‘ವಾರ್ತಾಭಾರತಿ’ ಕಚೇರಿಗೆ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಭೇಟಿ

ಮಂಗಳೂರು, ಜ.31: ಅಕ್ಷರ ಸಂತ, ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಶುಕ್ರವಾರ ಸಂಜೆ ನಗರದ ವೆಲೆನ್ಸಿಯಾದಲ್ಲಿರುವ ‘ವಾರ್ತಾಭಾರತಿ’ಯ ಪ್ರಧಾನ ಕಚೇರಿಗೆ ಭೇಟಿ ನೀಡಿದರು.
ಈ ಸಂದರ್ಭ ಸುದ್ದಿ ಸಂಪಾದಕ ಬಿಎಂ ಬಶೀರ್ ಹಾಗೂ ಪ್ರಧಾನ ವರದಿಗಾರ ಪುಷ್ಪರಾಜ್ ಅವರು ಹಾಜಬ್ಬರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.
ಬಳಿಕ ಪತ್ರಿಕೆಯ ಬಳಗದ ಜೊತೆಗೆ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಪದ್ಮಶ್ರೀ ಪ್ರಶಸ್ತಿಯ ಘೋಷಣೆಯ ದಿನದಂದು ಮುಂಜಾನೆ ಪತ್ರಿಕೆಯ ಪ್ರಧಾನ ಸಂಪಾದಕ ಎ.ಎಸ್.ಪುತ್ತಿಗೆ ಅವರು ತನ್ನ ಮನೆಗೆ ಅನಿರೀಕ್ಷಿತ ಭೇಟಿ ನೀಡಿದುದನ್ನು ನೆನಪಿಸಿಕೊಂಡು ಪುಳಕಿತರಾದರು.













