ಜಾಗತಿಕ ಕೌಶಲ್ಯ ಸ್ಪರ್ಧೆಗೆ ನೋಂದಣಿ
ಉಡುಪಿ, ಜ.13: ಜಾಗತಿಕ ಕೌಶಲ್ಯ(ವರ್ಲ್ಡ್ ಸ್ಕಿಲ್) ಸ್ಪರ್ಧೆಯನ್ನು ಚೀನಾ ದೇಶದ ಶಾಂಘೈ ನಗರದಲ್ಲಿ 2021ರಲ್ಲಿ ಏರ್ಪಡಿಸಲಾಗುತ್ತಿದೆ. ಕರ್ನಾಟಕ 38 ಕೌಶಲ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕಗಳನ್ನು ಗೆಲ್ಲುವ ಮಹಾದಾಸೆಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ಕರ್ನಾಟಕದಿಂದ ವಲ್ಡ್ ಸ್ಕಿಲ್ ಸ್ಪರ್ಧಾರ್ಥಿಗಳನ್ನು ಆಯ್ಕೆ ಮಾಡಲು ರಾಜ್ಯ ಸರಕಾರ ಮಾರ್ಚ್ ತಿಂಗಳಲ್ಲಿ ರಾಜ್ಯ ಮಟ್ಟದ ಕೌಶಲ್ಯ ಸ್ಪರ್ಧೆಯನ್ನು ಏರ್ಪಡಿಸಿದೆ.
ಈ ಸ್ಪರ್ಧೆಯಲ್ಲಿ ಭಾಗವಹಿಸಲು ಯಾವುದೇ ರೀತಿಯ ವಿದ್ಯಾರ್ಹತೆಯ ಮಿತಿ ಇರುವುದಿಲ್ಲ. ಕೌಶಲ್ಯ ಮತ್ತು ವಯಸ್ಸು ಒಂದೇ ಅ್ಯರ್ಥಿಯ ಅರ್ಹತೆಯಾಗಿದೆ. ಅ್ಯರ್ಥಿಗಳು 1999ರ ಜ.1ರ ನಂತರ ಜನಿಸಿದವರಾ ಗಿರಬೇಕು. ಹಾಗೂ ಮೆಕಾಟ್ರನಿಕ್, ಏರೋಮ್ಯಾಟಿಕಲ್, ಸೈಬರ್ ಸೆಕ್ಯೂರಿಟಿ, ವಾಟರ್ ಟೆಕ್ನಾಲಜಿ ಮುಂತಾದ ಕೆಲವು ಕೌಶಲ್ಯಗಳಿಗೆ 1996 ಜನವರಿ 1ರ ನಂತರ ಹುಟ್ಟಿದ ಅ್ಯರ್ಥಿಗಳೂ ಅರ್ಜಿ ಸಲ್ಲಿಸಬಹುದು.
ಪ್ರಥಮ ಹಂತದ ಪ್ರಾದೇಶಿಕ ಸ್ಫರ್ದೆ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಕಲಬುರ್ಗಿಯಲ್ಲಿ ಫೆಬ್ರವರಿ ತಿಂಗಳಲ್ಲಿ ನಡೆಯಲಿದೆ. ಉಡುಪಿ ಜಿಲ್ಲೆಯಲ್ಲಿ ಈ ಸ್ಫರ್ದೆಗೆ ಕೌಶಲ್ಯ ಹೊಂದಿರುವ ಸೂಕ್ತ ಅ್ಯರ್ಥಿಗಳು ಜ.15ರೊಳಗೆ ಹೆಸರು ನೋಂದಾಯಿಸಬೇಕು. ಆನ್‌ಲೈನ್ ನೊಂದಣಿ ಹಾಗೂ ಪೂರ್ತಿ ವಿವರಗಳಿಗೆ ನ್ನು ಸಂದರ್ಶಿಸುವಂತೆ ಸೂಚಿಲಾಗಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ, ರಜತಾದ್ರಿ, ಮಣಿಪಾಲ ಹಾಗೂ ಮೊಬೈಲ್ ಸಂಖ್ಯೆ: 9480266784ನ್ನು ಸಂಪರ್ಕಿಸುವಂತೆ ಹಾಗೂ ನೋಂದಾಯಿಸಿರುವ ಅ್ಯರ್ಥಿಗಳ ಪಟ್ಟಿಯನ್ನು ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿಗಳ ಕಛೇರಿಗೆ ಇ-ಮೇಲ್ udupikaushalya@gmail.com ಮೂಲಕ ಸಲ್ಲಿಸುವಂತೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







