Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ26 Jan 2020 11:50 PM IST
share
ಓ ಮೆಣಸೇ...

*ಯಡಿಯೂರಪ್ಪ ಇನ್ನು ಚುನಾವಣೆಗೆ ಸ್ಪರ್ಧಿಸುವುದಿಲ್ಲ - ಕಲ್ಲಡ್ಕ ಪ್ರಭಾಕರ್ ಭಟ್, ಆರೆಸ್ಸೆಸ್ ಮುಖಂಡ
ಬೇರೆ ಪಕ್ಷ ಕಟ್ಟಿ ಮತ್ತೊಮ್ಮೆ ಸ್ಪರ್ಧಿಸುವ ಸಾಧ್ಯತೆಗಳಿವೆ.

---------------------

 *ನನ್ನ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸ್ನೇಹ ಅಜರಾಮರವಾದುದು - ಕೆ.ಎಸ್.ಈಶ್ವರಪ್ಪ, ಸಚಿವ
ನಿಮ್ಮ ಸ್ನೇಹದ ನಡುವೆ ಆರೆಸ್ಸೆಸ್‌ನ ಬೃಹತ್ ಕಂದಕ ಸಮಸ್ಯೆ ಉಂಟು ಮಾಡಿದೆ.

---------------------

ಕೆ.ಎಸ್.ಈಶ್ವರಪ್ಪ ಅವರಂತೆ ಬಾಯಿ ಚಪಲಕ್ಕೆ ಮಾತನಾಡುವ ವ್ಯಕ್ತಿ ನಾನಲ್ಲ - ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಅದು ಬಾಯಿ ಚಪಲ ಅಲ್ಲ, ಕಾಲು ಬಾಯಿ ರೋಗ.

---------------------

ಮತದಾರರು ಭ್ರಷ್ಟರಾದ ಕಾರಣ ನನಗೆ ಉಪ ಚುನಾವಣೆಯಲ್ಲಿ ಸೋಲಾಯಿತು - ಎಂ.ಟಿ.ಬಿ.ನಾಗರಾಜ್, ಮಾಜಿ ಶಾಸಕ
ಮತದಾರರು ಭ್ರಷ್ಟರಾದ ಕಾರಣವೇ ಉಳಿದ ಅಷ್ಟೂ ಅನರ್ಹರು ಗೆಲ್ಲುವಂತಾಯಿತು.

---------------------

2030ರವರೆಗೆ ನನಗೆ ಶುಭಕಾಲವಿದ್ದು, ಮಹತ್ವದ್ದು ಘಟಿಸಲಿದೆ - ಜನಾರ್ದನ ರೆಡ್ಡಿ, ಮಾಜಿ ಸಚಿವ
ಮತ್ತೆ ಜೈಲು ಸೇರುವ ಶುಭ ಸುದ್ದಿ ಜನತೆಗೆ ಸಿಗಬಹುದು.

---------------------

ರಾಹುಲ್‌ಗಾಂಧಿ ಒಬ್ಬ ವ್ಯಕ್ತಿಯಲ್ಲ, ಕಾಂಗ್ರೆಸ್‌ನ ಶಕ್ತಿ - ವಿ.ಎಸ್.ಉಗ್ರಪ್ಪ, ಮಾಜಿ ಸಂಸದ
ಬರೇ ಆ ಒಂದು ಶಕ್ತಿಯ ಮೇಲೆಯೇ ನೆಚ್ಚಿ ಕೂತಿರುವುದೇ ಕಾಂಗ್ರೆಸ್‌ನ ಸ್ಥಿತಿಗೆ ಮುಖ್ಯ ಕಾರಣ.

---------------------

ಕಾಂಗ್ರೆಸ್‌ನಲ್ಲಿ ಸಲ್ಲದವರು ಎಲ್ಲಿಯೂ ಸಲ್ಲುವುದಿಲ್ಲ - ಎಸ್.ಆರ್.ಪಾಟೀಲ್, ವಿ.ಪ.ಪ್ರತಿಪಕ್ಷ ನಾಯಕ
ಸದ್ಯಕ್ಕೆ ಕಾಂಗ್ರೆಸ್ ಪಕ್ಷವೇ ಎಲ್ಲೂ ಸಲ್ಲದ ಸ್ಥಿತಿಯಲ್ಲಿದೆ.

---------------------

ದೇಶದಲ್ಲಿ ಜನಸಂಖ್ಯೆ ನಿಯಂತ್ರಿಸಲು ಎರಡು ಮಕ್ಕಳ ನೀತಿ ಜಾರಿಗೊಳಿಸಬೇಕು - ಮೋಹನ್ ಭಾಗವತ್, ಆರೆಸ್ಸೆಸ್ ಮುಖಂಡ
ಮೊದಲು ನಿಮ್ಮ ಎರಡು ಮಕ್ಕಳನ್ನು ತೋರಿಸಿ.

