ಫೆ. 4: ಕಲ್ಲಾಪು ಯುನಿಟಿ ಹಾಲ್‌ನಲ್ಲಿ ಜಿಲ್ಲಾ ಮಟ್ಟದ-ಬ್ಯಾರಿ ಪ್ರತಿನಿಧಿಗಳ ಸಮಾವೇಶ
ಮಂಗಳೂರು : ದ.ಕ. ಜಿಲ್ಲೆಯ ಎಲ್ಲಾ ತಾಲೂಕುಗಳ ಬ್ಯಾರಿ ಮುಸ್ಲಿಮರ ಸಾಮಾಜಿಕ, ರಾಜಕೀಯ, ಶೈಕ್ಷಣಿಕ ನಾಯಕರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಮಸೀದಿಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸಿ ಸಮನ್ವಯ ಸಾಧಿಸುವ ಉದ್ದೇಶದಿಂದ, ಅಖಿಲ ಭಾರತ ಬ್ಯಾರಿ ಪರಿಷತ್ ಮಂಗಳೂರು ಹಾಗೂ ಆಲ್ ಇಂಡಿಯಾ ಮುಸ್ಲಿಮ್ ಡೆವಲಪ್‌ಮೆಂಟ್ ಕೌನ್ಸಿಲ್‌ನ ದ.ಕ. ಜಿಲ್ಲಾ ಸಮಿತಿಯು, ಜಿಲ್ಲಾ ಮಟ್ಟದ ಬ್ಯಾರಿ ಪ್ರತಿನಿಧಿಗಳ ಸಮಾವೇಶ 2020ನ್ನು ದಿನಾಂಕ 4-2-2020 ನೇ ಮಂಗಳವಾರದಂದು, ಮಂಗಳೂರಿನ ತೊಕ್ಕೊಟ್ಟು ಸಮೀಪದ ಕಲ್ಲಾಪುವಿನ ಯುನಿಟಿ ಹಾಲ್‌ನಲ್ಲಿ ಜಂಟಿಯಾಗಿ ಆಯೋಜಿಸಿದೆ.
ಅಂದು ಬೆಳಿಗ್ಗೆ 8.15 ರಿಂದ 9.15 ರವರೆಗೆ ಪ್ರತಿನಿಧಿಗಳ ಆಗಮನ ಮತ್ತು ನೋಂದಾವಣೆೆ, 9-15 ರಿಂದ 10ರವರೆಗೆ ಉದ್ಘಾಟನಾ ಸಮಾರಂಭ, 10 ರಿಂದ 11-15 ರವರೆಗೆ NRC, CAA, NPR - ಇದರಸಾಧಕ ಭಾದಕಗಳ ಬಗ್ಗೆ ವಿಚಾರ ಸಂಕಿರಣ, 11-30 ರಿಂದ 12-15ರವರೆಗೆ ಭಾರತದ ಮುಸ್ಲಿಮರ ಸ್ಥಿತಿಗತಿ:- ಅಂದು-ಇಂದು-ಮುಂದು ಎಂಬ ಸಾಕ್ಷ್ಯಚಿತ್ರ ಪ್ರದರ್ಶನ, ಮಧ್ಯಾಹ್ನ 12-15 ರಿಂದ 1 ಗಂಟೆವರೆಗೆ ಚುನಾಯಿತ ಸಂಸ್ಥೆಗಳಲ್ಲಿ ಮುಸ್ಲಿಮರ ಪ್ರಾತಿನಿಧ್ಯ ಮತ್ತು ಸಾಂವಿಧಾನಿಕವಾಗಿ ಮೀಸಲಾತಿಯ ಪರಿಕಲ್ಪನೆ ಬಗ್ಗೆ ವಿಚಾರಗೋಷ್ಠಿ, ಹಾಗೂ ಅಪರಾಹ್ನ 1-45 ರಿಂದ 3-30 ರವರೆಗೆ ಸಮಾರೋಪ ಸಮಾರಂಭ ನಡೆಯಲಿದೆ.
ಸಮಾವೇಶವನ್ನು ಹಾಜಿ ಬಿ.ಎಂ. ಮುಮ್ತಾರ್ ಅಲಿ ಉದ್ಘಾಟಿಸಲಿದ್ದು, ಮನ್ಸೂರ್ ಅಹ್ಮದ್ ಅಝಾದ್ ಪ್ರಸ್ತಾವನೆಗೈಯಲಿದ್ದಾರೆ. ಅಹ್ಮದ್ ಮೊಹಿಯುದ್ದೀನ್ ವರ್ಲ್ಡ್‌ವೈಡ್ ಅಧ್ಯಕ್ಷತೆ ವಹಿಸಲಿದ್ದು, ಅಬ್ದುಲ್ ರವೂಫ್ ಪುತ್ತಿಗೆಯವರು ಪತ್ರಕರ್ತ ಬಿ. ಎಂ. ಹನೀಫ್‌ರವರು ಹೊರತಂದ ’ಸೆಕ್ಯೂಲರ್ ಸೇನಾನಿ ಸುಭಾಷ್‌ಚಂದ್ರ ಬೋಸ್’ ಎಂಬ ಪುಸ್ತಕದ 2ನೇ ಆವೃತ್ತಿಯನ್ನು ಬಿಡುಗಡೆ ಮಾಡಲಿದ್ದಾರೆ.
