ಉಪಸ್ಥಿತರಿದ್ದರು.





