Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ನಮಾಝ್ ಗೆಂದು ಹೋದ ತಂದೆಗೆ ನನ್ನ...

ನಮಾಝ್ ಗೆಂದು ಹೋದ ತಂದೆಗೆ ನನ್ನ ಕಣ್ಣೆದುರೇ ಗುಂಡಿಕ್ಕಿದರು: ಜಲೀಲ್ ಪುತ್ರಿ ಶಿಫಾನಿ

ಜನತಾ ನ್ಯಾಯಾಲಯದ ಮುಂದೆ ಪೊಲೀಸ್ ದೌರ್ಜನ್ಯದ ಸಾಕ್ಷಿ ಹೇಳಿದ ಮಕ್ಕಳು

ಇಸ್ಮಾಯೀಲ್ಇಸ್ಮಾಯೀಲ್13 Jan 2020 10:50 PM IST
share
ನಮಾಝ್ ಗೆಂದು ಹೋದ ತಂದೆಗೆ ನನ್ನ ಕಣ್ಣೆದುರೇ ಗುಂಡಿಕ್ಕಿದರು: ಜಲೀಲ್ ಪುತ್ರಿ ಶಿಫಾನಿ

ಮಂಗಳೂರು: ಡಿಸೆಂಬರ್ 19ರಂದು ಮಂಗಳೂರಿನಲ್ಲಿ ನಡೆದ ಹಿಂಸಾಚಾರ, ಪೊಲೀಸ್ ಗೋಲಿಬಾರ್ ಮತ್ತು  ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪ್ರತ್ಯಕ್ಷದರ್ಶಿಗಳಿಂದ ಮಾಹಿತಿಗಳನ್ನು ಕಲೆಹಾಕಲು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ಗೋಪಾಲಗೌಡರ ನೇತೃತ್ವದ ಸಮಿತಿಯೊಂದು ಇತ್ತೀಚೆಗೆ ನಗರಕ್ಕೆ ಆಗಮಿಸಿತ್ತು. ನಗರದ ಖಾಸಗಿ ಹೊಟೇಲ್ ಒಂದರಲ್ಲಿ ಜನತಾ ನ್ಯಾಯಾಲಯ ಕಲಾಪ ನಡೆದಿದ್ದು, ಗೋಲಿಬಾರ್ ನಲ್ಲಿ ಮೃತಪಟ್ಟ ಜಲೀಲ್ ಅವರ ಇಬ್ಬರು ಮಕ್ಕಳು ಆಗಮಿಸಿದ್ದರು.

ಸಮಿತಿಯಲ್ಲಿ ಗೋಪಾಲಗೌಡರ ಜೊತೆ ಬಿಟಿ ವೆಂಕಟೇಶ್ ಮತ್ತು ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಇದ್ದರು. ಸಮಿತಿಯ ಮುಂದೆ ಹಾಜರಾದ ಇಬ್ಬರು ಮಕ್ಕಳು ತಮ್ಮನ್ನು ಶಿಫಾನಿ ಮತ್ತು ಸಬೀಲ್ ಎಂದು ಪರಿಚಯಿಸಿಕೊಂಡರು. ಶಿಫಾನಿಗೆ 14 ವರ್ಷ ವಯಸ್ಸಾಗಿದ್ದು, 9ನೆ ತರಗತಿ ವಿದ್ಯಾರ್ಥಿನಿ. ಸಬೀಲ್ 5ನೆ ತರಗತಿ ವಿದ್ಯಾರ್ಥಿಯಾಗಿದ್ದು, 9 ವರ್ಷ ವಯಸ್ಸಾಗಿದೆ. ಶಿಫಾನಿ ಮತ್ತು ಸಬೀಲ್ ಇಬ್ಬರೂ ಯಾವುದೇ ಸಹಾಯವನ್ನು ಯಾಚಿಸಿ ಸಮಿತಿಯ ಮುಂದೆ ಹಾಜರಾಗಿರಲಿಲ್ಲ. ಬದಲಾಗಿ ಇಬ್ಬರೂ ಡಿಸೆಂಬರ್ 19ರಂದು ಏನು ನಡೆದಿತ್ತು ಎನ್ನುವುದನ್ನು ವಿವರಿಸುವುದಕ್ಕಾಗಿ ಅಲ್ಲಿಗೆ ಬಂದಿದ್ದರು.

