ಫೆ. 23ರವರೆಗೆ ಕರಾವಳಿ ಉತ್ಸವ -ವಸ್ತುಪ್ರದರ್ಶನ
ಮಂಗಳೂರು, ಜ. 23: ಕರಾವಳಿ ಉತ್ಸವದ ಅಂಗವಾಗಿ ನಗರದ ಮಂಗಳಾ ಸ್ಟೇಡಿಯಂ ಪಕ್ಕದ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯುತ್ತಿರುವ ವಸ್ತು ಪ್ರದರ್ಶನವು ಫೆಬ್ರವರಿ 23ರವರೆಗೆ ಮುಂದುವರಿಯಲಿದೆ.
ಆಹಾರ ಉತ್ಪನ್ನಗಳು, ಗೃಹ ಬಳಕೆಯ ಸಾಮಗ್ರಿಗಳು, ಮಕ್ಕಳ ಆಟಿಕೆ ಸಾಮಗ್ರಿಗಳ ಮಾರಾಟ ಪ್ರದರ್ಶನ ನಡೆಯುತ್ತಿದೆ. ಮನೋರಂಜನೆಗೆ ವಿವಿಧ ರೀತಿಯ ಅಮ್ಯೂಸ್ಮೆಂಟ್ಗಳು, ಮಕ್ಕಳ ಮನರಂಜನೆಯ ತಾಣಗಳು ಕರಾವಳಿ ಉತ್ಸವದಲ್ಲಿ ಆರ್ಕಷಿಸುತ್ತಿವೆ. ಈ ವರ್ಷ ಕರಾವಳಿ ಉತ್ಸವ ವಸ್ತುಪ್ರದರ್ಶನ ಆವರಣವನ್ನು ಜಿಲ್ಲಾಡಳಿತವೇ ನೇರವಾಗಿ ಸಿದ್ಧಪಡಿಸಿದ್ದು, ಎಲ್ಲಾ ರೀತಿಯ ಸೌಲಭ್ಯಗಳನ್ನು ಒಳಗೊಂಡಿದೆ ಎಂದು ಮನಪಾ ಪ್ರಕಟನೆ ತಿಳಿಸಿದೆ.
Next Story