Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ನಿಮಗೆ ಗೊತ್ತಿರಲಿ: ದೈಹಿಕ...

ನಿಮಗೆ ಗೊತ್ತಿರಲಿ: ದೈಹಿಕ ನಿಷ್ಕ್ರಿಯತೆಯು ಈ ರೋಗಗಳಿಗೆ ಕಾರಣವಾಗುತ್ತದೆ

ವಾರ್ತಾಭಾರತಿವಾರ್ತಾಭಾರತಿ29 Jan 2020 11:10 PM IST
share

ಹೆಚ್ಚಿನ ದೈಹಿಕ ಚಟುವಟಿಕೆಗಳಿಲ್ಲದಿರುವುದು ಅಥವಾ ದೈಹಿಕ ನಿಷ್ಕ್ರಿಯತೆಯು ವಿಶ್ವಾದ್ಯಂತ ಗಂಭೀರ ಆರೋಗ್ಯ ಸಮಸ್ಯೆಯಾಗಿದೆ. ಡಿಜಿಟಲೀಕರಣದಿಂದಾಗಿ ಮಕ್ಕಳು ಹೊರಾಂಗಣ ಕ್ರೀಡೆಗಳಿಗಿಂತ ಮೊಬೈಲ್ ಮತ್ತು ಕಂಪ್ಯೂಟರ್ ಗೇಮ್‌ಗಳಲ್ಲಿ ಹೆಚ್ಚು ಆಸಕ್ತರಾಗಿರುವುದರಿಂದ ದೈಹಿಕ ನಿಷ್ಕ್ರಿಯತೆಯ ಸಮಸ್ಯೆಯ ಬಲಿಪಶುಗಳಾಗಿರುವವರಲ್ಲಿ ಅವರ ಸಂಖ್ಯೆಯೂ ಸಾಕಷ್ಟಿದೆ.

ನಮ್ಮ ಶರೀರವು ಕೋಟ್ಯಂತರ ಜೀವಕೋಶಗಳು ಮತ್ತು ಅಂಗಾಂಶಗಳಿಂದ ಮಾಡಲ್ಪಟ್ಟಿದೆ ಮತ್ತು ನಮಗೆ ವಯಸ್ಸಾಗುತ್ತಿದ್ದಂತೆ ಇವುಗಳ ಕಾರ್ಯಕ್ಷಮತೆಯೂ ಕಡಿಮೆಯಾಗುತ್ತದೆ. ಹೀಗಾಗಿ ಜೀವಿತಾವಧಿಯನ್ನು ಹೆಚ್ಚಿಸಿಕೊಳ್ಳಲು ಮತ್ತು ಜೀವಕೋಶಗಳು ಹಾಗೂ ಅಂಗಾಂಶಗಳನ್ನು ಮರಳಿ ಸುಸ್ಥಿತಿಗೆ ತರಲು,ಹೊಸ ಜೀವಕೋಶಗಳು ಮತ್ತು ಅಂಗಾಂಶಗಳ ಬೆಳವಣಿಗೆಗೆ ದೈಹಿಕ ಚಟುವಟಿಕೆಗಳು ಅತ್ಯಗತ್ಯವಾಗಿವೆ. ದೈಹಿಕ ಚಟುವಟಿಕೆಯು ಅಗತ್ಯ ಹಾರ್ಮೋನ್‌ಗಳನ್ನು ಕ್ರಮಬದ್ಧಗೊಳಿಸಲು ಮತ್ತು ವಯಸ್ಸಾಗುವಿಕೆಯನ್ನು ನಿಧಾನಗೊಳಿಸಲು ನೆರವಾಗುತ್ತದೆ. ದೈಹಿಕ ಚಟುವಟಿಕೆಗಳಿಲ್ಲದ ಜೀವನಶೈಲಿಯು ಹಲವಾರು ರೋಗಗಳೊಂದಿಗೆ ಗುರುತಿಸಿಕೊಂಡಿದೆ. ಈ ಕುರಿತು ಮಾಹಿತಿಯಿಲ್ಲಿದೆ.

