ಬಿಕರ್ನಕಟ್ಟೆ: ಬಾಲ ಏಸುವಿನ ವಾರ್ಷಿಕ ಮಹೋತ್ಸವಕ್ಕೆ ಚಾಲನೆ

ಮಂಗಳೂರು, ಜ.14: ನಗರದ ಬಿಕರ್ನಕಟ್ಟೆಯ ಕಾರ್ಮೆಲ್ ಹಿಲ್‌ನ ಬಾಲ ಏಸುವಿನ ವಾರ್ಷಿಕ ಮಹೋತ್ಸವಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.
ಮಂಗಳೂರು ಬಿಷಪ್ ಅ.ವಂ. ಡಾ. ಪೀಟರ್ ಪಾವ್ಲ್ ಸಲ್ದಾನಾ ಮಹೋತ್ಸವಕ್ಕೆ ಚಾಲನೆ ನೀಡಿ, ಬಲಿಪೂಜೆ ನೆರವೇರಿಸಿ ಶುಭ ಹಾರೈಸಿದರು.
ಸಿಂಧು ದುರ್ಗ ಧರ್ಮಪ್ರಾಂತದ ಮುಖ್ಯ ಧರ್ಮಗುರು ಡಾ. ಆಲ್ವಿನ್ ಬರಟ್ಟೋ ಸಹಿತ ಸುಮಾರು 30ಕ್ಕೂ ಅಧಿಕ ಧರ್ಮಗುರುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮವು ಜ.15 ಮತ್ತು 16ರಂದು ಕೂಡ ನಡೆಯಲಿದೆ.
Next Story