ಸಾಧಕ ಭಾದಕಗಳ ಬಗ್ಗೆ ಪತ್ರಕರ್ತ ಬಿ.ಎಂ. ಹನೀಫ್ ವಿಷಯ ಮಂಡಿಸಲಿದ್ದಾರೆ. ವೈ ಮುಹಮ್ಮದ್ ಬ್ಯಾರಿ ಅಧ್ಯಕ್ಷತೆ ವಹಿಸಲಿದ್ದು, ಹನೀಫ್ ಖಾನ್ ಕೊಡಾಜೆ ಮತ್ತು ಜೆ ಹುಸೈನ್‌ರವರು ಪ್ರತಿಕ್ರಿಯಿಸಲಿದ್ದಾರೆ. ಭಾರತೀಯ ಮುಸ್ಲಿಮರ ಸ್ಥಿತಿಗತಿ ಅಂದು-ಇಂದು-ಮುಂದು ಎಂಬ ಸಾಕ್ಷ್ಯಚಿತ್ರವನ್ನು ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಮ್ತಿಯಾರ್ ನಡೆಸಿಕೊಡಲಿದ್ದಾರೆ.
ಚುನಾಯಿತ ಸಂಸ್ಥೆಗಳಲ್ಲಿ ಮುಸ್ಲಿಮರ ಪ್ರಾತಿನಿಧ್ಯ ಮತ್ತು ಸಾಂವಿಧಾನಿಕವಾಗಿ ಮೀಸಲಾತಿಯ ಪರಿಕಲ್ಪನೆ ಬಗ್ಗೆ ಬಿ.ಎ. ಮುಹಮ್ಮದ್ ಹನೀಫ್ ವಿಷಯ ಮಂಡಿಸಲಿದ್ದು, ಕೆ.ಕೆ ಶಾಹುಲ್ ಹಮೀದ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಹಮ್ಮದ್ ಕುಂಜತ್‌ಬೈಲ್ ಹಾಗೂ ಇಸ್ಮತ್ ಫಜೀರ್ ಪ್ರತಿಕ್ರಿಯಿಸಲಿದ್ದಾರೆ.
ಸಮಾರೋಪ ಸಮಾರಂಭದ ಅದ್ಯಕ್ಷತೆಯನ್ನು ವಿಧಾನಪರಿಷತ್ ಸದಸ್ಯರಾದ ಹಾಜಿ ಬಿ.ಎಂ. ಫಾರೂಕ್ ವಹಿಸಲಿದ್ದು, ಮಂಗಳೂರು ಶಾಸಕ ಹಾಗೂ ಮಾಜಿ ಸಚಿವರಾದ ಯು.ಟಿ. ಖಾದರ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ವೈ. ಅಬ್ದುಲ್ಲಾ ಕುಂಞಿ, ಬಿ. ಎ. ಮೊದಿನ್ ಬಾವಾ, ಯು. ಕೆ. ಮೋನು ಕಣಚೂರು, ಜಿ. ಎ. ಬಾವಾ, ’ವಕ್ಫ್ ಅಧಿಕಾರಿ’ ಅಬೂಬಕ್ಕರ್, ಅತ್ತಾವುಲ್ಲಾ ಜೋಕಟ್ಟೆ, ಮುಹಮ್ಮದ್ ಕುಂಞಿ ವಿಟ್ಲ, ಬಿ. ಇಬ್ರಾಹಿಮ್, ಡಾ. ಇಫ್ತಿಕಾರ್ ಅಲಿ, ಟಿ.ಎಮ್. ಫೈಝಲ್, ಅಬ್ಬಾಸ್ ಅಲಿ ಬೊಳಂತೂರು, ಕೌನ್ಸಿಲರ್ ಮುಸ್ತಾಕ್ ಪಟ್ಲ, ಕಾರ್ಪೊರೇಟರ್ ಅಬ್ದುಲ್ ಲತೀಫ್ ಕಂದಕ್, ಉಸ್ಮಾನ್ ಕಲ್ಲಾಪು ಮತ್ತಿತರರು ಭಾಗವಹಿಸಲಿದ್ದಾರೆ. ಯೂಸುಫ್ ವಕ್ತಾರ್ ರವರು ನಿರ್ಣಯ ಮಂಡಿಸಲಿದ್ದು, ಬಿ.ಎ. ಮುಹಮ್ಮದ್ ಆಲಿ ಕಾರ್ಯಕ್ರಮ ನಿರ್ವಹಣೆ ಮಾಡಲಿದ್ದಾರೆ.







