ಉಡುಪಿ ವಕ್ಫ್ ಅಧ್ಯಕ್ಷರಿಂದ ಪ್ರಮಾಣ ವಚನ

ಉಡುಪಿ, ಫೆ.1: ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ದಾವೂದ್ ಅಬೂಬಕ್ಕರ್ ಇಂದು ಮಣಿಪಾಲ ರಜತಾದ್ರಿಯಲ್ಲಿರುವ ಜಿಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ನೂತನ ಉಪಾಧ್ಯಕ್ಷ ಜುನೈದ್ ಮತ್ತು ಮೊಹಮ್ಮದ್ ಮನ್ಸೂರ್ ಸಹಿತ 18 ಮಂದಿ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿ ದರು. ಸಭೆಯಲ್ಲಿ ಉಡುಪಿ ಜಿಲ್ಲೆಗೆ ಸಂಬಂಧ ಪಟ್ಟ ಮಸೀದಿಯ ಆಡಳಿತ ಕಮಿಟಿಯ ಅಧ್ಯಕ್ಷರು ಹಾಗು ವಕ್ಫ್ ಸಲಹಾ ಸಮಿತಿಯ ಅಧಿಕಾರಿಗಳಾದ ನಾಝಿಯ, ಮುಜಾಹಿದ್ ಪಾಷಾ, ಮುಝಮ್ಮಿಲ್ ಮುಂತಾದವರು ಉಪಸ್ಥಿತರಿದ್ದರು.
Next Story





