ಪ್ರಧಾನಿಯ ಎಸ್‌ಪಿಜಿ ರಕ್ಷಣೆಗೆ ಈ ವರ್ಷ 600 ಕೋ.ರೂ. ಮೀಸಲು

ಹೊಸದಿಲ್ಲಿ,ಫೆ.1: ಪ್ರಧಾನಿಯವರ ಸುರಕ್ಷತೆಯ ಹೊಣೆಯನ್ನು ಹೊತ್ತಿರುವ ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ (ಎಸ್‌ಪಿಜಿ) ಗೆ 2020-21ನೇ ಸಾಲಿನ ಕೇಂದ್ರ ಮುಂಗಡ ಪತ್ರದಲ್ಲಿ ಸುಮಾರು 600 ಕೋ.ರೂ.ಗಳನ್ನು ಮೀಸಲಿರಿಸಲಾಗಿದೆ. ಕಳೆದ ವರ್ಷದ ಮುಂಗಡಪತ್ರದಲ್ಲಿ ಈ ಮೊತ್ತವನ್ನು 420 ಕೋ.ರೂ.ಗಳಿಂದ 540 ಕೋ.ರೂ.ಗೆ ಹೆಚ್ಚಿಸಲಾಗಿತ್ತು.
ಪ್ರಸಕ್ತ ಪ್ರಧಾನಿ ನರೇಂದ್ರ ಮೋದಿ ಅವರು 3,000 ಸಿಬ್ಬಂದಿಗಳಿರುವ ಎಸ್‌ಪಿಜಿ ರಕ್ಷಣೆಯಲ್ಲಿರುವ ಏಕೈಕ ವ್ಯಕ್ತಿಯಾಗಿದ್ದಾರೆ.
ಸೋನಿಯಾ ಗಾಂಧಿ,ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರಿಗೆ ನೀಡಲಾಗಿದ್ದ ಭದ್ರತೆಯನ್ನು ಕಳೆದ ವರ್ಷದ ನವೆಂಬರ್‌ನಲ್ಲಿ ಪರಿಷ್ಕರಿಸಿದ ಸರಕಾರವು ಎಸ್‌ಪಿಜಿ ರಕ್ಷಣೆಯನ್ನು ಹಿಂದೆಗೆದುಕೊಂಡಿತ್ತು. ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ಎಸ್‌ಪಿಜಿ ಭದ್ರತೆಯನ್ನೂ ಕಳೆದ ವರ್ಷದ ಆಗಸ್ಟ್‌ನಲ್ಲಿ ಹಿಂದೆಗೆದುಕೊಳ್ಳಲಾಗಿತ್ತು.
Next Story





