Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ‘ಪರಿಸರ ಸ್ನೇಹಿ, ಪ್ಲಾಸ್ಟಿಕ್‌ಮುಕ್ತ...

‘ಪರಿಸರ ಸ್ನೇಹಿ, ಪ್ಲಾಸ್ಟಿಕ್‌ಮುಕ್ತ ಪರ್ಯಾಯಕ್ಕೆ ಕ್ಷಣಗಣನೆ ಆರಂಭ’

ವಾರ್ತಾಭಾರತಿವಾರ್ತಾಭಾರತಿ16 Jan 2020 9:30 PM IST
share
‘ಪರಿಸರ ಸ್ನೇಹಿ, ಪ್ಲಾಸ್ಟಿಕ್‌ಮುಕ್ತ ಪರ್ಯಾಯಕ್ಕೆ ಕ್ಷಣಗಣನೆ ಆರಂಭ’

ಉಡುಪಿ, ಜ.16: ಅದಮಾರು ಮಠದ ಶ್ರೀಈಶಪ್ರಿಯ ತೀರ್ಥರ ಚೊಚ್ಚಲ ಶ್ರೀಕೃಷ್ಣ ಮಠದ ದ್ವೈವಾರ್ಷಿಕ ಪರ್ಯಾಯ ಮಹೋತ್ಸವಕ್ಕೆ ಕ್ಷಣಗಣನೆ ಪ್ರಾರಂಭಗೊಂಡಿದ್ದು, ಈ ಬಾರಿಯ ಉಡುಪಿಯ ನಾಡಹಬ್ಬ ಪರಿಸರ ಸ್ನೇಹಿ ಹಾಗೂ ಸಂಪೂರ್ಣ ಫ್ಲಾಸ್ಟಿಕ್‌ ಮುಕವಾಗಿರುತ್ತದೆ ಇದಕ್ಕಾಗಿ ಉಡುಪಿ ನಗರ ಸರ್ವರೀತಿಯಲ್ಲೂ ಸಜ್ಜುಗೊಂಡಿದ್ದು, ಕೊನೆಯ ಹಂತದ ಸಿದ್ಧತೆಗಳು ನಡೆಯುತ್ತಿವೆ ಎಂದು ಶ್ರೀಕೃಷ್ಣ ಸೇವಾ ಬಳಗದ ಗೌರವಾಧ್ಯಕ್ಷ ಹಾಗೂ ಉಡುಪಿ ಶಾಸಕ ಕೆ.ರಘುಪತಿ ಭಟ್ ಹೇಳಿದ್ದಾರೆ.

ಗುರುವಾರ ಅದಮಾರು ಮಠದಲ್ಲಿ ಪರ್ಯಾಯ ಆಯೋಜಕರ ವತಿಯಿಂದ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರ್ಯಾಯ ಮಹೋತ್ಸವ ಆಯೋಜನೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿರುವ ಶ್ರೀಕೃಷ್ಣಾ ಸೇವಾ ಬಳಗ ಈಗಾಗಲೇ ಹಲವಾರು ಪೂರ್ವಭಾವಿ ಸಭೆಗಳನ್ನು ನಡೆಸಿ ಸಾಕಷ್ಟು ವ್ಯವಸ್ಥೆಗಳನ್ನು ಮಾಡಿಕೊಂಡಿದೆ. ಲಕ್ಷಾಂತರ ಭಕ್ತಾದಿಗಳು ಉಡುಪಿಗೆ ಬರುವ ಸಂದರ್ಭದಲ್ಲಿ ಅವರಿಗೆ ಒದಗಿಸಲಾಗುವ ಮೂಲಭೂತ ಸೌಕರ್ಯಗಳ ಬಗ್ಗೆ ಜಿಲ್ಲಾಡಳಿತ ಮಟ್ಟದಲ್ಲಿ ಸಭೆಗಳಾಗಿವೆ. ನೂತನ ಪೊಲೀಸ್ ವರಿಷ್ಠಾಧಿಕಾರಿಯವರು ಈಗಾಗಲೇ ಸುರಕ್ಷೆ, ವಾಹನ ನಿಲುಗಡೆ, ವಾಹನಗಳ ಒಡಾಟ ಇತ್ಯಾದಿಗಳ ಬಗ್ಗೆ ನೀಲನಕಾಶೆಯನ್ನು ಸಿದ್ಧಗೊಳಿಸಿ ಶ್ರೀಕೃಷ್ಣಾ ಸೇವಾ ಬಳಗಕ್ಕೆ ನೀಡಿದ್ದಾರೆ ಎಂದರು.