* ಟೈಪ್-2 ಮಧುಮೇಹ

ದೈಹಿಕ ಚಟುವಟಿಕೆಗಳು ಟೈಪ್-2 ಮಧುಮೇಹಕ್ಕೆ ಗುರಿಯಾಗುವ ಅಪಾಯವನ್ನು ಶೇ.58ರಷ್ಟು ತಗ್ಗಿಸುತ್ತವೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ನಿಯಮಿತವಾಗಿ ದೈಹಿಕ ಚಟುವಟಿಕೆಯು ಶರೀರದಲ್ಲಿ ಗ್ಲುಕೋಸ್ ಮಟ್ಟವನ್ನು ಉತ್ತಮಗೊಳಿಸುವ ಜೊತೆಗೆ ಲಿಪಿಡ್ ಮಟ್ಟಗಳ ಮೇಲೆ ಧನಾತ್ಮಕ ಪರಿಣಾಮವನ್ನುಂಟು ಮಾಡುತ್ತದೆ. ರಕ್ತದೊತ್ತಡವನ್ನು ಕ್ರಮಬದ್ಧಗೊಳಿಸುತ್ತದೆ ಮತ್ತು ಜೀವನದ ಗುಣಮಟ್ಟವನ್ನು ಹೆಚ್ಚಿಸುತ್ತದೆ. ನಡಿಗೆ,ಸೈಕಲ್ ಸವಾರಿ ಮತ್ತು ವ್ಯಾಯಾಮದಂತಹ ದೈಹಿಕ ಚಟುವಟಿಕೆಗಳು ಶರೀರದಲ್ಲಿ ಇನ್ಸುಲಿನ್ ಕ್ರಿಯೆಯನ್ನು ಉತ್ತಮಗೊಳಿಸುತ್ತವೆ.

* ಖಿನ್ನತೆ

  ದೈಹಿಕ ಚಟುವಟಿಕೆಯು ಮಾನಸಿಕ ಸ್ವಾಸ್ಥದೊಡನೆ ವ್ಯಾಪಕ ಸಂಬಂಧವನ್ನು ಹೊಂದಿದೆ. ಮಾನಸಿಕ ಸ್ವಾಸ್ಥವು ಕುಂದುವುದು ಖಿನ್ನತೆಗೆ ಪ್ರಮುಖ ಕಾರಣವಾಗಿದೆ ಮತ್ತು ಇದು ಕ್ರಮೇಣ ನಿರುದ್ಯೋಗ,ಆದಾಯ ಕುಸಿತ ಮತ್ತು ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಏಕೆಂದರೆ ಮಾನಸಿಕ ಅನಾರೋಗ್ಯದಿಂದ ಬಳಲುತ್ತಿರುವವರು ಮಾಮೂಲು ವೈದ್ಯಕೀಯ ತಪಾಸಣೆಗೊಳಗಾಗುವ ಸಾಧ್ಯತೆಯು ಕಡಿಮೆಯಾಗಿರುತ್ತದೆ ಮತ್ತು ಇದರಿಂದಾಗಿ ಅವರಲ್ಲಿರಬಹುದಾದ ದೈಹಿಕ ಅನಾರೋಗ್ಯ ಸ್ಥಿತಿ ಪತ್ತೆಯಾಗು ವುದಿಲ್ಲ.

* ಬೊಜ್ಜು

ನಾವು ಆಹಾರದ ರೂಪದಲ್ಲಿ ಸೇವಿಸುವ ಕ್ಯಾಲರಿಗಳು ಮತ್ತು ನಾವು ಕರಗಿಸುವ ಕ್ಯಾಲರಿಗಳಲ್ಲಿ ಅಸಮತೋಲನವು ಬೊಜ್ಜು ಉಂಟಾಗಲು ಮುಖ್ಯ ಕಾರಣವಾಗಿದೆ. ನಾವು ಸೇವಿಸುವ ಆಹಾರದಲ್ಲಿಯ ಕ್ಯಾಲರಿಗಳನ್ನು ಕರಗಿಸಲು ಕೆಲವು ದೈಹಿಕ ಚಟುವಟಿಕೆಗಳನ್ನು ನಡೆಸಬೇಕಾಗುತ್ತದೆ. ಆದರೆ ಇಂತಹ ಯಾವುದೇ ಚಟುವಟಿಕೆಗಳನ್ನ್ನು ನಡೆಸದಿದ್ದಾಗ ಕ್ಯಾಲರಿಗಳು ಅಥವಾ ಶಕ್ತಿ ಕೊಬ್ಬಾಗಿ ಪರಿವರ್ತನೆಗೊಳ್ಳುತ್ತದೆ ಮತ್ತು ಶರೀರದಲ್ಲಿ ಸಂಗ್ರಹವಾಗುತ್ತದೆ. ಶರೀರದಲ್ಲಿ ಕೊಬ್ಬು ಹೆಚ್ಚಾದರೆ ಹೃದ್ರೋಗಗಳು ಮತ್ತು ಇತರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

* ಅಧಿಕ ರಕ್ತದೊತ್ತಡ

 ದೈಹಿಕ ಚಟುವಟಿಕೆಗಳ ಕೊರತೆಯು ಅಧಿಕ ರಕ್ತದೊತ್ತಡಕ್ಕೆ ಗುರಿಯಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ ದೈಹಿಕ ಚಟುವಟಿಕೆಗಳೇ ಉತ್ತಮ ಚಿಕಿತ್ಸೆಯನ್ನು ನೀಡುತ್ತವೆ.

