Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಡ್ಯಾಂ ನೀರು ಹರಿಸಿ ಜಲಪಾತೋತ್ಸವದ...

ಡ್ಯಾಂ ನೀರು ಹರಿಸಿ ಜಲಪಾತೋತ್ಸವದ ಅಗತ್ಯವಿದೆಯೇ ?

ಗಗನಚುಕ್ಕಿ ಜಲಪಾತೋತ್ಸವಕ್ಕೆ ಭಾರಿ ವಿರೋಧ

ಕುಂಟನಹಳ್ಳಿ ಮಲ್ಲೇಶಕುಂಟನಹಳ್ಳಿ ಮಲ್ಲೇಶ17 Jan 2020 11:43 PM IST
share
ಡ್ಯಾಂ ನೀರು ಹರಿಸಿ  ಜಲಪಾತೋತ್ಸವದ ಅಗತ್ಯವಿದೆಯೇ ?

ಮಂಡ್ಯ, ಜ.17: ಜಿಲ್ಲೆಯ ರೈತರ ಜೀವನಾಡಿ ಕೆಆರ್‍ಎಸ್ ಜಲಾಶಯದಿಂದ ದೊಡ್ಡ ಪ್ರಮಾಣದ ನೀರು ಹರಿಸಿ ಗಗನಚುಕ್ಕಿ ಜಲಪಾತೋತ್ಸವವನ್ನು ಯಾವ ಪುರುಷಾರ್ಥಕ್ಕೆ ಆಚರಣೆ ಮಾಡಲಾಗುತ್ತಿದೆ? ಎಂಬುದಾಗಿ ಸಾಮಾಜಿಕ ಹೋರಾಟಗಾರ ಷಣ್ಮುಖೇಗೌಡ ಪ್ರಶ್ನಿಸಿದ್ದಾರೆ.

ಹೌದು, “ದಿನದ ಕೂಳಿಗೆ ವರ್ಷದ ಕೂಳು ಕಳೆದುಕೊಂಡರು” ಎಂಬ ಗಾದೆಯಂತಾಗಿದೆ ಮಂಡ್ಯದ ರೈತಾಪಿ ಜನರ ಸ್ಥಿತಿ. ಹಾಗಾಗಿ, ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಮಂಡ್ಯ ಜಿಲ್ಲಾಡಳಿತ ಮಳವಳ್ಳಿ ತಾಲೂಕಿನ ಶಿವನಸಮುದ್ರದ ಬಳಿ ಜ.18 ಮತ್ತು 19 ರಂದು ಆಯೋಜಿಸಿರುವ ಗಗನಚುಕ್ಕಿ ಜಲಪಾತೋತ್ಸವಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

ಸತತ ಬರದಿಂದ ತತ್ತರಿಸಿದ್ದ ಜಿಲ್ಲೆಯ ರೈತರು ಈ ವರ್ಷ ತಡವಾಗಿಯಾದರೂ ಅದ್ಧೂರಿಯಾಗಿ ಸುರಿದ ಮಳೆಯಿಂದ ಜೀವನಾಡಿ ಕೆಆರ್‍ಎಸ್ ಜಲಾಶಯ ತುಂಬಿ ತುಳುಕಿ ಅಷ್ಟೋಇಷ್ಟೋ ಭತ್ತದ ಫಸಲು ತೆಗೆದಿದ್ದಾರೆ. ಇನ್ನೂ ಬೆಳೆದು ನಿಂತಿರುವ ಕಬ್ಬು, ಹಿಪ್ಪುನೇರಳೆ ಮತ್ತು ರಾಸುಗಳ ಮೇವು ಬೆಳೆಗೆ ನೀರು ಅವಶ್ಯಕತೆ ಇದೆ. ಇದಲ್ಲದೆ ಮಂಡ್ಯ, ಮೈಸೂರು ಜಿಲ್ಲೆ ಸೇರಿದಂತೆ ರಾಜಧಾನಿ ಬೆಂಗಳೂರಿಗೆ ದಿನನಿತ್ಯದ ಕುಡಿಯುವ ನೀರು ಪೂರೈಸುವುದೂ ಈ ಜಲಾಶಯವೇ. ಸದ್ಯ ಜಲಾಶಯದಲ್ಲಿ ಇರುವ ನೀರು, ಇರುವ ಬೆಳೆಗಳ ಉಳಿವು ಮತ್ತು ಕುಡಿಯುವ ಅಗತ್ಯಕ್ಕೆ ಬೇಕು.

ಈಗಾಗಲೇ ನಾಲೆಗಳಿಗೆ ನೀರು ಹರಿಸಿ ತಿಂಗಳಾಗುತ್ತಾ ಬಂದಿದೆ. ಇರುವ ಬೆಳೆಗಳು ಒಣಗುತ್ತಿವೆ. ನೀರು ಹರಿಸದೇ ಇರುವುದರಿಂದ ಬಹಳಷ್ಟು ಕೆರೆಗಳು ಬಣಗುಡುತ್ತಿವೆ. ಇರುವ ಸಣ್ಣಪುಟ್ಟ ಕೆರೆಕಟ್ಟೆಗಳ ನೀರು ಖಾಲಿಯಾಗುತ್ತಿದ್ದು, ಜನಜಾನುವಾರುಗಳ ಕುಡಿಯುವ ನೀರಿಗೂ ತತ್ವಾರ ಒದಗುವ ಸಂಭವವಿದೆ.
ಈ ಬಗ್ಗೆ ಚಿಂತಿಸಬೇಕಾದ ಜಿಲ್ಲಾಡಳಿತ, ಸರಕಾರ ಕೆಲವೇ ಜನರ ತೃಪ್ತಿಗೆ ಡ್ಯಾಂನಿಂದ ನೀರು ಹರಿಸಿ ಉತ್ಸವ ಮಾಡುತ್ತಿದೆ. ಮತ್ತೊಂದೆಡೆ ಸಾರ್ವಜನಿಕ ವಲಯ ಇದಕ್ಕೆ ತೀವ್ರ ವಿರೋಧ ಮಾಡುತ್ತಿದೆ. ಜನರ ಕೂಗಿಗೆ ಸ್ಪಂದಿಸಬೇಕಾದ ಜನಪ್ರತಿನಿಧಿಗಳೆನಿಸಿಕೊಂಡವರು ಮೌನವಾಗಿದ್ದಾರೆ.