ಆರಂಭದಲ್ಲಿ ಜಸ್ಟಿಸ್ ಗೋಪಾಲಗೌಡರು ಇಬ್ಬರು ಮಕ್ಕಳೊಂದಿಗೆ ಅವರಿಗೆ ಶಿಕ್ಷಣದ ಬಗ್ಗೆ ವಿಚಾರಿಸಿದರು. ತಾನು ಪೈಲಟ್ ಆಗಲು ಬಯಸಿದ್ದೇನೆ ಎಂದ ಸಬೀಲ್, ಡಿಸೆಂಬರ್ 19ರಂದು ಪೊಲೀಸರು ಗುಂಡಿಕ್ಕುವ 2 ಗಂಟೆಗಳ ಮೊದಲು ತಂದೆ ತಾನು ಮತ್ತು ಸಹೋದರಿಯನ್ನು ಶಾಲಾ ವಾಹನದಿಂದ ಕರೆತಂದಿದ್ದರು ಎಂದು ವಿವರಿಸಿದ.

"ಡಿಸೆಂಬರ್ 19ರಂದು ಮಧ್ಯಾಹ್ನ 1:30ರ ವೇಳೆಗೆ ಅವರು ನಮ್ಮನ್ನು ಶಾಲೆಯ ವಾಹನದಿಂದ ಕರೆದೊಯ್ದರು. ಅದೇ ದಿನ ಮಧ್ಯಾಹ್ನದ ನಂತರ ನಾವೆಲ್ಲರೂ ಊಟ ಮಾಡಿದೆವು. ನಮಾಝ್ ಮಾಡಲು ಹೋಗುತ್ತಿದ್ದೇನೆ ಎಂದು ಹೇಳಿ ತಂದೆ ಮನೆಯಿಂದ ಹೊರಹೋದರು. ಆ ಸಂದರ್ಭ ಅಲ್ಲಿ ಹಿಂಸಾಚಾರ ನಡೆಯುತ್ತಿತ್ತು. ಆ ಸಂದರ್ಭ ಪೊಲೀಸರು ತಂದೆಯ ಕಣ್ಣು ಮತ್ತು ಮೆದುಳಿಗೆ ಗುಂಡಿಕ್ಕಿದರು" ಎಂದು ಸಬೀಲ್ ವಿವರಿಸಿದ.

ಜಲೀಲ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರೇ ಎನ್ನುವ ಸಮಿತಿಯ ಪ್ರಶ್ನೆಗೆ ಉತ್ತರಿಸಿದ ಸಬೀಲ್, ಜಲೀಲ್ ಪ್ರತಿಭಟನೆಯ ಭಾಗವಾಗಿದ್ದರು ಎನ್ನುವ ಆರೋಪಗಳನ್ನು ನಿರಾಕರಿಸಿದ. ಅಂದು ಮಧ್ಯಾಹ್ನದ ನಂತರ ತಂದೆ ಮನೆಯಲ್ಲೇ ಇದ್ದರು. ನಂತರ ನಮಾಝ್ ಮಾಡಲೆಂದು ತೆರಳಿದರು ಎಂದು ಬಾಲಕ ಸಬೀಲ್ ವಿವರಿಸಿದ.

ಮನೆಯಿಂದ ತಂದೆ ಕಾಲು ಹೊರಗಿಟ್ಟ ಸ್ವಲ್ಪ ಸಮಯದಲ್ಲೇ ಅವರಿಗೆ ಗುಂಡಿಕ್ಕಲಾಯಿತು. ಈ ಸಂದರ್ಭ ಅವರು ನೆಲಕ್ಕುರುಳುವುದನ್ನು ತಾನು ನೋಡಿದ್ದೇನೆ ಎಂದು ಜಲೀಲ್ ರ ಪುತ್ರಿ ಶಿಫಾನಿ ವಿವರಿಸಿದರು.

