ಬ್ಲಾಕ್ ಬಾಕ್ಸ್ ತಪಾಸಣೆ: ಇರಾನ್, ಕೆನಡ ಸಂಘರ್ಷ ಮಾರ್ಗದಲ್ಲಿ

ದುಬೈ, ಜ. 22: ಇರಾನ್ ಪಡೆಗಳಿಂದ ಹೊಡೆದುರುಳಿಸಲ್ಪಟ್ಟಿರುವ ಯುಕ್ರೇನ್ ಏರ್‌ಲೈನ್ಸ್ ವಿಮಾನದ ಬ್ಲಾಕ್ ಬಾಕ್ಸ್ ಗಳಲ್ಲಿರುವ ಮಾಹಿತಿಗಳನ್ನು ಪಡೆಯುವ ಉಪಕರಣಗಳನ್ನು ಪೂರೈಸುವಂತೆ ಅಮೆರಿಕ ಮತ್ತು ಫ್ರಾನ್ಸ್ ಅಧಿಕಾರಿಗಳಿಗೆ ಬೇಡಿಕೆ ಸಲ್ಲಿಸಿರುವುದಾಗಿ ಇರಾನ್ ಹೇಳಿದೆ.
ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕೆನಡ ಪ್ರಧಾನಿ ಜಸ್ಟಿನ್ ಟ್ರೂಡೊ, ಮಾಹಿತಿಗಳನ್ನು ಅರ್ಥೈಸುವ ಸಾಮರ್ಥ್ಯವನ್ನು ಇರಾನ್ ಹೊಂದಿಲ್ಲ ಎಂದು ಹೇಳಿದ್ದಾರೆ ಹಾಗೂ ಕಾಕ್ ಪಿಟ್ ಮತ್ತು ಫ್ಲೈಟ್ ರೆಕಾರ್ಡರ್ ಗಳನ್ನು ಇರಾನ್ ಫ್ರಾನ್ಸ್‌ಗೆ ಕಳುಹಿಸಬೇಕು ಎಂದು ಒತ್ತಾಯಿಸಿದ್ದಾರೆ.
ಜನವರಿ 8ರಂದು ಇರಾನ್ ರಾಜಧಾನಿ ಟೆಹರಾನ್ ಹೊರವಲಯದಲ್ಲಿ ಯುಕ್ರೇನ್ ಏರ್‌ಲೈನ್ಸ್ ವಿಮಾನವು ಪತನಗೊಂಡಿದ್ದು, ವಿಮಾನದಲ್ಲಿದ್ದ ಎಲ್ಲ 176 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ 57 ಮಂದಿ ಕೆನಡದವರು.
ಅದೇ ವೇಳೆ, ಈ ಎಲ್ಲ ರೆಕಾರ್ಡರ್‌ಗಳನ್ನು ಯುಕ್ರೇನ್‌ಗೆ ಕಳುಹಿಸಬೇಕೆಂದು ಆ ದೇಶ ಹೇಳಿದೆ.
Next Story