---------------------

ಕರಾವಳಿ ಪ್ರದೇಶದಲ್ಲಿ ಭಯೋತ್ಪಾದಕ ಶಕ್ತಿಗಳು ಸದ್ದಿಲ್ಲದೆ ಕೆಲಸ ಮಾಡುತ್ತಿವೆ - ಶೋಭಾ ಕರಂದ್ಲಾಜೆ, ಸಂಸದೆ
ಹೌದು, ಸದ್ದಿಲ್ಲದೇ ಬಾಂಬಿಟ್ಟ ರಾವ್‌ನಿಂದಾಗಿ ಅದು ಬಯಲಾಗಿದೆ.

---------------------

ಪಕ್ಷ ನನ್ನನ್ನು ಉಚ್ಚಾಟಿಸಿದರೆ ಬಿಜೆಪಿಗೆ ನಷ್ಟವೇ ಹೊರತು ನನಗೇನೂ ಆಗುವುದಿಲ್ಲ - ಬಚ್ಚೇಗೌಡ, ಸಂಸದ
ನೀವೇ ಪಕ್ಷವನ್ನು ಉಚ್ಚಾಟಿಸಿ ಬಿಡಿ.

---------------------

ಪಕ್ಷಾಂತರ ಮಾಡಿ, ಉಪ ಚುನಾವಣೆಯಲ್ಲಿ ಗೆದ್ದ ಬಿಜೆಪಿ ಶಾಸಕರು ಈಗ ಅಂತರ್ ಪಿಶಾಚಿಗಳಾಗಿದ್ದಾರೆ - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಸೋತ ವಿಶ್ವನಾಥರ ಸ್ಥಿತಿ ಇನ್ನೇನಾಗಬೇಕು?

---------------------

ನಾನು ಪಕ್ಷವನ್ನು ಪೂಜೆ ಮಾಡುವವನೇ ಹೊರತು, ವ್ಯಕ್ತಿ ಪೂಜೆ ಮಾಡುವವನಲ್ಲ -ಡಿ.ಕೆ.ಶಿವಕುಮಾರ್, ಮಾಜಿ ಸಚಿವ
 ಜೈಲಿನಲ್ಲಿ ಯಾರನ್ನು ಪೂಜೆ ಮಾಡಿದಿರಿ?

---------------------

ಮುಸ್ಲಿಮರ ಬೆಂಬಲ ನನಗೆ ಬೇಡ. ಅವರನ್ನು ಎಲ್ಲಿಡಬೇಕೋ ಅಲ್ಲೇ ಇಡುತ್ತೇನೆ - ರೇಣುಕಾಚಾರ್ಯ, ಶಾಸಕ
ಮುಸ್ಲಿಮರು ನಿಮ್ಮನ್ನು ಎಲ್ಲಿಡಬೇಕೋ ಅಲ್ಲೇ ಇಟ್ಟಿದ್ದಾರೆ.

---------------------

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಗಳೆಲ್ಲ ಪಾಕ್ ಏಜೆಂಟರು - ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
ದೇಶದ ಮೇಲೆ ನೀವು ಸೇಡು ತೀರಿಸುತ್ತಿರುವುದನ್ನು ನೋಡಿದರೆ ಐಎಸ್‌ಐ ಏಜೆಂಟರೇನೋ ಎಂದು ಅನುಮಾನವಾಗುತ್ತದೆ.

---------------------

ಸಂಪುಟ ವಿಸ್ತರಣೆಯಾದರೆ ಪ್ರಳಯವೇನೂ ಆಗುವುದಿಲ್ಲ - ಗೋವಿಂದ ಕಾರಜೋಳ, ಉಪ ಮುಖ್ಯಮಂತ್ರಿ

ಹೆಚ್ಚೆಂದರೆ ಸರಕಾರ ಉರುಳಬಹುದು, ಅಷ್ಟೇ.

---------------------

  ಪಾಕ್ ಹಾಗೂ ಬಾಂಗ್ಲಾವನ್ನು ಸೇರಿಸಿ ಅಖಂಡ ಭಾರತ ನಿರ್ಮಿಸುವುದು ಬಿಜೆಪಿ ಗುರಿ - ಎ.ನಾರಾಯಣಸ್ವಾಮಿ, ಸಂಸದ
ಸದ್ಯಕ್ಕೆ ಈಗ ಇರುವ ಭಾರತ ಒಡೆಯದೇ ಇರಲಿ ಎನ್ನುವುದೇ ದೇಶದ ಜನರ ಪ್ರಾರ್ಥನೆ.