* ಪರಿಧಮನಿ ಹೃದಯ ಕಾಯಿಲೆ

ಧೂಮ್ರಪಾನ,ಅಧಿಕ ಕೊಲೆಸ್ಟ್ರಾಲ್ ಮತ್ತು ಹೆಚ್ಚಿನ ರಕ್ತದೊತ್ತಡ ಇವು ಪರಿಧಮನಿ ಹೃದಯ ಕಾಯಿಲೆಯನ್ನುಂಟು ಮಾಡುವ ಮೂರು ಪ್ರಮಖ ಅಪಾಯದ ಅಂಶಗಳಾಗಿವೆ. ಇವುಗಳೊಂದಿಗೆ ದೈಹಿಕ ನಿಷ್ಕ್ರಿಯತೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ. ದೈಹಿಕ ಚಟುವಟಿಕೆಗಳ ಕೊರತೆ ಇರುವವರಲ್ಲಿ ಆಹಾರದ ಮೂಲಕ ಶರೀರವು ಪಡೆದುಕೊಂಡ ಶಕ್ತಿಯ ಬಳಕೆಯಾಗುವುದಿಲ್ಲ ಮತ್ತು ಅದು ಕೊಬ್ಬ್ಬಾಗಿ ರೂಪಾಂತರಗೊಂಡು ಸಂಗ್ರಹವಾಗುತ್ತದೆ. ಕೊಬ್ಬು ಅತಿಯಾದಾಗ ಅದು ಹೃದಯದಲ್ಲಿ ರಕ್ತ ಸಂಚಾರಕ್ಕೆ ಅಡೆತಡೆಗಳನ್ನು ಉಂಟು ಮಾಡುತ್ತದೆ,ಪರಿಣಾಮವಾಗಿ ಹೃದಯ ರಕ್ತನಾಳ ರೋಗಗಳಿಗೆ ಗುರಿಯಾಗುವ ಅಪಾಯವು ಹೆಚ್ಚುತ್ತದೆ.

* ಸ್ತನ ಕ್ಯಾನ್ಸರ್

 ಮಹಿಳೆಯರಲ್ಲಿ ದೈಹಿಕ ಚಟುವಟಿಕೆಗಳ ಕೊರತೆಯು ಲೈಂಗಿಕ ಹಾರ್ಮೋನ್‌ಗಳಲ್ಲಿ ಅಸಮತೋಲನವನ್ನುಂಟು ಮಾಡುತ್ತದೆ. ಈಸ್ಟ್ರೋಜನ್ ಹಾರ್ಮೋನ್ ಅತಿಯಾದ ಮಟ್ಟದಲ್ಲಿದ್ದರೆ ಅದು ಸ್ತನ ಕ್ಯಾನ್ಸರ್‌ನ ಅಪಾಯವನ್ನು ಹೆಚ್ಚಿಸುತ್ತದೆ. ದೈಹಿಕವಾಗಿ ನಿಷ್ಕ್ರಿಯರಾಗಿರುವ ಮಹಿಳೆಯರಿಗೆ ಹೋಲಿಸಿದರೆ ಸದಾ ಕ್ರಿಯಾಶೀಲರಾಗಿರುವ ಮಹಿಳೆಯರಲ್ಲಿ ಆರೋಗ್ಯಕರ ದೇಹತೂಕದಿಂದಾಗಿ ಹಾರ್ಮೋನ್ ಅಸಮತೋಲನದ ಸಾಧ್ಯತೆಯು ತುಂಬ ಕಡಿಮೆಯಾಗಿರುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ.

* ಮೂತ್ರಪಿಂಡ ರೋಗಗಳು

ಇನ್ಸುಲಿನ್ ಪ್ರತಿರೋಧ,ಉತ್ಕರ್ಷಣ ಒತ್ತಡ ಮತ್ತು ರಕ್ತದೊತ್ತಡದಂತಹ ಚಯಾಪಚಯ ಪ್ರಕ್ರಿಯೆಗಳು ಮೂತ್ರಪಿಂಡಗಳ ಕಾರ್ಯನಿರ್ವಹಣೆಯೊಂದಿಗೆ ತಳುಕು ಹಾಕಿಕೊಂಡಿವೆ. ವ್ಯಾಯಾಮವು ಶರೀರದ ಒಟ್ಟಾರೆ ಚಯಾಪಚಯವನ್ನು ಹೆಚ್ಚಿಸುತ್ತದೆ. ದೈಹಿಕ ಚಟುವಟಿಕೆಯ ಕೊರತೆಯು ಮಧುಮೇಹ,ಬೊಜ್ಜು ಮತ್ತು ಚಯಾಪಚಯದಲ್ಲಿ ಏರುಪೇರು ಇತ್ಯಾದಿ ಸಮಸ್ಯೆಗಳಿಗೆ ಗುರಿಯಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಹೀಗಾಗಿ ಮೂತ್ರಪಿಂಡಗಳ ಆರೋಗ್ಯ ಕಾಯ್ದುಕೊಳ್ಳಲು ಮತ್ತು ಇತರ ಕಾಯಿಲೆಗಳನ್ನು ದೂರವಿರಿಸಲು ದೈಹಿಕ ಚಟುವಟಿಕೆ ಅತ್ಯಗತ್ಯವಾಗಿದೆ.

