ವಿಮಾನದಲ್ಲಿ ಮಾಜಿ ಬಾಲಿವುಡ್ ತಾರೆಗೆ ಕಿರುಕುಳ ಪ್ರಕರಣ: ಮುಂಬೈ ವ್ಯಕ್ತಿಯನ್ನು ದೋಷಿಯೆಂದು ಪರಿಗಣಿಸಿದ ನ್ಯಾಯಾಲಯ

ಮುಂಬೈ, ಜ.18: ಮೂರು ವರ್ಷಗಳ ಹಿಂದೆ ವಿಮಾನದಲ್ಲಿ ಬಾಲಿವುಡ್‌ನ ಮಾಜಿ ನಟಿಗೆ ಕಿರುಕುಳ ನೀಡಿದ 41 ವರ್ಷದ ಆರೋಪಿಯನ್ನು ಮುಂಬೈನ ವಿಶೇಷ ನ್ಯಾಯಾಲಯ ಬುಧವಾರ ದೋಷಿ ಎಂದು ಪರಿಗಣಿಸಿದೆ.
ಪೊಕ್ಸೊ ಕಾಯ್ದೆಯಡಿ ದಾಖಲಾಗಿರುವ ಪ್ರಕರಣದ ವಿಚಾರಣೆ ನಡೆಸಿದ ಸ್ಪೆಷಲ್ ಜಡ್ಜ್ ಎ.ಡಿ . ಡಿಯೋ ಅವರು ಆರೋಪಿ ವಿಕಾಸ್ ಸಚ್‌ದೇವ್ ನನ್ನು ಅಪರಾಧಿ ಎಂದು ಪರಿಗಣಿ ತೀರ್ಪು ನೀಡಿದ್ದಾರೆ.
ವಿಕಾಸ್ ಸಚ್‌ದೇವ್ ಕೂಡ ಪೋಕ್ಸೊ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಶಿಕ್ಷೆಗೊಳಗಾಗಿದ್ದನು, ಏಕೆಂದರೆ ಈ ಘಟನೆ ನಡೆದಾಗ ನಟಿಗೆ 17 ವರ್ಷವಾಗಿತ್ತು. ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಮುಂದೆ ಪ್ರಕಟಿಸಲಿದೆ.
2017ರ ಡಿಸೆಂಬರ್‌ನಲ್ಲಿ ವಿಮಾನದಲ್ಲಿ ದಿಲ್ಲಿಯಿಂದ ಮುಂಬೈಗೆ ಪ್ರಯಾಣಿಸುತ್ತಿದ್ದಾಗ ಕಿರುಕುಳ ನೀಡಲಾಗಿತ್ತು ಎಂದು ನಟಿ ಆರೋಪಿಸಿದ್ದರು. ಕಣ್ಣೀರು ಹಾಕುತ್ತಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
Next Story





