ಜ.19: ಉದ್ಯಾವರ ಐಸಿವೈಎಂ ಸುವರ್ಣ ಮಹೋತ್ಸವ ಸಂಭ್ರಮ ಉದ್ಘಾಟನೆ

ಉಡುಪಿ, ಜ.16: ಉದ್ಯಾವರ ಸಂತ ಪ್ರಾನಿಸ್ಸ್ ಕ್ಸೇವಿಯರ್ ದೇವಾಲಯದ ಯುವ ಸಂಘಟನೆ ಭಾರತೀಯ ಕಥೋಲಿಕ್ ಯುವ ಸಂಚಾಲನ(ಐಸಿವೈಎಂ) ಇದರ ಸುವರ್ಣ ಮಹೋತ್ಸವದ ಉದ್ಘಾಟನಾ ಸಮಾರಂಭವನ್ನು ಜ.19ರಂದು ದೇವಾಲಯದ ವಠಾರದಲ್ಲಿ ಜ.19ರಂದು ಸಂಜೆ 5.15ಕ್ಕೆ ಆಯೋಜಿಸಲಾಗಿದೆ.
ಮಾಜಿ ಕೇಂದ್ರ ಸಚಿವೆ ಮಾರ್ಗರೇಟ್ ಅಳ್ವಾ ಸುವರ್ಣ ಮಹೋತ್ಸವದ ಮತುತಿ 50 ಕಾರ್ಯಕ್ರಮಗಳ ಉದ್ಘಾಟನೆಯನ್ನು ಮಾಡಲಿರುವರು. ಉಡುಪಿ ಧರ್ಮಪ್ರಾಂತ್ಯದ ಧರ್ಮಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೋ ಅಧ್ಯಕ್ಷತೆ ವಹಿಸಲಿರುವರು ಎಂದು ಸುವರ್ಣ ಮಹೋತ್ಸವದ ಸಂಚಾಲಕ ಸ್ಟೀವನ್ ಕುಲಾಸೊ ಸುದ್ದಿೋಷ್ಠಿಯಲ್ಲಿಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷ, ಕಾರ್ಯದರ್ಶಿ, ನಿರ್ದೇಶಕರು ಗಳಾಗಿ ಸೇವೆ ಸಲ್ಲಿಸಿದ್ದವವರನ್ನು ಗೌರವಿಸಲಾಗುವುದು. ಬಳಿಕ ಐಸಿವೈಎಂ ಸಂಘಟನೆಯವರಿಂದ ಗಣೇಶ್ ರಾವ್ ಎಲ್ಲೂರು ನಿರ್ದೇಶನದ ಕೊಂಕಣಿ ಹಾಸ್ಯಮಯ ನಾಟಕ ‘ಬೇವಾರಿಸ್’ ಪ್ರದರ್ಶನಗೊಳ್ಳಲಿದೆ. ಉದ್ಘಾಟನಾ ಸಮಾರಂಭಕ್ಕೆ ಪೂರ್ವಭಾವಿಯಾಗಿ ಸಂಜೆ 4ಗಂಟೆಗೆ ಉಡುಪಿ ಧರ್ಮ ಪ್ರಾಂತ್ಯದ ಧರ್ಮಧ್ಯಕ್ಷರ ನೇತೃತ್ವದಲ್ಲಿ ದಿವ್ಯ ಬಲಿಪೂಜೆ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಐಸಿವೈಎಂ ಅಧ್ಯಾತ್ಮಿಕ ನಿರ್ದೇಶಕ ಫಾ.ಸ್ಟಾನಿ ಬಿ.ಲೋಬೊ, ಪ್ರಧಾನ ಕಾರ್ಯದರ್ಶಿ ಡೋರಾ ಅರೋಜಾ, ಸಮಿತಿಯ ವಿಲ್ಫ್ರೇಡ್ ಡಿಸೋಜ, ಜೆರಾಲ್ಡ್ ಪಿರೇರಾ, ಮಾರ್ವಿನ್ ಡಿಅಲ್ಮೇಡಾ ಉಪಸ್ಥಿತರಿದ್ದರು.







