ಕಲಬುರಗಿ ಕೋಟೆ ಪ್ರದೇಶ ಒತ್ತುವರಿ ತೆರವು ಕುರಿತ ವಿವರಣೆ ನೀಡಲು ಡಿಸಿಗೆ ಹೈಕೋರ್ಟ್ ನಿರ್ದೇಶನ

ಬೆಂಗಳೂರು, ಜ.30: ಕಲಬುರಗಿಯ ಐತಿಹಾಸಿಕ ಕೋಟೆ ವ್ಯಾಪ್ತಿಯಲ್ಲಿನ ಒತ್ತುವರಿ ತೆರವು ಕುರಿತ ವಿವರಣೆ ನೀಡಲು ಹೈಕೋರ್ಟ್ ಕಲಬುರಗಿ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದೆ. ಒತ್ತುವರಿದಾರರ ತೆರವು ಕೋರಿ ಎಂ.ಎಸ್.ಶರಣ್ ದೇಸಾಯಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ಐತಿಹಾಸಿಕ ಕೋಟೆ ವ್ಯಾಪ್ತಿಯಲ್ಲಿ ಜಾಗ ಒತ್ತುವರಿ ಮಾಡಿಕೊಂಡ 282 ಕುಟುಂಬಗಳ ವಿರುದ್ಧ ನೋಟಿಸ್ ನೀಡಿ, ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಭಾರತೀಯ ಪುರಾತತ್ವ ಇಲಾಖೆ ಪೀಠಕ್ಕೆ ಮಾಹಿತಿ ನೀಡಿತು.
ನ್ಯಾಯಪೀಠವು ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳು ಮತು ಅವಶೇಷಗಳ ಕಾಯ್ದೆ 1958ರ ಸೆಕ್ಷನ್ 19(2)ರ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗೆ ನಿರ್ದೇಶಿಸಿ, ವಿಚಾರಣೆಯನ್ನು ಮಾ.4ಕ್ಕೆ ಮುಂದೂಡಿತು.
Next Story





