ಜ. 28: ಕಾಸರಗೋಡು ಜಿಲ್ಲಾ ಸಹಕಾರಿ ಆಸ್ಪತ್ರೆ ಸಂಘದ ಕಟ್ಟಡ ಉದ್ಘಾಟನೆ
ಮಂಗಳೂರು, ಜ.27: ಕೇರಳದ ಕಾಸರಗೋಡು ಜಿಲ್ಲಾ ಸಹಕಾರಿ ಆಸ್ಪತ್ರೆ ಸಂಘದ ಬಹುಅಂತಸ್ತಿನ ಕಟ್ಟಡವನ್ನು ಜ.28ರಂದು ಬೆಳಗ್ಗೆ 9:30ಕ್ಕೆ ಕಾಸರಗೋಡು ಕುಂಬಳೆಯಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸಲಿದ್ದಾರೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಕಂದಾಯ-ಭವನ ನಿರ್ಮಾಣ ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲಾ ಸಹಕಾರಿ ಆಸ್ಪತ್ರೆಯ ಅಧ್ಯಕ್ಷ ಎ.ಚಂದ್ರಶೇಖರ, ಡಿ.ಎನ್.ರಾಧಾಕೃಷ್ಣ ಮತ್ತಿತರರು ಭಾಗವಹಿಸಲಿದ್ದಾರೆ.
Next Story