Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಇಯುನಿಂದ ಬ್ರಿಟನ್ ನಿರ್ಗಮನ: ರಾತ್ರಿಯಿಡೀ...

ಇಯುನಿಂದ ಬ್ರಿಟನ್ ನಿರ್ಗಮನ: ರಾತ್ರಿಯಿಡೀ ಸಂಭ್ರಮಿಸಿದ ಜನತೆ

ವಾರ್ತಾಭಾರತಿವಾರ್ತಾಭಾರತಿ1 Feb 2020 10:21 PM IST
share
ಇಯುನಿಂದ ಬ್ರಿಟನ್ ನಿರ್ಗಮನ: ರಾತ್ರಿಯಿಡೀ ಸಂಭ್ರಮಿಸಿದ ಜನತೆ

ಲಂಡನ್, ಫೆ.1: 47 ವರ್ಷಗಳಿಂದ ಯುರೋಪಿಯನ್ ಒಕ್ಕೂಟ(ಇಯು)ದಲ್ಲಿ ಸದಸ್ಯನಾಗಿದ್ದ ಬ್ರಿಟನ್ ಒಕ್ಕೂಟದಿಂದ ನಿರ್ಗಮಿಸುವ ಬಗ್ಗೆ ದೇಶದ ಜನತೆ ನೀಡಿದ್ದ ಐತಿಹಾಸಿಕ ಜನಮತದ ಹಿನ್ನೆಲೆಯಲ್ಲಿ ಬ್ರಿಟನ್ ಜನವರಿ 31ರಂದು ಇಯುವಿನಿಂದ ಅಧಿಕೃತವಾಗಿ ನಿರ್ಗಮಿಸಿದೆ.

ಆದರೆ ಬ್ರಿಟನ್ ಇಯು ಸದಸ್ಯನಾಗಿಯೇ ಮುಂದುವರಿಯಬೇಕು ಎಂದು ಮತ ಚಲಾಯಿಸಿದ್ದ ಸ್ಕಾಟ್‌ ಲ್ಯಾಂಡ್‌ನ ಹಲವೆಡೆ ಮೋಂಬತ್ತಿ ಹಿಡಿದು ಮೆರವಣಿಗೆ ನಡೆಸುವ ಮೂಲಕ ವಿರೋಧ ಸೂಚಿಸಲಾಗಿದೆ. ಈ ಐತಿಹಾಸಿಕ ಕ್ಷಣವನ್ನು ದೇಶದ ಜನತೆ ರಾತ್ರಿಯಿಡೀ ಸಂಭ್ರಮಾಚರಿಸುವ ಮೂಲಕ ಸ್ವಾಗತಿಸಿದರು. ಶುಕ್ರವಾರ ರಾತ್ರಿ 11ಗಂಟೆ(ಜಿಎಂಟಿ)ಯಿಂದ ಬ್ರಿಟನ್ ಯುರೋಪಿಯನ್ ಒಕ್ಕೂಟದ ಸದಸ್ಯನಾಗಿರುವುದಿಲ್ಲ .

ಬ್ರಿಟನ್‌ನ ಹೊಸ ಯುಗದ ಸೂರ್ಯೋದಯದ ಐತಿಹಾಸಿಕ ಕ್ಷಣ ಇದಾಗಿದೆ ಎಂದು ಬ್ರಿಟನ್‌ನ ಪ್ರಧಾನಿ ಬೋರಿಸ್ ಜಾನ್ಸನ್ ಬಣ್ಣಿಸಿದ್ದಾರೆ. ನಮ್ಮ ಮಹಾನ್ ರಾಷ್ಟ್ರೀಯ ನಾಟಕದಲ್ಲಿ ಇದು ಬೆಳಕು ಹರಿಯುವ ಮತ್ತು ಪರದೆ ಮೇಲಕ್ಕೆ ಸರಿದು ಹೊಸ ನಟನೆಯ ಶುಭ ಸಮಯವಾಗಿದೆ. ಇದು ಕೇವಲ ಕಾನೂನುಬದ್ಧ ನಿರ್ಗಮನ ಪ್ರಕ್ರಿಯೆ ಮಾತ್ರವಲ್ಲ, ಇದು ನಿಜವಾದ ರಾಷ್ಟ್ರೀಯ ನವೀಕರಣ ಮತ್ತು ಬದಲಾವಣೆಯಾಗಿದೆ. ದೇಶದ ಯಾವ ಭಾಗದಲ್ಲಿ ನೀವು ಹುಟ್ಟಿ ಬೆಳೆದಿರುವಿರೋ ಅದರ ಮೇಲೆ ನಿಮ್ಮ ಜೀವನದ ಅವಕಾಶ ಅವಲಂಬಿತವಾಗಿದೆ ಎಂಬುದನ್ನು ಇನ್ನು ಮುಂದೆ ಒಪ್ಪಿಕೊಳ್ಳಬೇಕಿಲ್ಲದ ಹೊಸ ಯುಗದ ಆರಂಭ ಇದಾಗಿದೆ ಎಂದು ಪ್ರಧಾನಿ ಜಾನ್ಸನ್ ಹೇಳಿದ್ದಾರೆ.

