ಮೆಡ್ವೆಡೆವ್ ಗೆ ವಾವ್ರಿಂಕಾ ಎದುರಾಳಿ

ಮೆಲ್ಬೋರ್ನ್, ಜ.25: ವಿಶ್ವದ ನಂ.4ನೇ ಆಟಗಾರ ಡ್ಯಾನಿಲ್ ಮೆಡ್ವೆಡೆವ್ ಆಸ್ಟ್ರೇಲಿಯನ್ ಓಪನ್‌ನ ಅಂತಿಮ-16ರ ಸುತ್ತಿನಲ್ಲಿ ಮಾಜಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಸ್ಟ್ಯಾನ್ ವಾವ್ರಿಂಕರನ್ನು ಎದುರಿಸಲಿದ್ದಾರೆ.
ರಶ್ಯದ ಆಟಗಾರ ಮಡ್ವೆಡೆವ್ ಪುರುಷರ ಸಿಂಗಲ್ಸ್‌ನ ಮೂರನೇ ಸುತ್ತಿನ ಪಂದ್ಯದಲ್ಲಿ ಶ್ರೇಯಾಂಕರಹಿತ ಆಸ್ಟ್ರೇಲಿಯ ಆಟಗಾರ ಅಲೆಕ್ಸಿ ಪೊಪಿರಿನ್‌ರನ್ನು 6-4, 6-3, 6-2 ನೇರ ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ.
ಚೊಚ್ಚಲ ಗ್ರಾನ್‌ಸ್ಲಾಮ್ ಕಿರೀಟದ ನಿರೀಕ್ಷೆಯಲ್ಲಿರುವ ಮೆಡ್ವೆಡೆವ್ ಮುಂದಿನ ಸುತ್ತಿನಲ್ಲಿ 2014ರ ಚಾಂಪಿಯನ್ ವಾವ್ರಿಂಕ ಅವರ ಸವಾಲು ಎದುರಿಸಲಿದ್ದಾರೆ.
ಸ್ವಿಸ್ ಆಟಗಾರ ವಾವ್ರಿಂಕ ಎದುರಾಳಿ ಅಮೆರಿಕದ ಜಾನ್ ಇಸ್ನೆರ್ ಗಾಯಗೊಂಡು ನಿವೃತ್ತಿಯಾದಾಗ 6-4, 6-1 ಮುನ್ನಡೆಯಲ್ಲಿದ್ದರು. ವಿಶ್ವದ ಮಾಜಿ ನಂ.3ನೇ ಆಟಗಾರ ವಾವ್ರಿಂಕ 2017ರಲ್ಲಿ ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಉತ್ತಮ ಪ್ರದರ್ಶನ ನೀಡಿಲ್ಲ.
Next Story