ಈಗಾಗಲೇ ನಗರದ ಪ್ರಮುಖ ರಸ್ತೆ ಹಾಗೂ ಬೀದಿಗಳ ಸಂಪೂರ್ಣ ಡಾಮರೀಕರಣ ಮಾಡಲಾಗಿದೆ. ನಗರದೊಳಗಿನ ಎಲ್ಲಾ ಬೀದಿದೀಪಗಳನ್ನು ಸರಿಪಡಿಸಲಾಗಿದೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾ ಗಿದೆ. ಇದಕ್ಕಾಗಿ ಹೆಚ್ಚುವರಿ ಪೌರ ಕಾರ್ಮಿಕರನ್ನು ನೇಮಿಸಲಾಗಿದೆ. ಈ ಬಾರಿಯ ಪರ್ಯಾಯ ಪರಿಸರ ಸ್ನೇಹಿ ಹಾಗೂ ಫ್ಲಾಸ್ಟಿಕ್‌ಮುಕ್ತವಾಗಿರಬೇಕೆನ್ನುವುದು ಅದಮಾರುಶ್ರೀಗಳ ಆಶಯವಾದ ಹಿನ್ನೆಲೆಯಲ್ಲಿ ಇದನ್ನು ಪೂರ್ಣರೀತಿಯಲ್ಲಿ ಅನುಷ್ಠಾನಗೊಳಿಸಲು ಬಳಗ ಶ್ರಮಿಸುತ್ತಿದೆ ಎಂದು ರಘುಪತಿ ಭಟ್ ತಿಳಿಸಿದರು.

ಪರ್ಯಾಯ ಮೆರವಣಿಗೆ ಜ.18ರ ಬೆಗಿನ ಜಾವ 2:00ಗಂಟೆಗೆ ಜೋಡುಕಟ್ಟೆ ಬಳಿಯಿಂದ ಪ್ರಾರಂಭಗೊಳ್ಳಲಿದೆ. ಮೆರವಣಿಗೆ ಈ ಹಿಂದಿನಂತೆ ಹಳೆ ಅಂಚೆಕಚೇರಿ, ತೆಂಕುಪೇಟೆ ಮೂಲಕ ಸಾಗಲಿದೆ. ಮೆರವಣಿಗೆ ಸಾಗುವ ರಸ್ತೆಯನ್ನು ಸಂಪೂರ್ಣ ಡಾಮರೀಕರಣ ಗೊಳಿಸಲಾಗಿದೆ. ಸುಮಾರು 400 ಕಂಬಗಳಲ್ಲಿ 800 ಗೂಡು ದೀಪಗಳನ್ನು ಸಾಲು ಸಾಲಾಗಿ ಜೋಡಿಸಲಾಗಿದೆ ಎಂದರು.

ಈ ಬಾರಿ ಮೆರವಣಿಗೆಯ ಕ್ರಮದಲ್ಲಿ ಕೆಲವು ಬದಲಾವಣೆ ಮಾಡಿ ಕೊಳ್ಳಲಾಗಿದೆ. ಮೊದಲಿಗೆ ವಿವಿಧ ಬಿರುದಾವಳಿಗಳು, ಜಾನಪದ ತಂಡಗಳ ನಂತರ ಕಾಲ್ನಡಿಗೆಯಲ್ಲಿ ಚಲಿಸುವ ವಿವಿಧ ತಂಡಗಳಿರುತ್ತವೆ. ಬಳಿಕ ಪರ್ಯಾಯ ಪೀಠವನ್ನೇರುವ ಅದಮಾರು ಶ್ರೀಗಳು ಮೇನೆಯಲ್ಲಿ ಬರಲಿದ್ದು, ನಂತರ ಅಷ್ಟಮಠಗಳ ಸ್ವಾಮೀಜಿಗಳು ಶಿಷ್ಟಾಚಾರದಂತೆ ಸರದಿ ಪ್ರಕಾರ ಅವರ ಇಷ್ಟದ ಆಯ್ಕೆಯಲ್ಲಿ ಬರಲಿದ್ದಾರೆ. ಕೊನೆಯಲ್ಲಿ ವೈವಿಧ್ಯಮಯ ಟ್ಯಾಬ್ಲೋಗಳು ಬರಲಿವೆ ಎಂದು ಅವರು ನುಡಿದರು.

