ಮೈದಾನಿಮೂಲೆ ಯಂಗ್ ಮೆನ್ಸ್ ವಾರ್ಷಿಕ ಸಭೆ: ಅಧ್ಯಕ್ಷರಾಗಿ ಹಾರಿಸ್ ಅಡ್ಕ ಆಯ್ಕೆ

ಕುಂಬ್ರ: ದಖೀರತುಲ್ ಉಖ್ರಾ ಯಂಗ್ ಮೆನ್ಸ್ ಅಸೋಸಿಯೇಶನ್ ಮೈದಾನಿಮೂಲೆ ಇದರ ವಾರ್ಷಿಕ ಮಹಾಸಭೆ ಇತ್ತೀಚೆಗೆ ಮೈದಾನಿಮೂಲೆ ಮಸೀದಿಯಲ್ಲಿ ಸಯ್ಯಿದ್ ಮುಝಮ್ಮಿಲ್ ತಂಙಳ್ ಕಾಸರಗೋಡು ಇವರ ನೇತೃತ್ವದಲ್ಲಿ ಮೈದಾನಿಮೂಲೆ ಜುಮಾ ಮಸೀದಿ ಅಧ್ಯಕ್ಷ ಯೂಸುಫ್ ಹಾಜಿ ಕೈಕಾರ ಇವರ ಉಪಸ್ಥಿತಿಯಲ್ಲಿ ನಡೆಯಿತು.
2020-21ನೇ ಸಾಲಿನ ಅಧ್ಯಕ್ಷರಾಗಿ ಹಾರಿಸ್ ಅಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಸಾದಿಕ್ ನೀರ್ಪಾಡಿ, ಕೋಶಾಧಿಕಾರಿಯಾಗಿ ಕಾಸಿಮ್ ಉಜ್ರೋಡಿಯನ್ನು ನೇಮಕ ಮಾಡಲಾಯಿತು.
ಉಪಾಧ್ಯಕ್ಷರಾಗಿ ಅಬ್ಬಾಸ್ ಮುಡಾಳ, ಮುನೀರ್ ನೀರ್ಪಾಡಿ, ಜೊತೆ ಕಾರ್ಯದರ್ಶಿಗಳಾಗಿ ನಾಸಿರ್ ಉಜ್ರೋಡಿ, ಅಸ್ಕರ್ ನೀರ್ಪಾಡಿ ಹಾಗೂ ಲೆಕ್ಕ ಪರಿಶೋಧಕರಾಗಿ ಮಹಮ್ಮದ್ ಕೆ.ಎ ಇವರನ್ನು ನೇಮಕ ಮಾಡಲಾಯಿತು.
ಸದಸ್ಯರಾಗಿ ಜಮಾಲುದ್ದೀನ್ ಎನ್.ಕೆ, ಅಝೀಝ್ ನೀರ್ಪಾಡಿ, ಫಾರೂಕ್ ಇ.ಎ, ಅಶ್ಫಕ್ ಎ.ಕೆ, ನೌಫಲ್ ಮುಗೇರು, ಉಸ್ಮಾನ್ ಉಜ್ರೋಡಿ, ಸಹದ್ ಮೈದಾನಿಮೂಲೆ, ಹಮೀದ್ ಇಡಿಂಜಿಲ, ಹಸೈನಾರ್ ಇಡಿಂಜಿಲ, ಹನೀಫ್ ಮಾವಿನಡಿ, ಆಶಿಕ್ ಸಿ.ಹೆಚ್, ಅಬ್ಬಾಸ್ ಉಜ್ರೋಡಿಯನ್ನು ಆಯ್ಕೆ ಮಾಡಲಾಯಿತು.
ಜಮಾಅತ್ ಕಮಿಟಿ ಪದಾಧಿಕಾರಿಗಳು ಸಹಿತ ಹಲವರು ಉಪಸ್ಥಿತರಿದ್ದರು.





