Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಲ್ಯಾಂಡ್‍ಟ್ರೇಡ್ಸ್ ನ ‘ಸಾಲಿಟೇರ್’ ವಸತಿ...

ಲ್ಯಾಂಡ್‍ಟ್ರೇಡ್ಸ್ ನ ‘ಸಾಲಿಟೇರ್’ ವಸತಿ ಸಮುಚ್ಛಯಕ್ಕೆ 'ಎಸಿಸಿಇ–ಅಲ್ಟ್ರಾಟೆಕ್ 2019' ಪ್ರಶಸ್ತಿ

ವಾರ್ತಾಭಾರತಿವಾರ್ತಾಭಾರತಿ13 Jan 2020 9:15 PM IST
share
ಲ್ಯಾಂಡ್‍ಟ್ರೇಡ್ಸ್ ನ ‘ಸಾಲಿಟೇರ್’ ವಸತಿ ಸಮುಚ್ಛಯಕ್ಕೆ ಎಸಿಸಿಇ–ಅಲ್ಟ್ರಾಟೆಕ್ 2019 ಪ್ರಶಸ್ತಿ

ಮಂಗಳೂರು : ನಗರದ ಲ್ಯಾಂಡ್‍ಟ್ರೇಡ್ಸ್ ನ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್‍ನ ಬಹು ಅಂತಸ್ತುಗಳ ‘ಸಾಲಿಟೇರ್’ ವಸತಿ ಸಮುಚ್ಛಯಕ್ಕೆ ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ (ಇಂಡಿಯಾ) ಮಂಗಳೂರು ಘಟಕದಿಂದ ‘ಎಸಿಇಇ (ಐ) ಎಂಎಲ್‍ಆರ್ ಅಲ್ಟ್ರಾಟೆಕ್ 2019’ ಪ್ರಶಸ್ತಿ ದೊರಕಿದೆ.

ನಗರದಲ್ಲಿ ಜ. 8ರಂದು ಜರಗಿದ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನಿಸಲಾಯಿತು.

ಅತ್ಯುತ್ಕರ್ಷ ಗುಣಮಟ್ಟದ ನಿರ್ಮಾಣ ಕಾರ್ಯಕ್ಕೆ ಸಂಬಂಧಿತ ವೃತ್ತಿಪರರನ್ನು ಪ್ರೋತ್ಸಾಹಿಸಲು ಘಟಕವು ಅಲ್ಟ್ರಾಟೆಕ್ ಸಿಮೆಂಟ್‍ನ ಸಹಯೋಗ ದಲ್ಲಿ ಈ ಪುರಸ್ಕಾರ ನೀಡುತ್ತಿದೆ. ಶ್ರೇಷ್ಠ ಗುಣಮಟ್ಟದ ಕಾಂಕ್ರಿಟ್ ಬಹು ಅಂತಸ್ತುಗಳ ಕಟ್ಟಡ ವಿಭಾಗದಲ್ಲಿ ಸಾಲಿಟೇರ್ ಗೆ ಇತ್ತೀಚೆಗೆ ಕ್ರೆಡೈ-ಕೇರ್ ಪ್ರಶಸ್ತಿ, ಕ್ರಿಸಿಲ್‍ನ ಗರಿಷ್ಠ 7 ಸ್ಟಾರ್ ಮಾನ್ಯತೆ ದೊರಕಿದೆ. ಕ್ರಿಸಿಲ್‍ನಿಂದ ಡಿಎ2 ರಿಯಲ್ ಎಸ್ಟೇಟ್ ಡೆವಲಪರ್ ಪುರಸ್ಕಾರ ಪಡೆದ ನಗರದ ಏಕೈಕ ನಿರ್ಮಾಣ ಸಂಸ್ಥೆಯಾಗಿದೆ.

32 ಅಂತಸ್ತುಗಳು

ನಗರದ ಹ್ಯಾಟ್‍ಹಿಲ್‍ನಲ್ಲಿ ನಿರ್ಮಾಣಗೊಂಡ 3 ಅಂತಸ್ತುಗಳ ನಗರದೊಳಗಿನ ಅತ್ಯಂತ ಎತ್ತರದ ಸಮುಚ್ಛಯವಾಗಿರುವ ಸಾಲಿಟೇರ್ ನಲ್ಲಿ ಅತ್ಯಾಧುನಿಕ ಶೈಲಿಯಲ್ಲಿ ಕ್ಲಬ್ ಹೌಸ್, ಈಜುಕೊಳ, ಯೋಗ-ಧ್ಯಾನ ಮಂದಿರ, ಮಕ್ಕಳ ಆಟದ ಪ್ರದೇಶ, ಒಳಾಂಗಣ ಕ್ರೀಡೆಗಳು, ಬಹು ಅಂತಸ್ತುಗಳ ಪಾರ್ಕಿಂಗ್, ನದಿ-ಸಮುದ್ರದ ನೋಟ, ಜಿಮ್, ಸೌನಾ-ಸ್ಟೀಂ ರೂಮ್ಸ್, ಮಳೆನೀರು ಕೊಯ್ಲು, ತ್ಯಾಜ್ಯ ಸಂಸ್ಕರಣೆ, ಸುರಕ್ಷೆ ಮುಂತಾದ ಸೌಲಭ್ಯಗಳಿವೆ. 2-3-4-ಬಿಎಚ್ ಕೆ ಮತ್ತು 5 ಬಿಎಚ್ ಕೆ ಡೂಪ್ಲೆಕ್ಸ್ ಸಹಿತ 143 ಅಪಾರ್ಟ್‍ಮೆಂಟ್‍ಗಳಿವೆ.

