ಬ್ಯಾಂಕ್ ಆಫ್ ಬರೋಡಾದ ವತಿಯಿಂದ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್, ಪುಸ್ತಕ ವಿತರಣೆ

ಭಟ್ಕಳ: ಇಲ್ಲಿನ ಬ್ಯಾಂಕ್ ಆಫ್ ಬರೋಡಾದ ವತಿಯಿಂದ ಗಣರಾಜ್ಯೋತ್ಸವದ ಅಂಗವಾಗಿ ಸಾಮಾಜಿಕ ಸೇವಾ ಯೋಜನೆಯಡಿಯಲ್ಲಿ ತಲಗೋಡ ಕಿರಿಯ ಪ್ರಾಥಮಿಕ ಶಾಲೆ-1 ಮತ್ತು ಕಿರಿಯ ಪ್ರಾಥಮಿಕ ಶಾಲೆ-2 ಇವುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ಹಾಗೂ ಪುಸ್ತಕ, ಪೆನ್ ವಿತರಿಸಲಾಯಿತು.
ಈ ಸಂದರ್ಭ ಶಾಖಾ ವ್ಯವಸ್ಥಾಪಕ ಶಂಭಾಜಿ ಎಸ್. ಎಸ್., ಸಿಬ್ಬಂದಿಗಳಾದ ಮಹೇಶ್, ದೀಪಕ್, ರಜತ್ ಆಚಾರ್ಯ, ಮೊನಿಶಾ, ಸಂತೋಷಿ, ಶಾಲಾ ಮುಖ್ಯೋಪಾಧ್ಯಾಯ ಗಣಪತಿ ಹೆಗಡೆ, ಸರಸ್ವತಿ ಹೆಗಡೆ, ಎಸ್.ಡಿ.ಎಂ.ಸಿ. ಅಧ್ಯಕ್ಷ ರಾಮಾ ಗೊಂಡ, ಉಪಾಧ್ಯಕ್ಷೆ ಅಂಬಿಕಾ, ಗ್ರಾ.ಪಂ. ಸದಸ್ಯ ದಾಸಾ ನಾಯ್ಕ ಮುಂತಾದವರು ಉಪಸ್ಥಿತರಿದ್ದರು
Next Story





