ಆಮದು ಇವಿಗಳಿಗೆ ಸೀಮಾಸುಂಕ ಹೆಚ್ಚಳ

ಹೊಸದಿಲ್ಲಿ,ಫೆ.1: ಸ್ಥಳೀಯ ಉತ್ಪಾದನೆಗೆ ಒತ್ತು ನೀಡುವ ಸರಕಾರದ ಉದ್ದೇಶದ ಹಿನ್ನೆಲೆಯಲ್ಲಿ 2020-21ನೇ ಸಾಲಿನ ಮುಂಗಡಪತ್ರದಲ್ಲಿ ಆಮದು ಮಾಡಲಾದ ವಿದ್ಯುತ್‌ಚಾಲಿತ ವಾಹನ (ಇವಿ)ಗಳ ಮೇಲಿನ ಸೀಮಾ ಸುಂಕವನ್ನು ಹೆಚ್ಚಿಸಲಾಗಿದೆ. ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಲೋಕಸಭೆಯಲ್ಲಿ ತನ್ನ ಮುಂಗಡ ಪತ್ರ ಭಾಷಣದಲ್ಲಿ ಈ ಏರಿಕೆಯನ್ನು ಪ್ರಕಟಿಸಿದರು.
ಸಂಪೂರ್ಣವಾಗಿ ತಯಾರಾಗಿರುವ ಆಮದು ಮಾಡಲಾದ ವಾಣಿಜ್ಯಿಕ ವಿದ್ಯುತ್‌ಚಾಲಿತ ವಾಹನಗಳಿಗೆ ಈಗ ಶೇ.25ರಷ್ಟು ಸೀಮಾಸುಂಕವನ್ನು ವಿಧಿಸಲಾಗುತ್ತಿದ್ದು,ಎ.1ರಿಂದ ಇದು ಶೇ.40ಕ್ಕೆ ಹೆಚ್ಚಲಿದೆ. ವಿದ್ಯುತ್ ಚಾಲಿತ ವಾಹನಗಳ ಭಾಗಶಃ ಜೋಡಣೆಗೊಂಡ ಬಿಡಿಭಾಗಗಳ ಕಿಟ್‌ಗೆ ಈಗ ವಿಧಿಸಲಾಗುತ್ತಿರುವ ಶೇ.15 ಸೀಮಾಸುಂಕ ಎ.1ರಿಂದ ಶೇ.30ಕ್ಕೆ ಹೆಚ್ಚಲಿದೆ ಎಂದು ಸೀತಾರಾಮನ್ ತಿಳಿಸಿದರು.
Next Story





