ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ
ಉಡುಪಿ, ಜ.13:ಉಡುಪಿ ತಾಲೂಕಿನ ಶಿಶುಅಭಿವೃದ್ಧಿ ಯೋಜನಾ ಗ್ರಾಪಂ ವ್ಯಾಪ್ತಿ, ನಗರಸಭೆ ವ್ಯಾಪ್ತಿ ಹಾಗೂ ಪುರಸಭೆ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಾದ ಪೆರಂಪಳ್ಳಿ-1 ಅಂಗನವಾಡಿ ಕಾರ್ಯಕರ್ತೆ ಹುದ್ದೆ, ಅಂಗನವಾಡಿ ಕೇಂದ್ರಗಳಾದ ಜವನರಕಟ್ಟೆ-1, ಪುತ್ತಿಗೆ, ಹೆಜಮಾಡಿ-1, ಕನ್ನರ್‌ಪಾಡಿ-1, ಕಳತ್ತೂರು-1, ಕಟ್ಟಿಂಗೇರಿ, ಕೊಳ-3, ಸಂತೆ ಮಾರ್ಕೆಟ್ ಆದಿಉಡುಪಿ, ಕಾಡಬೆಟ್ಟು, ನಂದಿಕೂರು-2, ಕೊಪ್ಪಲಂಗಡಿ-2, ಪೊಲಿಪು, ಅವರಾಲುಮಟ್ಟು ಅಂಗನವಾಡಿ ಸಹಾಯಕಿ ಹುದ್ದೆಗೂ, 18ರಿಂದ 35ವರ್ಷಗೊಳಗಿನ ಕಾರ್ಯ ಕರ್ತೆಯರಿಗೆ ಗರಿಷ್ಠ ಎಸೆಸೆಲ್ಸಿ ತೇರ್ಗಡೆಯಾಗಿರುವ ಮತ್ತು ಸಹಾಯಕಿಯರಿಗೆ ಕನಿಷ್ಠ 4ನೇ ತರಗತಿ ಮತ್ತು ಗರಿಷ್ಠ 9ನೇ ತರಗತಿ ತೇರ್ಗಡೆಯಾಗಿರುವ ಸ್ಥಳೀಯ ಮಹಿಳಾ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸ ಲಾಗಿದೆ.
ವೆಬ್ ವಿಳಾಸ http://udupi.nic.in ನಲ್ಲಿ ಅರ್ಜಿ ಸಲ್ಲಿಸಲು ಫೆ.5 ಕೊನೆಯ ದಿನವಾಗಿದೆ ಎಂದು ಉಡುಪಿ ಶಿಶುಅಭಿವೃದ್ಧಿ ಯೋಜನಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
Next Story





