ಆನ್ಲೈನ್ ಮೂಲಕ ಮಹಿಳೆಗೆ ವಂಚನೆ: ದೂರು
ಉಡುಪಿ, ಜ.16: ಮಹಿಳೆಯೊಬ್ಬರು ಉದ್ಯೋಗಾಕಾಂಕ್ಷೆಯಿಂದ ಆನ್ ಲೈನ್ನಲ್ಲಿ ಲಕ್ಷಾಂತರ ರೂ. ಹಣ ಪಾವತಿಸುವ ಮೂಲಕ ಮೋಸ ಹೋಗಿರುವ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ ಶಿರ್ವಾಸೆ ಹುರ್ಮಲಕಟ್ಟೆಯ ಉದಯ ಎಂಬವರ ಪತ್ನಿ ಶಕಿಲಾ (27) ಎಂಬವರ ಮೊಬೈಲ್ಗೆ ಜೂ.21ರಂದು ಶೈನ್ ಡಾಟ್ ಕಾಮ್ ಎಂಬ ಕಂಪೆನಿಯಿಂದ ಸಂದೇಶ ಬಂದಿದ್ದು, ಅದನ್ನು ಆಧರಿಸಿ ಅವರು ಉದ್ಯೋಗಕಾಂಕ್ಷೆಯಿಂದ ಅವರ ಶಾಲಾ ದಾಖಲಾತಿಗಳನ್ನು, ಆಧಾರ್ ಕಾರ್ಡ್, ಪಾಸ್ಪೋರ್ಟ್, ಪಾನ್ಕಾರ್ಡ್ ಪ್ರತಿಗಳನ್ನು ಆನ್ಲೈನ್ ಮೂಲಕ ಕಂಪೆನಿಯ ಇಮೈಲ್ಗೆ ಕಳುಹಿಸಿದ್ದರು. ನಂತರ ಅವರು ಗೂಗಲ್ಪೇ ವಿವಿಧ ಶುಲ್ಕವಾಗಿ ಒಟ್ಟು 2,69,500ರೂ. ವರ್ಗಾಯಿಸಿದ್ದರು. ಆದರೆ ಬಳಿಕವೂ ಉದ್ಯೋಗ ದೊರಕದೆ, ಮೋಸ ಹೋಗಿ, ಹಣವನ್ನು ಕಳೆದುಕೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
Next Story