Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಕನ್ನಡ ಕಾವ್ಯದ ‘ಮೊಗಸಾಲೆ’ಯಲ್ಲಿ....

ಕನ್ನಡ ಕಾವ್ಯದ ‘ಮೊಗಸಾಲೆ’ಯಲ್ಲಿ....

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ19 Jan 2020 6:29 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಕನ್ನಡ ಕಾವ್ಯದ ‘ಮೊಗಸಾಲೆ’ಯಲ್ಲಿ....

ನಾ.ಮೊಗಸಾಲೆ ಹೆಸರಿಗೆ ತಕ್ಕಂತೆಯೇ ಮೊಗಸಾಲೆಯೇ ಸರಿ. ಸಾಹಿತ್ಯದ ಮನೆಯ ಮೊಗಸಾಲೆ ಅವರು. ಆ ಮೊಗಸಾಲೆಯ ಮೂಲಕ ಹತ್ತು ಹಲವು ಪ್ರತಿಭೆಗಳು ಅರಳಿವೆ. ನಾಡಿನ ಪ್ರತಿಷ್ಠಿತ ಪ್ರಶಸ್ತಿ ‘ಮುದ್ದಣ ಕಾವ್ಯ ಪ್ರಶಸ್ತಿ’ಯ ಹಿಂದೆ ಇವರಿದ್ದಾರೆ. ಈ ಪ್ರಶಸ್ತಿಯ ಮೂಲಕ ಹೊರಹೊಮ್ಮಿದ ಹಲವಾರು ಪ್ರತಿಭಾವಂತ ಕವಿಗಳಿದ್ದಾರೆ. ಸ್ವತಃ ಸಾಹಿತಿಯಾಗಿ ಸೃಜನಶೀಲ ಬರಹಗಳನ್ನು ಬರೆಯುತ್ತಾ, ಸಾಹಿತ್ಯಕವಾದ ಚಟುವಟಿಕೆಗಳಿಗೆ ತಮ್ಮನ್ನು ತಾವು ಮೊಗಸಾಲೆಯಾಗಿ ಪರಿವರ್ತಿಸಿಕೊಂಡ ಇವರ ಬದುಕಿನ ಬೇರೆ ಬೇರೆ ಮಗ್ಗುಲುಗಳ ಕಡೆಗೆ ಬೆಳಕು ಚೆಲ್ಲುವ ಕೃತಿ ‘ಮೊಗಸಾಲೆ-ಎಪ್ಪತ್ತೈದರ ಹೊತ್ತಿಗೆ’. ಹಿರಿಯ ವಿಮರ್ಶಕ ಡಾ. ಬಿ. ಜನಾರ್ದನ ಭಟ್ ಈ ಕೃತಿಯನ್ನು ಸಂಪಾದಿಸಿದ್ದಾರೆ. ಮೊಗಸಾಲೆಯವರ ಕುರಿತಂತೆ ನಾಡಿನ ಹಿರಿಯ ಚಿಂತಕರು, ಸಾಹಿತಿಗಳು ಇಲ್ಲಿ ಬರೆದಿದ್ದಾರೆ. ಅವರ ಸಾಹಿತ್ಯ, ಬರಹ, ಚಿಂತನೆ, ಚಟುವಟಿಕೆಗಳನ್ನು ವಿವರವಾಗಿ ನೀಡಿದ್ದಾರೆ.

  ಕೃತಿಯನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ಮೊಗಸಾಲೆ ಅವರ ಚಟುವಟಿಕೆಗಳ ಬಹು ವಿಸ್ತಾರವಾದ ವಿವಿಧ ಕ್ಷೇತ್ರಗಳನ್ನು ಪರಿಚಯಿಸಲು ಈ ವಿಂಗಡನೆ ಅನುಕೂಲವಾಗಿದೆ. ನುಡಿ ಹೆಜ್ಜೆ ವಿಭಾಗದಲ್ಲಿ ಡಾ. ಪುಂಡಿಕಾಯ್ ಗಣಪಯ್ಯ ಭಟ್, ಬಸವರಾಜ ಕಲ್ಗುಡಿ, ಬೆಳಗೋಡು ರಮೇಶ ಭಟ್, ಅಂಶುಮಾಲಿ, ತಾಳ್ತಜೆ ವಸಂತ ಕುಮಾರ್, ಡಾ. ಆಶಾದೇವಿ, ಉಪೇಂದ್ರ ಸೋಮಯಾಜಿ, ಸುಬ್ರಾಯ ಚೊಕ್ಕಾಡಿಯಂತಹ ಹಿರಿಯರು ಬರೆದಿದ್ದಾರೆ. ಅವರ ಕಥನ ಲೋಕ, ಸಾಹಿತ್ಯ ಪ್ರಸ್ತುತತೆ, ಕಾದಂಬರಿ ಲೋಕ, ಕಾವ್ಯ ಲೋಕ, ಸಣ್ಣ ಕತೆಗಳು ಇತ್ಯಾದಿಗಳ ಬಗ್ಗೆ ಇಲ್ಲಿ ವಿವರವಾದ ಬರಹಗಳಿವೆ. ‘ಕನ್ನಡದ ವಿಶಿಷ್ಟ ಲೌಕಿಕ ಕಥನಕಾರ ಮೊಗಸಾಲೆ’, ‘ಮೊಗಸಾಲೆ-ವಾಮನನಿಂದ ತ್ರಿವಿಕ್ರಮ’, ‘ಮೊಗಸಾಲೆಯವರ ಕಾದಂಬರಿಗಳು’, ‘ಅಸ್ಮಿತೆಯ ಶೋಧದ ಬಯಲ ಬೆಟ್ಟ’ ಮೊದಾದ ಬರಹಗಳು ಗಮನಾರ್ಹವಾಗಿವೆ.

 ‘ಸಂಘ ಜಂಗಮ’ ವಿಭಾಗದಲ್ಲಿ ಸಂಘಟಕರಾಗಿ ಅವರು ಕಾಂತಾವರವನ್ನು ರಾಜ್ಯಮಟ್ಟಕ್ಕೆ ತಲುಪಿಸಿದ ಪರಿಯನ್ನು ವಿವಿಧ ಲೇಖಕರು ವಿವರಿಸಿದ್ದಾರೆ. ಹೇಗೆ ಒಂದು ಮರವಾಗಿ ಅವರು ಕನ್ನಡದ ಸೃಜನಶೀಲ ಹಕ್ಕಿಗಳಿಗೆ ಆಶ್ರಯ ನೀಡಿದರು ಎನ್ನುವುದನ್ನು ಈ ಭಾಗ ವಿವರಿಸುತ್ತದೆ. ‘ನಡೆಗೆಜ್ಜೆ’ ಭಾಗದಲ್ಲಿ ಮೊಗಸಾಲೆಯವರ ಸಾಹಿತ್ಯ ವಿಹಾರ ಸರಣಿ ಕಾರ್ಯಕ್ರಮಗಳ ಸಚಿತ್ರ ವರದಿಗಳಿವೆ. ಕನ್ನಡ ಸಂಘ ಕಾಂತಾವರ ಈ ಕೃತಿಯನ್ನು ಬೆಳಕಿಗೆ ತಂದಿದೆ. 388 ಪುಟಗಳ ಈ ಕೃತಿಯ ಮುಖಬೆಲೆ 400 ರೂಪಾಯಿ. ಆಸಕ್ತರು 99007 01666 ದೂರವಾಣಿಯನ್ನು ಸಂಪರ್ಕಿಸಬಹುದು.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
-ಕಾರುಣ್ಯಾ
-ಕಾರುಣ್ಯಾ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X