Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಹೈಪೊಥೈರಾಯ್ಡಿಸಂ ಉಂಟು ಮಾಡುವ ಅಪಾಯಗಳು...

ಹೈಪೊಥೈರಾಯ್ಡಿಸಂ ಉಂಟು ಮಾಡುವ ಅಪಾಯಗಳು ನಿಮಗೆ ತಿಳಿದಿರಲಿ

ವಾರ್ತಾಭಾರತಿವಾರ್ತಾಭಾರತಿ21 Jan 2020 9:56 PM IST
share
ಹೈಪೊಥೈರಾಯ್ಡಿಸಂ ಉಂಟು ಮಾಡುವ ಅಪಾಯಗಳು ನಿಮಗೆ ತಿಳಿದಿರಲಿ

ಥೈರಾಯ್ಡ್ ಗ್ರಂಥಿಯು ನಮ್ಮ ಶರೀರದ ಪ್ರಮುಖ ಅಂಗವಾಗಿದೆ. ಥೈರಾಯ್ಡ್ ಹಾರ್ಮೋನ್‌ಗಳ ಮಟ್ಟ ಕುಸಿದರೆ ಅಂತಹ ಸ್ಥಿತಿಯನ್ನು ಹೈಪೊಥೈರಾಯ್ಡಿಸಂ ಎಂದು ಕರೆಯಲಾಗುತ್ತದೆ. ಈ ಸ್ಥಿತಿಯಲ್ಲಿ ನಿಯಮಿತವಾಗಿ ಔಷಧಿಗಳನ್ನು ಸೇವಿಸಬೇಕಾಗುತ್ತದೆ. ಹೈಪೊಥೈರಾಯ್ಡಿಸಂ ಅನ್ನು ಕಡೆಗಣಿಸಿದರೆ ಅಥವಾ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಅದು ಹೃದ್ರೋಗ, ಬಂಜೆತನ ಮತ್ತು ನರ ಸಮಸ್ಯೆಗಳಂತಹ ಹಲವಾರು ತೊಂದರೆಗಳಿಗೆ ಕಾರಣವಾಗುತ್ತದೆ. ಅಂತಹ ಕೆಲವು ಸಾಮಾನ್ಯ ಸಮಸ್ಯೆಗಳ ಕುರಿತು ಮಾಹಿತಿಯಿಲ್ಲಿದೆ.

* ಗಳಗಂಡ: ಹೈಪೊಥೈರಾಯ್ಡಿಸಂ ಅನ್ನು ನಿರ್ಲಕ್ಷಿಸಿದರೆ ಅದು ಗಾಯ್ಟರ್ ಅಥವಾ ಗಳಗಂಡ ಉಂಟಾಗುವ ಅಪಾಯಕ್ಕೆ ಗುರಿಯಾಗಿಸಬಹುದು. ಥೈರಾಯ್ಡೆ್ ಗ್ರಂಥಿಯು ದೊಡ್ಡದಾದಾಗ ಅದನ್ನು ಗಳಗಂಡವೆಂದು ಕರೆಯಲಾಗುತ್ತದೆ. ಥೈರಾಯ್ಡೆ ಹಾರ್ಮೋನ್ ‌ಗಳ ಮಟ್ಟ ಕುಸಿದಾಗ ಪಿಟ್ಯುಟರಿ ಗ್ಲಾಂಡ್ ಅಥವಾ ಬೆಳವಣಿಗೆಯ ಮೇಲೆ ಮುಖ್ಯ ಪ್ರಭಾವ ಬೀರುವ ನಿರ್ನಾಳ ಗ್ರಂಥಿಗೆ ಸಂದೇಶ ರವಾನೆಯಾಗುತ್ತದೆ ಮತ್ತು ಅದು ಥೈರಾಯ್ಡಾನ್ನು ಪ್ರಚೋದಿಸುವ ಹಾರ್ಮೋನ್‌ನ್ನು ಸ್ರವಿಸುತ್ತದೆ. ಇದರ ಪರಿಣಾಮವಾಗಿ ಥೈರಾಯ್ಡ್ ಗ್ರಂಥಿಯ ಗಾತ್ರವು ಹೆಚ್ಚುತ್ತದೆ. ಅಯೊಡಿನ್ ಕೊರತೆಯಿಂದಾಗಿ ಉಂಟಾಗುವ ಹೈಪೊಥೈರಾಯ್ಡಿಸಂ ಇದಕ್ಕೆ ಮುಖ್ಯಕಾರಣವಾಗಿದೆ.