ಈ ಬಾರಿಯ ಪರ್ಯಾಯ ಮೆರವಣಿಗೆಯಲ್ಲಿ ಒಟ್ಟು ಸುಮಾರು 100 ತಂಡಗಳು ಭಾಗವಹಿಸಲಿವೆ. ಮೊದಲ ಬಾರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಿಂದ ಹದಿನೈದು ಜಾನಪದ ತಂಡಗಳು ಉಡುಪಿಗೆ ಬರಲಿವೆ. ಸರಕಾರಿ ಇಲಾಖೆಗಳಿಂದ- ನಗರಸಭೆ, ಕೃಷಿ ಇಲಾಖೆ, ಪ್ರವಾಸೋದ್ಯಮ, ಜಿಪಂ, ಲೋಕೋಪಯೋಗಿ ಇಲಾಖೆ- ಸಾಮಾಜಿಕ ಸಂದೇಶಗಳನ್ನು ಸಾರುವ ಆರು ಟ್ಯಾಬ್ಲೊಗಳು ಪರ್ಯಾಯ ಮೆರವಣಿಗೆಯಲ್ಲಿ ಭಾಗವಹಿಸಲಿವೆ.

ಇದರೊಂದಿಗೆ ಶ್ರೀಕೃಷ್ಣ ಸೇವಾ ಬಳಗದ ಉಸ್ತುವಾರಿಯಲ್ಲಿ ಪೌರಾಣಿಕ, ಜಾನಪದೀಯ, ಸಾಮಾಜಿಕ ಸಂದೇಶ ಸಾರುವ ವಿವಿಧ ಟ್ಯಾಬ್ಲೋಗಳಿರುತ್ತವೆ. ಪೂರ್ಣಕುಂಭ, ಬಿರುದಾವಳಿ, ಗೊಂಬೆ ತಂಡಗಳು, ಚಂಡೆ ಬಳಗ, ಪಂಚವಾದ್ಯಗಳೊಂದಿಗೆ ವಿವಿಧ ವಾದ್ಯಗಳ ತಂಡಗಳೂ, ಕಲಾಪ್ರಕಾರಗಳೂ ಮೆರವಣಿಗೆಯಲ್ಲಿ ಸಾಗಿ ಬರಲಿವೆ.

ಪರ್ಯಾಯದಲ್ಲಿ ಭಾಗಿಯಾಗಲು ಬರುವವರಿಗಾಗಿ ಮೂಲಭೂತ ಸೌಕರ್ಯಗಳಾದ ಸ್ವಚ್ಛತೆ, ಕುಡಿಯುವ ನೀರಿನ ನಿರಂತರ ಸರಬರಾಜು ವ್ಯವಸ್ಥೆ, ಪ್ರವಾಸಿಗಳಿಗೆ ಮತ್ತು ಕಲಾವಿದರಿಗೆ ವಸತಿ ವ್ಯವಸ್ಥೆ ಸಹ ಮಾಡಲಾಗಿದೆ. ಜಿಲ್ಲೆಯ ವಿವಿಧ ಸಂಘಟನೆಗಳ ಮೂಲಕ ಸುಮಾರು 1,200ಕ್ಕೂ ಅಧಿಕ ಸ್ವಯಂ ಸೇವಕರು ರಾತ್ರಿ ಹಗಲು ಕೆಲಸ ಮಾಡಲು ಸರ್ವಸನ್ನದ್ದರಾಗಿದ್ದಾರೆ. ರಾಜಾಂಗಣದ ಕಾರು ಪಾರ್ಕಿಂಗ್ ಸಮೀಪ ಸುಮಾರು ಒಂದುವರೆ ಎಕರೆ ಸ್ಥಳದಲ್ಲಿ ಬರುವವರಿಗೆ ಊಟಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ಜ.17ರ ರಾತ್ರಿ 7ಗಂಟೆಯಿಂದ 11ಗಂಟೆಯವರೆಗೆ ಸುಮಾರು 35ರಿಂದ 40 ಸಾವಿರ ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಿದ್ದರೆ, 18ರಂದು ಬೆಳಗ್ಗೆ 10:30ರಿಂದ ಸುಮಾರು 40ಸಾವಿರಕ್ಕೂ ಹೆಚ್ಚು ಭಕ್ತರು ಅನ್ನಪ್ರಸಾದ ಸ್ವೀಕಾರ ಮಾಡಲಿದ್ದಾರೆ. ಅನ್ನಪ್ರಸಾದ ವಿತರಣೆಗೆ ಸ್ವಯಂಸೇವಾ ಪದ್ಧತಿ ಮತ್ತು ಕುಳಿತು ಸೇವಿಸಲು ಎರಡು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಇವುಗಳಿಗೆ ಅನ್ನ ಕೃಷ್ಣ ಹಾಗೂ ಪ್ರಸಾದ ಸೇವನೆ ಅನ್ನಪ್ರಜ್ಞಾ ಎಂದು ಹೆಸರಿಸಲಾಗಿದೆ ಎಂದವರು ನುಡಿದರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀಕೃಷ್ಣ ಸೇವಾ ಬಳಗದ ಗೋವಿಂದರಾಜ್, ಪ್ರದೀಪ್ ರಾವ್, ಚೈತನ್ಯ ಎಂ.ಜಿ., ಸಂತೋಷ್ ಉದ್ಯಾವರ, ಡಾ.ಜಗದೀಶ್ ಶೆಟ್ಟಿ, ಸುಬ್ರಹ್ಮಣ್ಯ ಮಾರ್ಪಳ್ಳಿ, ದಿನೇಶ್ ಪುತ್ರನ್ ಮುಂತಾದವರು ಉಪಸ್ಥಿತರಿದ್ದರು.

