ಮಸೀದಿಗಳಲ್ಲಿ ಕನ್ನಡ ಕಲಿಕಾ ಕೇಂದ್ರ ಆರಂಭಿಸಲು ವಕ್ಫ್ ಬೋರ್ಡ್‌ಗೆ ಮನವಿ

ಬೆಂಗಳೂರು, ಜ.30: ರಾಜ್ಯ ವಕ್ಫ್ ಬೋರ್ಡ್ ಅಧೀನದಲ್ಲಿ ಬರುವ ಎಲ್ಲ ಮಸೀದಿಗಳು ಇಮಾಮ್ ಮತ್ತು ಮುಅಝ್ಝಿನ್‌ಗಳಿಗೆ ಕನ್ನಡ ಕಲಿಕಾ ಕೇಂದ್ರಗಳನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮತ್ತೀಕೆರೆಯ ಮಸ್ಜಿದ್-ಎ-ತಾಹಾ ಆಡಳಿತ ಮಂಡಳಿಯ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ನಗರದ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಕಚೇರಿಯಲ್ಲಿ ವಕ್ಫ್ ಬೋರ್ಡ್ ಅಧ್ಯಕ್ಷ ಡಾ.ಮುಹಮ್ಮದ್ ಯೂಸುಫ್‌ರನ್ನು ಭೇಟಿ ಮಾಡಿದ ಮಸ್ಜಿದ್-ಎ-ತಾಹಾ ಆಡಳಿತ ಮಂಡಳಿಯ ಪದಾಧಿಕಾರಿಗಳು ಅಖಿಲ ಕರ್ನಾಟಕ ಮಹಮದೀಯರ ಕನ್ನಡ ವೇದಿಕೆ ಅಧ್ಯಕ್ಷ ಸಮೀವುಲ್ಲಾ ಖಾನ್ ನೇತೃತ್ವದಲ್ಲಿ ಈ ಮನವಿ ಸಲ್ಲಿಸಿದರು.
ಅಲ್ಲದೇ, ಬೆಂಗಳೂರಿನ ಐತಿಹಾಸಿಕ ಮಸೀದಿಗಳು ಮತ್ತು ದರ್ಗಾಗಳ ಸಮಗ್ರ ಮಾಹಿತಿಯುಳ್ಳ ‘ಕೈಪಿಡಿ’ಯನ್ನು ವಕ್ಫ್ ಬೋರ್ಡ್ ಮುಖಾಂತರ ಹೊರತರಬೇಕು ಎಂದು ಪದಾಧಿಕಾರಿಗಳು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮಸ್ಜಿದ್-ಎ-ತಾಹಾ ಆಡಳಿತ ಮಂಡಳಿಯ ಕಾರ್ಯದರ್ಶಿ ಶಾಜಹಾನ್, ಜಂಟಿ ಕಾರ್ಯದರ್ಶಿ ಸಾಗರ್ ಸಮೀವುಲ್ಲಾ, ಮುಖಂಡರಾದ ಅಕ್ಬರ್, ಅಕ್ರಮ್, ಬಾಬು ಉಪಸ್ಥಿತರಿದ್ದರು.





