ಬಾಕಿ ಭತ್ತೆ ಪಾವತಿಗೆ ಉದಯ ಟಿವಿ ಎಂಪ್ಲಾಯೀಸ್ ಯೂನಿಯನ್ ಒತ್ತಾಯ
ಬೆಂಗಳೂರು, ಜ.14: ಸನ್ ಟಿವಿಯ ಅಂಗ ಸಂಸ್ಥೆಯಾದ ಉದಯ ಚಾನಲ್, ತನ್ನ ಸಂಸ್ಥೆಯ ನೌಕರರಿಗೆ 2008ರಿಂದ ತುಟ್ಟಿ ಭತ್ತೆ ನೀಡಿಲ್ಲ ಎಂದು ಉದಯ ಟಿವಿ ಎಂಪ್ಲಾಯೀಸ್ ಯೂನಿಯನ್ ಅಧ್ಯಕ್ಷ ಜಿ.ಆರ್.ಶಿವಶಂಕರ್ ಆರೋಪಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಭಾರತದಲ್ಲಿ ಸನ್ ಟಿವಿ ನೆಟ್‌ವರ್ಕ್ ಬೃಹದಾಕಾರವಾಗಿ ಬೆಳೆದ ಸಂಸ್ಥೆಯಾಗಿದೆ. ಈ ಸಂಸ್ಥೆಯ ಅಂಗ ಸಂಸ್ಥೆಯಾಗಿರುವ ಉದಯ ಚಾನಲ್ ಕಳೆದ 25 ವರ್ಷಗಳಿಂದ ರಾಜ್ಯದಲ್ಲಿ ಪ್ರಸಿದ್ಧವಾದ ಸಂಸ್ಥೆಯಾಗಿದೆ. ಆದರೆ, ಈ ಸಂಸ್ಥೆಯಲ್ಲಿ ದುಡಿಯುತ್ತಿರುವ ಸುಮಾರು 250 ಉದ್ಯೋಗಿಗಳಿಗೆ 3 ಕೋಟಿ 15 ಲಕ್ಷ ರೂ. ತುಟ್ಟಿ ಭತ್ತೆ ಬಾಕಿ ಉಳಿಸಿಕೊಂಡಿದೆ ಇದರಿಂದ ನೌಕರರಿಗೆ ಸಾಕಷ್ಟು ತೊಂದರೆ ಉಂಟಾಗಿದೆ. ಈ ಕೂಡಲೇ ಬಾಕಿ ಉಳಿಸಿಕೊಂಡಿರುವ ತುಟ್ಟಿ ಭತ್ತೆಯನ್ನು ನೀಡಬೇಕು ಎಂದು ಒತ್ತಾಯಿಸಿದರು.
ಸನ್‌ನೆಟ್‌ವರ್ಕ್ ಸಂಸ್ಥೆ ಅಡಿಯಲ್ಲಿ ಇನ್ನೂ ಹಲವಾರು ಮಾಧ್ಯಮಗಳು ನಡೆಯುತ್ತಿದೆ. ಆ ಕಾರ್ಮಿಕರಿಗೂ ಸಹ ಆಡಳಿತ ವರ್ಗ ಸವಲತ್ತುಗಳನ್ನು ನೀಡಿಲ್ಲ. ಈ ಕುರಿತು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಅವರು ಗಮನ ಹರಿಸಿ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಆರ್ಥಿಕವಾಗಿ ಸೂಕ್ತ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದರು.





