ದುರ್ಬಲ ಜಾಗತಿಕ ಬೆಳವಣಿಗೆ ಭಾರತದ ಆರ್ಥಿಕ ಮಂದಗತಿಗೆ ಭಾಗಶಃ ಕಾರಣ: ಸಿಇಎ
ಹೊಸದಿಲ್ಲಿ, ಜ.31: 2019ರಲ್ಲಿ ದುರ್ಬಲ ಜಾಗತಿಕ ಆರ್ಥಿಕ ಬೆಳವಣಿಗೆಯು ಭಾರತೀಯ ಆರ್ಥಿಕತೆಯ ಮಂದಗತಿಗೆ ಭಾಗಶಃವಾಗಿ ಕಾರಣವಾಗಿತ್ತು ಎಂದು ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ಕೆ.ಸುಬ್ರಮಣಿಯನ್ ಅವರು ಹೇಳಿದ್ದಾರೆ.
ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಸಂಸತ್ತಿನಲ್ಲಿ 2019-20ನೇ ಸಾಲಿನ ಆರ್ಥಿಕ ಸಮೀಕ್ಷೆಯ ವರದಿಯನ್ನು ಮಂಡಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು,‘ ಭಾರತೀಯ ಆರ್ಥಿಕತೆಯು ಮಂದಗತಿಯಲ್ಲಿದೆ,2019ನೇ ಸಾಲಿನಲ್ಲಿ ಜಾಗತಿಕ ಆರ್ಥಿಕ ಹಿಂಜರಿತವು ನಮ್ಮ ಆರ್ಥಿಕತೆಯ ಹಿಂಜರಿಕೆಗೆ ಪ್ರಮುಖ ಕಾರಣಗಳಲ್ಲೊಂದಾಗಿದೆ ’ಎಂದರು.
Next Story