ಇನ್ನಷ್ಟು ಯೋಜನೆಗಳು

ಬಲ್ಮಠದಲ್ಲಿ ಲ್ಯಾಂಡ್ ಟ್ರೇಡ್ಸ್‍ನ ಮೈಲ್ ಸ್ಟೋನ್–25 ಎಂಬ ವಾಣಿಜ್ಯ ಸಂಕೀರ್ಣ ಉದ್ಘಾಟನೆಗೆ ಸಿದ್ಧವಾಗಿದೆ. ದೇರೆಬೈಲ್ ನಲ್ಲಿ ಹ್ಯಾಬಿಟ್ಯಾಟ್ ವನ್54 ಎಂಬ 154 ವಸತಿ ಸಮುಚ್ಛಯಗಳು, ಸುರತ್ಕಲ್ ಲೈಟ್ ಹೌಸ್ ಬಳಿ ಕಡಲ ಕಿನಾರೆಯಲ್ಲಿ ಎಮೆರಾಲ್ಡ್ ಬೇ ಎಂಬ 5.5 ರಿಂದ 15 ಸೆಂಟ್ಸ್ ವರೆಗಿನ ನಿವೇಶನಗಳ ಯೋಜನೆ ಪ್ರಗತಿಯಲ್ಲಿದೆ. ಗಾಂಧಿನಗರದಲ್ಲಿ ನಕ್ಷತ್ರ ಎಂಬ ವಸತಿ ಸಮುಚ್ಛಯ, ರಥಬೀದಿಯಲ್ಲಿ ಅನಂತೇಶ ಎಂಬ ಅತ್ಯಾಧುನಿಕ ವಾಣಿಜ್ಯ ಸಂಕೀರ್ಣ ನಿರ್ಮಾಣದ ಯೋಜನೆಗಳನ್ನು ಕೈಗೆತ್ತಿಕೊಂಡಿದೆ.

27 ವರ್ಷಗಳ ಹಿಂದೆ ಶ್ರೀನಾಥ್ ಹೆಬ್ಬಾರ್ ಸ್ಥಾಪಿಸಿದ ಲ್ಯಾಂಡ್ ಟ್ರೇಡ್ಸ್ ಸಂಸ್ಥೆ ಐಎಸ್‍ಒ 9001:2015 ಪ್ರಮಾಣ ಪತ್ರ ಪಡೆದಿದೆ. ಮೌರಿಷ್ಕಾ ಪ್ಯಾಲೇಸ್, ಅಟ್ಲಾಂಟಿಸ್ ಸಹಿತ 35 ಮೆಗಾ ಯೋಜನೆಗಳನ್ನು ಪೂರ್ಣಗೊಳಿಸಿದೆ.

ಗೌರವ: ಶ್ರೀನಾಥ್ ಹೆಬ್ಬಾರ್

ಸಾಲಿಟೇರ್ ಗೆ ದೊರೆತ ಈ ಮಹತ್ವಪೂರ್ಣ ಪ್ರಶಸ್ತಿಯ ಗೌರವವು ನಮ್ಮ ಹೊಣೆಗಾರಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ. ಕರ್ನಾಟಕ ರೆರಾದಿಂದ ಸಂಪೂರ್ಣ ಅಂತಿಮ ಪ್ರಮಾಣ ಪತ್ರ ಲಭ್ಯವಾಗಿದೆ. ವಿವಿಧ ಇಲಾಖೆಗಳ ಪ್ರಮಾಣ ಪತ್ರಗಳು, ಅವಶ್ಯಕ ದಾಖಲೆಗಳೂ ಲಭ್ಯವಿದ್ದು, ಗ್ರಾಹಕರಿಗೆ ಸಂಪೂರ್ಣವಾಗಿ ವಿಶ್ವಾಸದಿಂದ ಈ ಯೋಜನೆಯನ್ನು ಅರ್ಪಿಸುತ್ತಿದ್ದೇವೆ ಎಂದು ಶ್ರೀನಾಥ್ ಹೆಬ್ಬಾರ್ ಪ್ರತಿಕ್ರಿಯಿಸಿದ್ದಾರೆ.    

ಪೂರಕ ಮಾಹಿತಿಗಾಗಿ www.landrades.in ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X