"ಅವರು ನಮ್ಮ ಜೊತೆ ಊಟ ಮಾಡಿದರು. ನಂತರ ನಮಾಝ್ ಮಾಡಲು ಹೋಗುತ್ತಿದ್ದೇನೆಂದು ಹೇಳಿ ಮನೆಯಿಂದ ತೆರಳಿದರು. ಮನೆಯಿಂದ ಹೊರಗೆ ಹೋದ ತಕ್ಷಣ ಪೊಲೀಸರು ಗುಂಡಿಕ್ಕಿದರು. ಅವರು ನಡೆದು ಹೋದದ್ದನ್ನು ಮತ್ತು ನೆಲಕ್ಕೆ ಕುಸಿದು ಬಿದ್ದದ್ದನ್ನು ನಾವು ನೋಡಿದ್ದೇವೆ. ಅವರು ಸ್ಥಳದಲ್ಲೇ ಮೃತಪಟ್ಟರು. ಸ್ವಲ್ಪ ಸಮಯದ ಮುನ್ನ ಅವರು ನಮ್ಮ ಜೊತೆಗಿದ್ದರು. ನಮಾಝ್ ಮಾಡುವುದಕ್ಕಾಗಿ ಪೊಲೀಸರು ಎಲ್ಲಿದ್ದಾರೆ, ಮನೆಯ ಸುತ್ತಮುತ್ತ ಏನು ನಡೆಯುತ್ತಿದೆ ಎನ್ನುವುದನ್ನು ನೋಡಲು ಅವರು ಹೋಗಿದ್ದರು. ಆದರೆ ಅವರಿಗೆ ಗುಂಡಿಕ್ಕಲಾಯಿತು" ಎಂದು ಹೇಳುತ್ತಾ ಗದ್ಗದಿತರಾದರು ಶಿಫಾನಿ.

ಈ ಸಂದರ್ಭ ಪ್ರತಿಕ್ರಿಯಿಸಿದ ಜಸ್ಟಿಸ್ ಗೌಡ ಅವರು ಜಲೀಲ್ ನಿಧನಕ್ಕೆ ಸಂತಾಪ ಸೂಚಿಸಿದರು. ಸತ್ಯ ಹೊರಬರಲಿದೆ ಮತ್ತು ಜಲೀಲ್ ಕುಟುಂಬಕ್ಕೆ ನ್ಯಾಯ ಸಿಗಲಿದೆ ಎಂದು ಧೈರ್ಯ ತುಂಬಿದರು.

ಗೋಲಿಬಾರ್ ನಲ್ಲಿ ಮೃತಪಟ್ಟ ಇಬ್ಬರನ್ನೂ ಪೊಲೀಸರು ಆರೋಪಿಗಳೆಂದು ಎಫ್ ಐಆರ್ ನಲ್ಲಿ ಉಲ್ಲೇಖಿಸಿರುವುದು ಈಗಾಗಲೇ ವಿವಾದವನ್ನು ಸೃಷ್ಟಿಸಿದೆ. ಈ ನಡುವೆ ರಾಜ್ಯ ಸರಕಾರವು ಮೃತರ ಕುಟುಂಬಕ್ಕೆ ಘೋಷಿಸಿದ್ದ ಪರಿಹಾರವನ್ನು ಹಿಂಪಡೆದಿದೆ.

ತನಿಖೆ ನಡೆದು ಸತ್ಯಾಂಶ ಏನೆಂದು ಬಯಲಾದರೂ ತಮ್ಮ ತಂದೆ ರಕ್ತದ ಮಡುವಿನಲ್ಲಿ ಬಿದ್ದದ್ದನ್ನು ಕಂಡ ಮಕ್ಕಳಾದ ಶಿಫಾನಿ ಮತ್ತು ಸಬೀಲ್ ರ ಮಾನಸಿಕ ಜರ್ಜರಿತ ಸರಿಯಾಗದು. ಈ ಮಕ್ಕಳು ಹೇಳಿದ್ದು ಸತ್ಯವೆಂದು ಸಾಬೀತಾದರೂ ಶಿಫಾನಿ ಮತ್ತು ಸಬೀಲ್ ರ ಬಾಲ್ಯವನ್ನು ನುಚ್ಚುನೂರು ಮಾಡಿದ್ದಕ್ಕೆ ಹೊಣೆ ಯಾರು ಎನ್ನುವ ಪ್ರಶ್ನೆ ಹಾಗೆಯೇ ಉಳಿದುಬಿಡುತ್ತದೆ.

share
ಇಸ್ಮಾಯೀಲ್
ಇಸ್ಮಾಯೀಲ್
Next Story
X