 * ಹೃದಯನಾಳೀಯ ಸಮಸ್ಯೆಗಳು: ಅತ್ಯಂತ ಸೌಮ್ಯ ಸ್ವರೂಪದ ಹೈಪೊಥೈರಾಯ್ಡಿಸಂ ಕೂಡ ಹೃದಯದ ಆರೋಗ್ಯದ ಮೇಲೆ ಗಣನೀಯ ಪರಿಣಾಮ ವನ್ನುಂಟು ಮಾಡುತ್ತದೆ ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಥೈರಾಯ್ಡ್ ಹಾರ್ಮೋನ್ ಗಳ ಮಟ್ಟ ಕಡಿಮೆಯಾದಾಗ ಅದು ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಲು ಕಾರಣವಾಗುತ್ತದೆ ಮತ್ತು ಇದು ವ್ಯಕ್ತಿಯು ಹೃದ್ರೋಗಕ್ಕೆ ತುತ್ತಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದರೆ ಅದು ಅಪಧಮನಿ ಕಾಠಿಣ್ಯವನ್ನು ಉಂಟು ಮಾಡುತ್ತದೆ ಮತ್ತು ಇದು ಹೃದಯಾಘಾತ ಅಥವಾ ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ.

ಥೈರಾಡ್ ಸೂಕ್ತವಾಗಿ ಕಾರ್ಯ ನಿರ್ವಹಿಸದಿದ್ದಾಗ ಅದು ಪೆರಿಕಾರ್ಡಿಯಲ್ ಎಫ್ಯುಸನ್ ಅಥವಾ ಹೃದಯದಲ್ಲಿ ಮತ್ತು ಅದರ ಸುತ್ತ ಹೆಚ್ಚುವರಿ ದ್ರವವು ಶೇಖರ ಗೊಳ್ಳಲು ಕಾರಣವಾಗುತ್ತದೆ. ಇದರಿಂದಾಗಿ ರಕ್ತವನ್ನು ಹೊರಕ್ಕೆ ಪಂಪ್‌ಮಾಡಲು ಹೃದಯಕ್ಕೆ ಕಷ್ಟವಾಗುತ್ತದೆ. ಪ್ರತಿ ಸಲ ಹೃದಯವು ಬಡಿದುಕೊಂಡಾಗ ಪಂಪ್ ಮಾಡಲ್ಪಡುವ ರಕ್ತದ ಪ್ರಮಾಣವು ಶೇ.30ರಿಂದ ಶೇ.50ರಷ್ಟು ಕಡಿಮೆಯಾಗುತ್ತದೆ ಎನ್ನುವುದು ಸಂಶೋಧನೆಗಳಿಂದ ಬೆಳಕಿಗೆ ಬಂದಿದೆ. ಅಲ್ಲದೆ ಟಿ3 ಹಾರ್ಮೋನ್‌ಗಳ ಮಟ್ಟ ಕಡಿಮೆಯಾಗುವುದು ಕೂಡ ಹೃದಯ ವೈಫಲ್ಯಕ್ಕೆ ಕಾರಣವಾಗಬಲ್ಲದು.

* ಮೂತ್ರಪಿಂಡ ಕಾಯಿಲೆ: ತೀವ್ರ ಹೈಪೊಥೈರಾಯ್ಡಿಸಂ ಮೂತ್ರಪಿಂಡಗಳಿಗೆ ರಕ್ತದ ಹರಿವನ್ನು ತಗ್ಗಿಸುತ್ತದೆ ಮತ್ತು ಅವುಗಳ ಕಾರ್ಯಕ್ಕೆ ವ್ಯತ್ಯಯವನ್ನುಂಟು ಮಾಡುತ್ತದೆ. ಇದರಿಂದ ಹೆಚ್ಚುವರಿ ನೀರನ್ನು ಶರೀರದಿಂದ ಹೊರಹಾಕುವ ಮತ್ತು ಮತ್ತು ಮೂತ್ರದಿಂದ ಸೋಡಿಯಂ ಹೀರಿಕೊಳ್ಳುವ ಸಾಮರ್ಥ್ಯ ಕ್ಷೀಣಿಸುತ್ತದೆ. ಇದರ ಪರಿಣಾಮವಾಗಿ ಸೋಡಿಯಂ ಕೊರತೆಯುಂಟಾಗುತ್ತದೆ. ಅಲ್ಲದೆ ಥೈರಾಯ್ಡ್ ಹಾರ್ಮೋನ್ ಮೂತ್ರಪಿಂಡಗಳ ಬೆಳವಣಿಗೆಯ ಮೇಲೆ ಮಹತ್ವದ ಪರಿಣಾಮವನ್ನು ಹೊಂದಿದೆ.

* ನರಶಾಸ್ತ್ರೀಯ ಸಮಸ್ಯೆಗಳು: ದೀರ್ಘಕಾಲಿಕ ಮತ್ತು ಅನಿಯಂತ್ರಿತ ಹೈಪೊಥೈರಾಯ್ಡಿಸಂ ಬಾಹ್ಯ ಮತ್ತು ಕೇಂದ್ರ ನರಮಂಡಲದ ಮೇಲೆ ದುಷ್ಪರಿಣಾಮವ ನ್ನುಂಟು ಮಾಡುತ್ತದೆ. ನಿಷ್ಕ್ರಿಯ ಥೈರಾಯ್ಡ್ ಬಾಹ್ಯ ನರಮಂಡಲದ ನರಗಳಿಗೆ ಹಾನಿಯನ್ನುಂಟು ಮಾಡಬಲ್ಲದು ಮತ್ತು ಇದು ಕೈಕಾಲುಗಳಲ್ಲಿ ಮರಗಟ್ಟುವಿಕೆ, ಜುಮುಗುಡುವಿಕೆ,ಸ್ನಾಯು ನಿಶ್ಶಕ್ತಿ ಮತ್ತು ನೋವಿಗೆ ಕಾರಣವಾಗುತ್ತದೆ.