---------------------

ಭಾರತ ಎಲ್ಲದರಲ್ಲೂ ಮೇಲ್ಪಂಕ್ತಿಯಲ್ಲಿದೆ - ಕಲ್ಲಡ್ಕ ಪ್ರಭಾಕರ್ ಭಟ್, ಆರೆಸ್ಸೆಸ್ ಮುಖಂಡ
ಜಾತಿ ಪಂಕ್ತಿಯ ವಿಷಯದಲ್ಲಿರಬೇಕು.

---------------------

ಪಾಕಿಸ್ತಾನ ಅಥವಾ ಅಮೆರಿಕದಂತೆ ಭಾರತ ಧರ್ಮಾಧಾರಿತ ದೇಶವಲ್ಲ -ರಾಜನಾಥ್‌ಸಿಂಗ್, ಕೇಂದ್ರ ಸಚಿವ
ಧರ್ಮಾಧಾರಿತವಾಗಿ ಪರಿವರ್ತಿಸುವುದಕ್ಕೆ ಸಿಎಎ ಕಾಯ್ದೆ ತಂದಿರಬೇಕು.

---------------------

ಭಾರತದಲ್ಲಿ ಗೋವುಗಳು ಸ್ವಚ್ಛಂದವಾಗಿ ಬದುಕುತ್ತಿದ್ದ ಕಾಲದಲ್ಲಿ ಸುಭಿಕ್ಷೆ ನೆಲೆಸಿತ್ತು - ರಾಘವೇಶ್ವರ ಸ್ವಾಮೀಜಿ, ರಾಮಚಂದ್ರಾಪುರ ಮಠ
ನಿಮ್ಮ ಬದುಕು ಸುಭಿಕ್ಷೆಯಾಗಿತ್ತು. ದಲಿತರು, ಶೂದ್ರರ ಬದುಕು ಗೋವುಗಳಿಗಿಂತ ಕೀಳಾಗಿತ್ತು.

---------------------

ಪಾಕಿಸ್ತಾನ ಎಂಬ ದೇಶ ಇಲ್ಲದಿದ್ದರೆ ಬಿಜೆಪಿಗೆ ಈ ದೇಶದಲ್ಲಿ ಒಂದು ವೋಟು ಪಡೆಯಲು ಸಾಧ್ಯವಾಗುತ್ತಿರಲಿಲ್ಲ - ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
 ಪಾಕಿಸ್ತಾನದ ವಿರುದ್ಧ ಅಣುಬಾಂಬ್ ಬಳಸಿದರೆ ಹೇಗೆ?

---------------------

ಇತ್ತೀಚೆಗೆ ಯುವಜನರಿಗೆ ಸಂವಿಧಾನದ ಮೇಲಿನ ನಂಬಿಕೆಯನ್ನು ನೋಡಿದರೆ ಹೃದಯ ತುಂಬಿ ಬರುತ್ತದೆ - ಪ್ರಣಬ್ ಮುಖರ್ಜಿ, ಮಾಜಿ ರಾಷ್ಟ್ರಪತಿ
ಅದಕ್ಕೇ ಇರಬೇಕು, ಸಂವಿಧಾನದ ಮೇಲೆ ನಂಬಿಕೆಯಿಲ್ಲದ ಆರೆಸ್ಸೆಸ್ ಸಮಾರಂಭದಲ್ಲಿ ಭಾಗವಹಿಸಿರುವುದು.

---------------------

ಪಾಕಿಸ್ತಾನವನ್ನು ಭೂಪಟದಿಂದಲೇ ತೆಗೆದು ಹಾಕುತ್ತೇವೆ - ಆರ್.ಅಶೋಕ್, ಸಚಿವ
ಕಚೇರಿಯಲ್ಲಿದ್ದ ಭೂಪಟವನ್ನೇ ತೆಗೆದು ಬಿಡಿ. ಸುಲಭವಾಗುತ್ತದೆ.

---------------------

ಹಿಂದೂಗಳಲ್ಲಿ ಯಾರೂ ಭಯೋತ್ಪಾದಕರಿಲ್ಲ - ಗೋವಿಂದ ಕಾರಜೋಳ, ಉಪ ಮುಖ್ಯಮಂತ್ರಿ
 ವಿಮಾನ ನಿಲ್ದಾಣದಲ್ಲಿ ಬಾಂಬಿಟ್ಟ ರಾವ್ ಕೂಡ ಅದನ್ನೇ ಸಾಬೀತು ಮಾಡಿದ್ದಾನೆ.

share
ಪಿ.ಎ.ರೈ
ಪಿ.ಎ.ರೈ
Next Story
X