ಫೆ. 2ರಂದು ಕಳತ್ತೂರಿನಲ್ಲಿ ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ
ಕಾಪು : ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ತಜ್ಞ ವೈದ್ರ ತಂಡದಿಂದ ಬೃಹತ್ ಉಚಿತ ವೈದ್ಯಕೀಯ ತಪಾಸಣೆ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಫೆ. 2ರಂದು ಚಂದ್ರನಗರದ ಕಳತ್ತೂರು ಕುಶಲ ಶೇಕರ ಶೆಟ್ಟಿ ಆಡಿಟೋರಿಯಂನಲ್ಲಿ ಬೆಳಿಗ್ಗೆ 8 ಗಂಟೆಯಿಂದ ಮದ್ಯಾಹ್ನ 1ಗಂಟೆ ತನಕ ನಡೆಯಲಿದೆ.
ಜನಸಂಪರ್ಕ ಜನಸೇವಾ ವೇದಿಕೆ ಮತ್ತು ಸಮಾಜ ಸೇವಾ ವೇದಿಕೆ ಕಳತ್ತೂರು ಕಾಪು ಇದರ ಆಶ್ರಯದಲ್ಲಿ ಮೊಗವೀರ ಯುವಸಂಘಟನೆ ಬೆಳ್ಳಂಪಳ್ಳಿ, ಡಾ. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಉಡುಪಿ, ಕುಶಲ ಶೇಖರ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಕಳತ್ತೂರು, ಶಿರ್ವ ರೋಟರಿ ಕ್ಲಬ್ ಇವರ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಕಸ್ತೂರ್ಬಾ ಮಣಿಪಾಲ (ಕೆ.ಎಂ.ಸಿ)ಯಿಂದ ಉನ್ನತ ನುರಿತ ಡಾಕ್ಟರ್‍ಗಳು ಹಾಗೂ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆ ಮುಖ್ಯಾಧಿಕಾರಿ ಹಾಗೂ ಕೆ.ಎಂ.ಸಿ ವೈದ್ಯಾಧಿಕಾರಿಗಳು ಹಾಗು ಸಮಾಜ ಸೇವಕರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