* ಬಂಜೆತನ: ಥೈರಾಯ್ಡ್ ಹಾರ್ಮೋನ್ ಮಟ್ಟ ಕುಸಿದರೆ ಅದು ಬಂಜೆತನಕ್ಕೆ ಕಾರಣವಾಗಬಲ್ಲದು. ಮಹಿಳೆಯರಲ್ಲಿ ಹೈಪೊಥೈರಾಯ್ಡಿಸಂ ಅಂಡೋತ್ಪತ್ತಿಯಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ಅನಿಯಮಿತ ಋತುಸ್ರಾವವನ್ನುಂಟು ಮಾಡುತ್ತದೆ ಮತ್ತು ಇದು ಬಂಜೆತನಕ್ಕೆ ಕಾರಣವಾಗುತ್ತದೆ. ಪುರುಷರಲ್ಲಿ ಹೈಪೊಥೈರಾಯ್ಡಿಸಂ ದೋಷಪೂರಿತ ವೀರ್ಯಾಣುಗಳು ಮತ್ತು ನಿಮಿರು ದೌರ್ಬಲ್ಯಕ್ಕೆ ಕಾರಣವಾಗಬಲ್ಲದು.

* ಗರ್ಭಾವಸ್ಥೆಯಲ್ಲಿ ತೊಂದರೆಗಳು: ಅನಿಯಂತ್ರಿತ ಹೈಪೊಥೈರಾಯ್ಡಿಸಂ ಮಹಿಳೆಯರ ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆ ಸಮಯದಲ್ಲಿ ತೊಂದರೆಗಳನ್ನು ಉಂಟು ಮಾಡುವುದಲ್ಲದೆ,ಭ್ರೂಣದ ಬೆಳವಣಿಗೆಯ ಮೇಲೂ ಪರಿಣಾಮವನ್ನುಂಟು ಮಾಡುತ್ತದೆ. ಅದು ಗರ್ಭಿಣಿಯರಲ್ಲಿ ಅಧಿಕ ರಕ್ತದೊತ್ತಡ,ಅವಧಿಗೆ ಮುನ್ನವೇ ಹೆರಿಗೆ, ಗರ್ಭಪಾತ,ಹೆರಿಗೆ ನಂತರದ ಖಿನ್ನತೆ ಮತ್ತು ರಕ್ತಸ್ರಾವದ ಅಪಾಯಗಳಿಗೆ ಕಾರಣವಾಗು ತ್ತದೆ. ಗರ್ಭದಲ್ಲಿಯೇ ಭ್ರೂಣದ ಸಾವು,ಭ್ರೂಣದ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯಲ್ಲಿ ವ್ಯತ್ಯಯ ಮತ್ತು ಜನ್ಮಜಾತ ವೈಕಲ್ಯಗಳಿಗೂ ಕಾರಣವಾಗುತ್ತದೆ. ಹೈಪೊಥೈರಾಯ್ಡಿಸಂ ತಾಯಿ ಮತ್ತು ಮಗುವಿನ ಅನಾರೋಗ್ಯ ಮತ್ತು ಸಾವಿಗೂ ಕಾರಣವಾಗಬಹುದು.

* ಮೈಕ್ಸೆಡೆಮಾ: ಇದು ದೀರ್ಘಕಾಲಿಕ ಮತ್ತು ರೋಗನಿರ್ಧಾರವಾಗದ ಹೈಪೊಥೈರಾಯ್ಡಿಸಂ ಉಂಟು ಮಾಡುವ ಅಪರೂಪದ,ಆದರೆ ಮಾರಣಾಂತಿಕ ಸ್ಥಿತಿಯಾಗಿದೆ. ಚಳಿಗೆ ಅತ್ಯಂತ ಅಸಹಿಷ್ಣುತೆ,ದಣಿವು,ಮಂಪರು ಮತ್ತು ಪ್ರಜ್ಞಾಶೂನ್ಯತೆ ಇವು ಮೈಕ್ಸೆಡೆಮಾದ ಲಕ್ಷಣಗಳಾಗಿವೆ. ಸಕಾಲದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಇದು ಮೈಕ್ಸೆಡೆಮಾ ಕೋಮಾ ಎಂದು ಕರೆಯಲಾಗುವ ಸ್ಥಿತಿಗೆ ಕಾರಣವಾಗಬಹುದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X