ಜನರಲ್ಲಿ ವಿಶ್ವಾಸ ಮೂಡಿಸುವ ಬಜೆಟ್: ಕೋಟ
ಉಡುಪಿ, ಫೆ.1: ಕೇಂದ್ರದ ಬಜೆಟ್ ದೇಶದ ಸಾಮಾನ್ಯ ಜನರಲ್ಲಿ ವಿಶ್ವಾಸ ಹಾಗೂ ತೃಪ್ತಿ ಮೂಡಿಸಿದೆ. ಸಮೃದ್ಧವಾದ, ದೂರಗಾಮಿ ಕಲ್ಪನೆಯ ಜನಪರ ವಾದ ಬಜೆಟ್‌ನ್ನು ಮೋದಿ ಸರಕಾರ ನೀಡಿದೆ ಎಂದು ರಾಜ್ಯ ಮೀನು ಗಾರಿಕೆ, ಬಂದರು ಮತ್ತು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಗ್ರಾಮೀಣಾಭಿವೃದ್ಧಿಗೆ ಒಂದು ಕಾಲು ಲಕ್ಷ ಕೋಟಿ ಮೀಸಲಿರಿಸಿರುವುದು ಐತಿಹಾಸಿಕ ದಾಖಲೆಯಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ 112 ಜಿಲ್ಲೆಗಳಲ್ಲಿ ಆಸ್ಪತ್ರೆ ತೆರೆಯುವುದು ಮತ್ತು ಕಿಸಾನ್ ರೈಲು ಬಿಡುಗಡೆ ಸೇರಿದಂತೆ ಬಜೆಟ್‌ನಲ್ಲಿ ಪ್ರಕಟಿಸಿರುವ ಅನೇಕ ಯೋಜನೆಗಳನ್ನು ದೂರಗಾಮಿ ಯೋಜನೆಗಳಾಗಿವೆ. ಸಾಮಾನ್ಯ ಜನರ ಬದುಕಿಗೆ ಶಕ್ತಿ ಕೊಡುತ್ತದೆ. ಕಾಶ್ಮೀರಕ್ಕೆ 37ಸಾವಿರ ಕೋಟಿ ರೂ. ಮೀಸಲಿರಿಸಿರುವ ಮೂಲಕ ಕಾಶ್ಮೀರದ ಮೂಲಭೂತ ಸೌಕರ್ಯ ಅಭಿವೃದ್ಧಿಯಾಗಲಿದೆ. ಬಜೆಟ್ ನಲ್ಲಿ ರಾಷ್ಟ್ರೀಯ ಭದ್ರತೆಗೆ ಒತ್ತು ನೀಡಲಾಗಿದೆ ಎಂದರು.
Next Story





