ಕೇಂದ್ರ ಬಜೆಟ್ ಬಗ್ಗೆ ತುಮಕೂರು ಜಿಲ್ಲೆಯ ರಾಜಕೀಯ ನಾಯಕರ ಪ್ರತಿಕ್ರಿಯೆ

ತುಮಕೂರು, ಫೆ.1: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ ಬಗ್ಗೆ ಜಿಲ್ಲೆಯ ಪ್ರಮುಖ ರಾಜಕೀಯ ನಾಯಕರು ಪ್ರತಿಕ್ರಿಯೆ ವ್ಯಕ್ತಡಡಿಸಿದ್ದಾರೆ.
ಹಳೇ ಬಾಟಲಿಗೆ ಹೊಸ ಮದ್ಯವನ್ನು ಸುರಿದಿದ್ದಾರೆ, ಕೇಂದ್ರ ಮಂಡಿಸಿರುವ ಬಜೆಟ್‍ಗೆ ಆದಾಯದ ಮೂಲವೇ ತಿಳಿದಿಲ್ಲ, ಇದರಿಂದ ರಾಜ್ಯಕ್ಕೆ ಯಾವ ಕೊಡುಗೆಯೂ ಸಿಕ್ಕಿಲ್ಲ
-ಎಸ್.ಪಿ.ಮುದ್ದಹನುಮೇಗೌಡ, ಮಾಜಿ ಸಂಸದ
ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ಜನಸಾಮಾನ್ಯರಿಗೆ ಹೊರೆ ಆಗುವಂತಿದೆ. ಬಜೆಟ್‍ನಿಂದ ಯಾರಿಗೂ ಅನುಕೂಲವಾಗಿಲ್ಲ, ಎಲ್‍ಐಸಿ ಹೂಡಿಕೆ ಹಣಕ್ಕೆ ಕತ್ತರಿ ಹಾಕಿರುವುದೇ ದೊಡ್ಡ ಕೊಡುಗೆ
-ಡಾ.ರಫೀಕ್ ಅಹ್ಮದ್, ಮಾಜಿ ಶಾಸಕ
5 ಲಕ್ಷ ರೂ. ಗಳ ಒಳಗೆ ಆದಾಯ ಹೊಂದಿರುವ ಮಧ್ಯಮ ವರ್ಗದ ಜನರಿಗೆ ತೆರಿಗೆ ವಿನಾಯಿತಿ ನೀಡಿರುವುದು ಸ್ವಾಗತಾರ್ಹ. ಕೃಷಿ, ಶಿಕ್ಷಣ, ಆರೋಗ್ಯ, ಮಧ್ಯಮ ಕೈಗಾರಿಕೆ ಹಾಗೂ ವ್ಯಾಪಾರ ಕ್ಷೇತ್ರಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಈ ಬಜೆಟ್ ಪೂರಕವಾಗಿದೆ.
-ಜಿ.ಬಿ. ಜ್ಯೋತಿಗಣೇಶ್, ಶಾಸಕರು
Next Story





