ಅರ್ನಬ್ ಗೋಸ್ವಾಮಿಗೆ 'ಮಂಗಳಾರತಿ' ವಿಡಿಯೋ ವೈರಲ್: ಕುನಾಲ್ ಕಾಮ್ರಾಗೆ 6 ತಿಂಗಳ ನಿಷೇಧ ಹೇರಿದ ಇಂಡಿಗೋ

ಹೊಸದಿಲ್ಲಿ: 'ರಿಪಬ್ಲಿಕ್ ಟಿವಿ' ಸಂಪಾದಕ ಅರ್ನಬ್ ಗೋಸ್ವಾಮಿಯವರಿಗೆ ವಿಮಾನದಲ್ಲಿ ಪ್ರಶ್ನೆಗಳನ್ನು ಕೇಳಿ ಬೆವರಿಳಿಸಿದ ಕಾಮಿಡಿಯನ್ ಕುನಾಲ್ ಕಾಮ್ರಾ ಅವರಿಗೆ ಇಂಡಿಗೋ 6 ತಿಂಗಳ ಕಾಲ ಪ್ರಯಾಣ ನಿಷೇಧ ಹೇರಿದೆ.
ಕಾಮ್ರಾ ಅವರ ನಡೆಯು ಸ್ವೀಕಾರಾರ್ಹವಲ್ಲ ಎಂದು ಇಂಡಿಗೋ ಹೇಳಿರುವುದಾಗಿ ವರದಿ ತಿಳಿಸಿದೆ.
ವಿಮಾನದಲ್ಲಿ ಅರ್ನಬ್ ಅವರಿಗೆ ಪ್ರಶ್ನೆಗಳ ಸುರಿಮಳೆಗೈದಿದ್ದ ಕುನಾಲ್ ಅರ್ನಬ್ ರನ್ನು 'ಹೇಡಿ' ಎಂದಿದ್ದರು. ಕುನಾಲ್ ಅವರ ಯಾವುದೇ ಪ್ರಶ್ನೆಗಳಿಗೆ ಅರ್ನಬ್ ಉತ್ತರಿಸಿರಲಿಲ್ಲ.
ಘಟನೆಯ ಬಗ್ಗೆ ವಿವರಿಸಿದ್ದ ಕುನಾಲ್, ವಿಡಿಯೋವನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
Next Story