ಅಮೂಲ್ಯ ಜೀವಜಲವನ್ನು ಜಲಪಾತೋತ್ಸವ ನೆಪದಲ್ಲಿ ಕೇವಲ ಎರಡು ದಿನದ ಮೋಜಿನ ಕಾರ್ಯಕ್ರಮಕ್ಕೆ ಪೋಲು ಮಾಡುವುದು ಜನೋದ್ಧಾರದ ಕಾರ್ಯಕ್ರಮವಲ್ಲ. ಎರಡು ದಿನ ಜಲಪಾತೋತ್ಸವ ಆಚರಿಸಿದ ಮಾತ್ರಕ್ಕೆ ಪ್ರವಾಸೋದ್ಯಮ ಅಭಿವೃದ್ಧಿಯಾಗಿಬಿಡುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
 ಜಲಪಾತೋತ್ಸವಕ್ಕೆ ಕೇವಲ ನೀರು ವ್ಯಯವಾಗುವುದು ಮಾತ್ರವಲ್ಲ. ಸುಮಾರು ಒಂದು ಕೋಟಿ ರೂ. ವ್ಯಯಿಸಲಾಗುತ್ತಿದೆ.  ಈ ಹಣದಲ್ಲಿ ಗಗನಚುಕ್ಕಿ ಪ್ರದೇಶದಲ್ಲಿ ಪ್ರವಾಸಿಗರಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಿದರೆ ಪ್ರವಾಸಿಗರು ವರ್ಷಪೂರ್ತಿ ಬರುತ್ತಾರೆ. ಪ್ರವಾಸೋದ್ಯಮವೂ ಬೆಳೆಯುತ್ತದೆ ಎಂಬುದು ಸಾರ್ವಜನಿಕರ ಅಭಿಲಾಷೆ.

‘ಡ್ಯಾಂನಿಂದ ತಮಿಳುನಾಡಿಗೆ ನೀರು ಬಿಡುತ್ತಿಲ್ಲವೆನ್ನಲಾಗುತ್ತಿದೆ. ಹಾಗಾದರೆ, ಜಲಪಾತೋತ್ಸವ ದಾಟಿ ಹೋಗುವ ನೀರು ಇನ್ನೆಲ್ಲಿಗೆ ತಲುಪುತ್ತದೆ? ತಮಿಳುನಾಡಿನ ಮೆಟ್ಟೂರು ಜಲಾಶಯಕ್ಕೆ ತಾನೆ?’

-ಎಂ.ಬಿ.ನಾಗಣ್ಣಗೌಡ, ಹೋರಾಟಗಾರ.

‘ಜಲಪಾತೋತ್ಸವಕ್ಕೆ ಡ್ಯಾಂ ನೀರು ಬಳಸಿಕೊಳ್ಳುತ್ತಿಲ್ಲ, ಲೀಕೇಜ್ ನೀರಿನ್ನಲ್ಲಷ್ಟೇ ಆಚರಿಸಲಾಗುವುದು ಎಂದು ಡಿಸಿ ಡಾ.ವೆಂಕಟೇಶ್, ಮಳವಳ್ಳಿ ಶಾಸಕ ಡಾ.ಅನ್ನದಾನಿ ಸಮಜಾಯಿಸಿ ನೀಡಿದ್ದಾರೆ. ಲೀಕೇಜ್ ನೀರು ಹರಿಯುತ್ತಿದ್ದರೆ ಗಗನಚುಕ್ಕಿ ತುಂಬಿ ಹರಿಯಬೇಕಿತ್ತಲ್ಲವೆ? ನಾಲ್ಕು ಟಿಎಂಸಿ ನೀರು ಲೀಕೇಜ್ ಆಗುತ್ತದೆ ಎಂಬುದು ಮೂರ್ಖನತ. ಜತೆಗೆ, ತಿಂಗಳಿಂದಲೂ ನಾಲೆಗಳಿಗೆ ನೀರು ಹರಿಸಿಲ್ಲದಿರುವುದರಿಂದ ಸುಮಾರು 4 ಟಿಎಂಸಿ ನೀರು ಲೀಕೇಜ್ ಆಗುವುದಿಲ್ಲ ಎಂಬುದು ವಾಸ್ತವ’.

-ಪ್ರೊ.ಹುಲ್ಕೆರೆ ಮಹದೇವ, ಚಿಂತಕರು.

share
ಕುಂಟನಹಳ್ಳಿ ಮಲ್ಲೇಶ
ಕುಂಟನಹಳ್ಳಿ ಮಲ್ಲೇಶ
Next Story
X