ಫೆ.3-4: ಬಿಸಿಯೂಟ ನೌಕರರ ಅನಿರ್ದಿಷ್ಟವಾಧಿ ಮುಷ್ಕರ
ಮಂಗಳೂರು, ಜ.30: ಕೇಂದ್ರ ಹಾಗೂ ರಾಜ್ಯ ಸರಕಾರವು ಬಿಸಿಯೂಟ ನೌಕರರನ್ನು ಕಾರ್ಮಿಕರೆಂದು ಪರಿಗಣಿಸಿ ಕನಿಷ್ಟ ಕೂಲಿಯನ್ನು ಮತ್ತು ಬೆಲೆ ಏರಿಕೆಗೆ ಅನುಗುಣವಾಗಿ ಕನಿಷ್ಟ ಕೂಲಿ 21,000 ರೂ.ವನ್ನು ನಿಗದಿಪಡಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಕ್ಷರದಾಸೋಹ ಸಂಘ (ಸಿಐಟಿಯು)ದ ನೇತೃತ್ವದಲ್ಲಿ ಫೆ.3ರಂದು ಬೆಂಗಳೂರಿನಲ್ಲಿ ಬಿಸಿಯೂಟ ನೌಕರರು ಮುಷ್ಕರ ನಡೆಸಲಿದ್ದಾರೆ.
ಫೆ.4ರಂದು ದ.ಕ.ಜಿಪಂ ಕಚೇರಿ ಮುಂದೆ ಹಾಗೂ ಜಿಲ್ಲೆಯ ತಾಪಂ ಕಚೇರಿಗಳ ಮುಂದೆ ಬಿಸಿಯೂಟ ನೌಕರರು ಧರಣಿ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





