ಮೀನುಗಾರಿಕೆಗೆ ಪ್ರೋತ್ಸಾಹದಾಯಕ ಬಜೆಟ್: ಶಾಸಕ ವೇದವ್ಯಾಸ ಕಾಮತ್
ಮಂಗಳೂರು, ಫೆ.1: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜನತೆಯ ಆಶೋತ್ತರಗಳಿಗೆ ಪೂರಕ ಹಾಗೂ ಮೀನುಗಾರಿಕೆಗೆ ಪ್ರೋತ್ಸಾಹದಾಯಕ ಬಜೆಟ್ ಮಂಡಿಸಿದ್ದಾರೆ ಎಂದು ಶಾಸಕ ವೇದವ್ಯಾಸ ಕಾಮತ್ ಅಭಿಪ್ರಾಯಪಟ್ಟಿದ್ದಾರೆ.
ಒಂದು ಲಕ್ಷ ಕೋಟಿ ರೂ. ಮೌಲ್ಯದ ಮೀನು ರಫ್ತಿನ ಗುರಿ ಹಾಗೂ 200 ಲಕ್ಷ ಟನ್ ಮೀನು ಉತ್ಪಾದನೆಯ ಗುರಿಯಿಂದ ಕರಾವಳಿ ಜಿಲ್ಲೆಯಲ್ಲಿ ಮೀನುಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ ದೊರೆಯಲಿದೆ. ಇದರಿಂದ ಯುವ ಜನರಿಗೆ ವಿಪುಲ ಉದ್ಯೋಗಾವಕಾಶ ನಿರೀಕ್ಷಿಸಬಹುದಾಗಿದೆ ಎಂದು ಹೇಳಿದರು.
ಆರೋಗ್ಯ ಮತ್ತು ನೈರ್ಮಲ್ಯಕ್ಕೆ 69 ಸಾವಿರ ಕೋಟಿ ರೂ.ಮೀಸಲು, ಜನೌಷಧಿ ಕೇಂದ್ರಗಳ ವಿಸ್ತರಣೆ, ಕ್ಷಯ ರೋಗ ನಿರ್ಮೂಲನೆ, ಹೊಸ ಶಿಕ್ಷಣ ನೀತಿ, ಮೂಲ ಸೌಕರ್ಯಕ್ಕೆ ನೂರು ಲಕ್ಷ ಕೋಟಿ ರೂ. ಮೀಸಲು ಸ್ವಾಗತಾರ್ಹ ಅಂಶಗಳು. ಆದಾಯ ತೆರಿಗೆ ಇಳಿಕೆ ಮಧ್ಯಮ ವರ್ಗದವರಿಗೆ ವರದಾನವಾಗಿದೆ ಎಂದರು.
ದೇಶದ ಆರ್ಥಿಕ ಪ್ರಗತಿ ಮತ್ತು ಸಾಮಾಜಿಕ ಕಾಳಜಿಯು ಬಜೆಟ್‌ನಲ್ಲಿ ಅಡಕವಾಗಿದೆ. ಕೃಷಿ ಅಭಿವೃದ್ಧಿ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ವಿಶೇಷ ಆದ್ಯತೆ ನೀಡಿರುವುದು ಗಮನಾರ್ಹ ಅಂಶ ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದರು.





