ಸಾಲಿಗ್ರಾಮ ಜಾತ್ರೆ: ನಗರದ ಶುಚಿತ್ವ ಕಾಪಾಡಲು ಮನವಿ
ಉಡುಪಿ, ಜ.15: ಕೂಟ ಮಹಾಜಗತ್ತಿನ (ಕೂಟ 14 ಗ್ರಾಮಗಳ) ಅಧಿದೇವತೆ ಗುರು ನರಸಿಂಹ ಸ್ವಾಮಿಯ ಜಾತ್ರೆ ಜ.19ರವರೆಗೆ ನಡೆಯಲಿದ್ದು, ಈ ವೇಳೆ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಿ ಶುಚಿತ್ವವನ್ನು ಕಾಪಾಡಲು ಸಾಲಿಗ್ರಾಮ ಪಟ್ಟಣ ಪಂಚಾಯತ್ ಹಾಗೂ ಶ್ರೀಗುರು ನರಸಿಂಹ ದೇವಳದ ಆಡಳಿತ ಮಂಳಿ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಜಾತ್ರೆಗೆ ಸಾವಿರಾರು ಜನರು ಸೇರುವುದರಿಂದ ಯಾವುದೇ ಗೌಜು ಗದ್ದಲಗಳಿಗೆ ಎಡೆಮಾಡಬಾರದು, ಹಣ್ಣು ಕಾಯಿ ಸೇವೆಗೆ ಬಟ್ಟೆಯ ಚೀಲವನ್ನೇ ಉಪಯೋಗಿಸುವಂತೆ ಹಾಗೂ ಯಾವುದೇ ಖರೀದಿಗೂ ಬಟ್ಟೆಯ ಚೀಲವನ್ನೇ ಬಳುವಂತೆ ಆಡಳಿತ ಮಂಡಳಿ ಸೂಚಿಸಿದೆ.
ಜಾತ್ರೆಗೆ ಸಾವಿರಾರು ಜನರು ಸೇರುವುದರಿಂದ ಯಾವುದೇ ಗೌಜು ಗದ್ದಲಗಳಿಗೆ ಎಡೆಮಾಡಬಾರದು, ಹಣ್ಣು ಕಾಯಿ ಸೇವೆಗೆ ಬಟ್ಟೆಯ ಚೀಲವನ್ನೇ ಉಪಯೋಗಿಸುವಂತೆ ಹಾಗೂ ಯಾವುದೇ ಖರೀದಿಗೂ ಬಟ್ಟೆಯ ಚೀಲವನ್ನೇ ಬಳಸುವಂತೆ ಆಡಳಿತ ಮಂಡಳಿ ಸೂಚಿಸಿದೆ. ಸಾರ್ವಜನಿಕರು ಕಂಡಕಂಡಲ್ಲಿ ಉಗುಳದಂತೆ ಹಾಗೆಯೇ ಕಸವನ್ನು ಪಟ್ಟಣ ಪಂಚಾಯತ್ ನಿಗದಿಪಡಿಸಿದ ಸ್ಥಳದಲ್ಲಿಯೇ ಹಾಕುವಂತೆ ತಿಳಿಸಲಾಗಿದೆ. ಪ್ಲಾಸ್ಟಿಕ್ ಚೀಲದಲ್ಲಿ ಸರಕುಗಳನ್ನು ಕೊಡುವುದು ಮತ್ತು ಕೊಂಡು ಹೋಗುವು ದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಬಗ್ಗೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಎಲ್ಲಾ ಸಂಘ ಸಂಸ್ಥೆಗಳಿಗೆ ದೇವಸ್ಥಾನ ಆಡಳಿತ ಮಂಡಳಿ ಮನವಿ ಮಾಡಿದೆ ಎಂದು ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳ ಪ್ರಕಟಣೆ ತಿಳಿಸಿದೆ.