ಈ ದಿನ ಯುರೋಪಿಯನ್ ಒಕ್ಕೂಟ ಮತ್ತು ಶಕ್ತಿಯುತ ಬ್ರಿಟನ್‌ನ ನಡುವೆ ಸಹಕಾರ ಸಂಬಂಧದ ಹೊಸ ಯುಗದ ಆರಂಭವಾಗಿದೆ. ಪರಸ್ಪರ ವ್ಯಾಪಾರ ಸಂಬಂಧದ ನವ ಯುಗಕ್ಕೆ ಈ ದಿನ ವೇದಿಕೆಯಾಗಲಿದೆ ಎಂದು ಜಾನ್ಸನ್ ಹೇಳಿದ್ದಾರೆ. ಪಾರ್ಲಿಮೆಂಟ್ ವೃತ್ತದಲ್ಲಿ ಔತಣಕೂಟ ಮತ್ತು ಡೌನಿಂಗ್ ಸ್ಟ್ರೀಟ್‌ನಲ್ಲಿ ಬಣ್ಣಬಣ್ಣದ ಬೆಳಕಿನ ಪ್ರದರ್ಶನ ಬ್ರೆಕ್ಸಿಟ್ ನಿರ್ಗಮದ ಕ್ಷಣಗಣನೆಗೆ ಸಾಕ್ಷಿಯಾಗಿತ್ತು. ಈ ಮಧ್ಯೆ, ದೇಶದ ಕೆಲವೆಡೆ ಬ್ರೆಕ್ಸಿಟ್ ವಿರೋಧಿ ರ್ಯಾಲಿಗಳೂ ನಡೆದಿವೆ. ನಮ್ಮ ಮಹಾನ್ ದೇಶದ ಆಧುನಿಕ ಚರಿತ್ರೆಯಲ್ಲಿ ದಾಖಲಾಗಿರುವ ಈ ಅದ್ಭುತ ಕ್ಷಣವನ್ನು ರಾತ್ರಿಯಿಡೀ ಜಾಗರಣೆ ಮಾಡಿ ಆನಂದಿಸುತ್ತಿದ್ದೇವೆ ಎಂದು ಬ್ರೆಕ್ಸಿಟ್ ಪರ ತಂಡದ ಮುಖಂಡ ನಿಜೆಲ್ ಫ್ಯರೇಜ್ ಪ್ರತಿಕ್ರಿಯಿಸಿದ್ದಾರೆ. ಬ್ರಿಟನ್‌ನೆಲ್ಲೆಡೆ ಪಬ್ ಹಾಗೂ ಇತರ ಕ್ಲಬ್‌ಗಳಲ್ಲಿ ಬ್ರೆಕ್ಸಿಟ್ ಔತಣಕೂಟ ಹಮ್ಮಿಕೊಳ್ಳಲಾಗಿತ್ತು. ಬ್ರಿಟನ್ ಯುರೋಪಿಯನ್ ಯೂನಿಯನ್‌ನಿಂದ ಹೊರಬರಬೇಕೇ ಎಂದು ನಿರ್ಧರಿಸಲು 2016ರಲ್ಲಿ ನಡೆಸಿದ್ದ ಜನಮತ ಸಂಗ್ರಹದ ಸಂದರ್ಭ ಸ್ಕಾಟ್‌ಲ್ಯಾಂಡ್‌ನ ಹಲವೆಡೆ ಬ್ರಿಟನ್ ಇಯುವಿನಲ್ಲೇ ಮುಂದುವರಿಯಬೇಕು ಎಂಬ ಆಗ್ರಹ ಕೇಳಿಬಂದಿತ್ತು. ಜನಾಭಿಪ್ರಾಯ ಬ್ರೆಕ್ಸಿಟ್ ಪರ ಬಂದಾಗ ಅದನ್ನು ವಿರೋಧಿಸಿದ್ದ ಸ್ಕಾಟ್‌ಲ್ಯಾಂಡ್, ತಾನು ಬ್ರಿಟನ್‌ನಿಂದ ಪ್ರತ್ಯೇಕವಾಗುವ ಬಗ್ಗೆ ಮತ್ತೊಂದು ಸ್ವತಂತ್ರ ಜನಾಭಿಪ್ರಾಯ ನಡೆಯಬೇಕು ಎಂದು ಆಗ್ರಹಿಸಿತ್ತು.

 ಈ ಹಿನ್ನೆಲೆಯಲ್ಲಿ ಶುಕ್ರವಾರ ಬ್ರಿಟನ್‌ನ ಇತರೆಡೆ ಸಂಭ್ರಮಾಚರಣೆಯಿದ್ದರೆ ಸ್ಕಾಟ್‌ಲ್ಯಾಂಡ್‌ನ ಹಲವೆಡೆ ಮೋಂಬತ್ತಿ ಹಿಡಿದು ಪ್ರತಿಭಟನೆ ನಡೆದಿದೆ. ಶುಕ್ರವಾರದ ಸಂಭ್ರಮಾಚರಣೆ ಸಂದರ್ಭ ನಡೆದ ಅಹಿತಕರ ಘಟನೆಗೆ ಸಂಬಂಧಿಸಿ ಲಂಡನ್ ಪೊಲೀಸರು ನಾಲ್ವರನ್ನು ಬಂಧಿಸಿದ್ದರೆ, ಸ್ಕಾಟ್‌ಲ್ಯಾಂಡ್‌ನ ಗ್ಲಾಸ್ಗೋದಲ್ಲಿ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಅಲ್ಲದೆ ಮದ್ಯಪಾನ ಮಾಡಿ ಕ್ರಿಮಿನಲ್ ಕೃತ್ಯದಲ್ಲಿ ತೊಡಗಿದ್ದ ಆರೋಪದಲ್ಲಿ ಒಬ್ಬ ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X