ಅಸ್ವಸ್ಥಗೊಂಡಿದ್ದ ಎನ್‌ಎಂಪಿಟಿ ಸಿಬ್ಬಂದಿ ಮೃತ್ಯು
ಮಂಗಳೂರು, ಜ.15: ಪಣಂಬೂರು ಎನ್‌ಎಂಪಿಟಿಯ ಐಲ್ಯಾಂಡ್ ಶಿಪ್ಪಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೋರ್ವ ಅಸ್ವಸ್ಥಗೊಂಡು ಮೃತಪಟ್ಟ ಗಟನೆ ಬುಧವಾರ ನಡೆದಿದೆ.
ಮೂಲತಃ ದಿಲ್ಲಿಯ ಕರ್ಕರ್ ದೂಮ ಗ್ರಾಮದ ನಿವಾಸಿ ವಿಪುಲ್ ಗರ್ಗ್ (27) ಮೃತಪಟ್ಟವರು.ವಿಪುಲ್ ಗರ್ಗ್ ‘ಸೆವೆನ್ ಐಲ್ಯಾಂಡ್ ಶಿಪ್ಪಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಜ.4ರಂದು ಆಕಸ್ಮಾತ್ತಾಗಿ ಕಾಯಿಲೆಗೆ ತುತ್ತಾಗಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗರ್ಗ್ ಹಿಮೋಗ್ಲೋಬಿನ್ ಸಮಸ್ಯೆಗೆ ತುತ್ತಾಗಿದ್ದರು. ರಕ್ತದೊತ್ತಡ ಕಡಿಮೆ ಇರುವುದರಿಂದ ತೀವ್ರ ಅಸೌಖ್ಯಗೊಂಡಿದ್ದರು. ವೈದ್ಯರು ಚಿಕಿತ್ಸೆ ನೀಡಿದರೂ ಫಲಿಸದೆ ಜ.15ರಂದು ಬೆಳಗ್ಗೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮರಣಕ್ಕೆ ಕಾರಣವನ್ನು ತಿಳಿದುಕೊಳ್ಳುವ ಸಲುವಾಗಿ ಮೃತ ಶರೀರವನ್ನು ವೈದ್ಯಕೀಯ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಪಣಂಬೂರು ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಾಗಿದೆ.
Next Story