* ನಿದ್ರಾಹೀನತೆ

ಒಳ್ಳೆಯ ನಿದ್ರೆ ಮತ್ತು ವ್ಯಾಯಾಮ ಪರಸ್ಪರ ಧನಾತ್ಮಕ ಪರಿಣಾಮಗಳನ್ನು ಹೊಂದಿವೆ ಮತ್ತು ಒಳ್ಳೆಯ ಆರೋಗ್ಯಕ್ಕೆ ಅತ್ಯಗತ್ಯವಾಗಿವೆ. ಪ್ರತಿದಿನ ಏಳುಗಂಟೆಗೂ ಕಡಿಮೆ ಸಮಯ ನಿದ್ರಿಸುವವರು ನಿದ್ರಾಹೀನತೆಯಂತಹ ಮಾನಸಿಕ ಅಸ್ವಾಸ್ಥಗಳಿಗೆ ಸುಲಭವಾಗಿ ಗುರಿಯಾಗುತ್ತಾರೆ. ದೈಹಿಕ ಚಟುವಟಿಕೆಯು ಶರೀರದ ನೈಸರ್ಗಿಕ ಜೈವಿಕ ಗಡಿಯಾರ ವನ್ನು ಕ್ರಮಬದ್ಧಗೊಳಿಸುತ್ತದೆ ಮತ್ತು ನಿದ್ರಾಹೀನತೆ ಅಥವಾ ಖಿನ್ನತೆಯ ಲಕ್ಷಣಗಳನ್ನು ತಗ್ಗಿಸುತ್ತದೆ ಹಾಗೂ ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ.

* ಅಸ್ಥಿರಂಧ್ರತೆ

ಅಸ್ಥಿರಂಧ್ರತೆಯು ಮೂಳೆಗಳನ್ನು ದುರ್ಬಲ ಮತ್ತು ಶಿಥಿಲಗೊಳಿಸುವ ಮೂಲಕ ಮೂಳೆ ಮುರಿತ ಮತ್ತು ಇತರ ಮೂಳೆ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ದೈಹಿಕ ಚಟುವಟಿಕೆಯು ಬೆನ್ನುಮೂಳೆ ಮತ್ತು ಪೃಷ್ಠದ ಮೂಳೆಗಳನ್ನು ಬಲಗೊಳಿಸುತ್ತದೆ. ಇದು ಮೂಳೆಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ವಯಸ್ಸಾಗುವಿಕೆ ಹಾಗೂ ಅಸ್ಥಿರಂಧ್ರತೆಯಿಂದ ಮೂಳೆಗಳು ನಷ್ಟಗೊಳ್ಳುವ ಅಪಾಯವನ್ನು ತಡೆಯುತ್ತದೆ.

* ಉರಿಯೂತ ಕಾಯಿಲೆಗಳು

ಮಧುಮೇಹ,ಆಘಾತ ಮತ್ತು ಚಯಾಪಚಯ ಸಮಸ್ಯೆಯಂತಹ ದೀರ್ಘಕಾಲಿಕ ಉರಿಯೂತ ರೋಗಗಳಿಗೆ ದೈಹಿಕ ಚಟುವಟಿಕೆಗಳ ಕೊರತೆಯು ಮುಖ್ಯ ಕಾರಣವಾಗಿದೆ. ಪ್ರತಿದಿನ ಕನಿಷ್ಠ 20 ನಿಮಿಷಗಳ ವ್ಯಾಯಾಮವು ಶರೀರದಲ್ಲಿ ಉರಿಯೂತಕ್ಕೆ ಕಾರಣವಾಗುವ ಪ್ರೋಟಿನ್‌ಗಳ ವಿರುದ್ಧ ಕಾರ್ಯಾಚರಿಸಲು ನಿರೋಧಕ ವ್ಯವಸ್ಥೆಯನ್ನು ಪ್ರಚೋದಿಸುತ್ತದೆ ಎನ್ನುತ್ತಾರೆ ತಜ್ಞರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X