ಆಸ್ಟ್ರೇಲಿಯನ್ ಓಪನ್: ಸೆರೆನಾ ಮೂರನೇ ಸುತ್ತಿಗೆ
ಮೆಲ್ಬೋರ್ನ್, ಜ.22: ಆಸ್ಟ್ರೇಲಿಯನ್ ಓಪನ್ ಟೆನಿಸ್ ಮಹಿಳೆಯರ ಸಿಂಗಲ್ಸ್ ನಲ್ಲಿ ವಿಶ್ವದ ಮಾಜಿ ನಂ.1 ತಾರೆ ಅಮೆರಿಕದ ಸೆರೆನಾ ವಿಲಿಯಮ್ಸ್ ಅವರು ಸ್ಲೋವೆನಿಯಾದ ಜಿದಾನ್ಸೆಕ್ ಅವರನ್ನು ಸೋಲಿಸಿ ಮೂರನೇ ಸುತ್ತು ತಲುಪಿದ್ದಾರೆ.
ತನ್ನ 400ನೇ ಗ್ರಾನ್ ಸ್ಲಾಮ್ ಸಿಂಗಲ್ಸ್ ಪಂದ್ಯದಲ್ಲಿ ಬುಧವಾರ ಆಡಿದ ಸೆರೆನಾ ವಿಲಿಯಮ್ಸ್ ಅನಿಯಮಿತ ಪ್ರದರ್ಶನವನ್ನು ಮೀರಿ ಸ್ಲೊವೇನಿಯನ್ ಟಮಾರ ಜಿದಾನ್ಸೆಕ್ ಅವರನ್ನು 6-2, 6-3 ಸೆಟ್‌ಗಳಿಂದ ಸೋಲಿಸಿ ಮೂರನೇ ಸುತ್ತಿಗೆ ಮುನ್ನಡೆದರು.
38ರ ಹರೆಯದ ಸೆರೆನಾ ದಾಖಲೆಯ 24ನೇ ಗ್ರಾನ್ ಸ್ಲಾಮ್ ಸಿಂಗಲ್ಸ್ ಪ್ರಶಸ್ತಿ ಗೆಲ್ಲುವ ನಿಟ್ಟಿನಲ್ಲಿ ಪ್ರಯತ್ನವನ್ನು ಮುಂದುವರಿಸಿದ್ದಾರೆ. ಸೆರೆನಾ ಮೊದಲ ಸೆಟ್‌ನಲ್ಲಿ ತೊಂದರೆಗೊಳಗಾಗಲಿಲ್ಲ. ಎರಡನೇ ಸೆಟ್‌ನಲ್ಲೂ ಜಿದಾನ್ಸೆಕ್ ಗೆ ಚೇತರಿಸಿಕೊಳ್ಳಲು ಅವಕಾಶ ನೀಡದೆ ಕೇವಲ ಅರ್ಧ ಗಂಟೆಯೊಳಗೆ ಗೆಲುವಿನ ನಗೆ ಬೀರಿದರು. 70ನೇ ಶ್ರೇಯಾಂಕದ ಜಿದಾನ್ಸೆಕ್ ಎರಡನೇ ಸೆಟ್‌ನಲ್ಲಿ ಪ್ರಭಾವಶಾಲಿ ರಕ್ಷಣಾ ಕಾರ್ಯವನ್ನು ಮಾಡಿದರು, ಹೆಚ್ಚು ನಿರಾಶೆಗೊಂಡ ವಿಲಿಯಮ್ಸ್ ಒಂದು ಡಜನ್‌ಗಿಂತಲೂ ಹೆಚ್ಚು ಬಲವಂತದ ದೋಷಗಳನ್ನು ಮಾಡಿದ್ದರಿಂದ ಏಳು ಬ್ರೇಕ್ ಪಾಯಿಂಟ್‌ಗಳನ್ನು ಉಳಿಸಿದರು. ಆದಾಗ್ಯೂ ಜಿದಾನ್ಸೆಕ್‌ಗೆ ಪ್ರತಿರೋಧವನ್ನು ಒಡ್ಡಲು ಸಾಧ್ಯವಾಗಲಿಲ್ಲ.