ತುಳಸಿ ಬೀಜಯುಕ್ತ ದರ್ಬಾರ್ ಪಾಸ್

ಈ ಬಾರಿ ಪರ್ಯಾಯ ಪೀಠಾರೋಹಣದ ಬಳಿಕ ಜ.18ರ ಶನಿವಾರ ಅಪರಾಹ್ನ 2:30ಕ್ಕೆ ರಾಜಾಂಗಣದ ಶ್ರೀನರಹರಿ ತೀರ್ಥ ವೇದಿಕೆಯಲ್ಲಿ ನಡೆಯುವ ಪರ್ಯಾಯ ದರ್ಬಾರ್ ಪ್ರವೇಶಕ್ಕೆ ನೀಡಲಾಗುವ ದರ್ಬಾರ್ ಪಾಸ್‌ಗಳು ಪರಿಸರ ಸ್ನೇಹಿಯಾಗಿದ್ದು, ಅದರಲ್ಲಿ ತುಳಸಿ ಗಿಡದ ಬೀಜಗಳನ್ನು ಅಳವಡಿಸಲಾಗಿದೆ.

ಈ ಪಾಸ್‌ಗಳನ್ನು ಉಪಯೋಗಿಸಿದ ಬಳಿಕ ಮನೆಗೆ ಒಯ್ದು ನೀರಿಗೆ ಹಾಕಿದಾಗ, ಅದರಿಂದ ತುಳಸಿ ಬೀಜಗಳು ಹೊರಬಂದು ಹಿತ್ತಲಲ್ಲಿ ಚೆಲ್ಲಿದರೆ ಅದರಿಂದ ತುಳಸಿ ಹಾಗೂ ಇತರ ಗಿಡಗಳು ಚಿಗುರಲಿವೆ ಎಂದು ಬಳಗದ ಗೋವಿಂದರಾಜ್ ತಿಳಿಸಿದರು.

ಬಣ್ಣದ ದೀಪಗಳಿಂದ ಕಂಗೊಳಿಸುತ್ತಿರುವ ಉಡುಪಿ

ಪರ್ಯಾಯ ಮಹೋತ್ಸವಕ್ಕಾಗಿ ಉಡುಪಿ ನಗರವೆಲ್ಲ ಬೃಹತ್ ಗಾತ್ರದ ಸ್ವಾಗತ ಕಮಾನು, ಬಣ್ಣ ಬಣ್ಣದ ವೈವಿದ್ಯಮಯ ಗೂಡು ದೀಪ ಹಾಗೂ ಕಟ್ಟಡಗಳೆಲ್ಲವೂ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ಸಜ್ಜಾಗಿ ನಿಂತಿವೆ.

ಶ್ರೀಕೃಷ್ಣ ಮಠದ ಪರಿಸರ, ಅದರ ನಾಲ್ಕೂ ಸುತ್ತುಗಳು, ರಥಬೀದಿ ಬಣ್ಣ ಬಣ್ಣದ ದೀಪಗಳಿಂದ ಕಣ್ಮನಗಳಿಗೆ ಆಕರ್ಷಣೀಯವಾಗಿ ಕಾಣಿಸುತ್ತಿದೆ. ಇವುಗಳನ್ನು ಕಣ್ಣಾರೆ ಕಾಣಲು ಜನರು ಗುಂಪು ಗುಂಪಾಗಿ ಬೀದಿಗಳನ್ನು ಸುತ್ತುತಿದ್ದಾರೆ.

ಉಡುಪಿಯಲ್ಲೀಗ ಭಾರೀ ಸಂಖ್ಯೆಯಲ್ಲಿ ಹೊರರಾಜ್ಯಗಳು ಹಾಗೂ ವಿದೇಶಿ ಪ್ರವಾಸಿಗರು ಆಗಮಿಸಿದ್ದು, ಹೊರ ಜಿಲ್ಲೆಗಳಿಂದ ಪ್ರವಾಸಿಗಳು ಸಹ ಆಗಮಿಸಿದ್ದಾರೆ. ಜ.17ರ ರಾತ್ರಿಗಾಗಿ ಇವರೆಲ್ಲವೂ ಕಾತರದಿಂದ ಕಾಯುತಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X