ಪಶ್ಚಿಮ ವಲಯ ಐಜಿಪಿ ಆಗಿ ಸೀಮಂತ್ ಕುಮಾರ್ ಸಿಂಗ್ ನೇಮಕ

ಮಂಗಳೂರು : ಪಶ್ಚಿಮ ವಲಯ ಐಜಿಪಿ ಅಗಿ ಸೀಮಂತ್ ಕುಮಾರ್ ಅವರನ್ನು ರಾಜ್ಯ ಸರಕಾರ ನೇಮಿಸಿದೆ.
ಬೆಂಗಳೂರಿನ ಪ್ರಧಾನ ಕಚೇರಿಯಲ್ಲಿ ಆಡಳಿತಾಧಿಕಾರಿಯಾಗಿದ್ದ ಇವರು ಈ ಹಿಂದೆ ದ.ಕ. ಜಿಲ್ಲಾ ಎಸ್ಪಿ ಮತ್ತು ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು.
ಕೋಮುಗಲಭೆ, ಅಹಿತಕರ ಘಟನೆ ನಡೆದ ಸಂದರ್ಭಗಳಲ್ಲಿ ಸ್ಥಳದಲ್ಲೇ ಮೊಕ್ಕಾಂ ಹೂಡಿ ಅಧೀನ ಅಧಿಕಾರಿಗಳಿಗೆ ಸ್ಥೈರ್ಯ ತುಂಬುವ ಮೂಲಕ ಗಮನ ಸೆಳೆದಿದ್ದರು.
Next Story





