Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಸಂಬಂಧ – ಸಿದ್ಧಾಂತಗಳನ್ನು...

ಸಂಬಂಧ – ಸಿದ್ಧಾಂತಗಳನ್ನು ನಿಕಷಕ್ಕೊಡ್ಡುವ ಬ್ರಾಹ್ಮಿನ್ ಕೆಫೆ

ಪುಸ್ತಕ ಪರಿಮಳ

ಗುರುಪ್ರಸಾದ್ ಕಂಟಲಗೆರೆಗುರುಪ್ರಸಾದ್ ಕಂಟಲಗೆರೆ2 Feb 2020 11:19 AM IST
share
ಸಂಬಂಧ – ಸಿದ್ಧಾಂತಗಳನ್ನು ನಿಕಷಕ್ಕೊಡ್ಡುವ ಬ್ರಾಹ್ಮಿನ್ ಕೆಫೆ

ವಿ.ಆರ್ ಕಾರ್ಪೆಂಟರ್ ರವರು ಈ ಹಿಂದೆಯೇ ತಮ್ಮ ಈಗಿನ ಬ್ರಾಹ್ಮಿನ್ ಕೆಫೆಯ ಕಥೆಗಳಲ್ಲಿ ಕೆಲವನ್ನು ಕೇಳಿಸಿದ್ದರು. ಅದರ ವಸ್ತು ಮತ್ತು ವೇಗಕ್ಕೆ ಆಗಲೇ ನಾನು ಪುಳಕಿತನಾಗಿದ್ದೆ.

ಈಗ ಇಡಿಯಾಗಿ ಓದಲಿಕ್ಕೆ ಸಿಕ್ಕವು. ಒಂದೆರೆಡು ಸಿಟ್ಟಿಂಗ್‌ನಲ್ಲೆ ಒಂಭತ್ತೂ ಕಥೆಯನ್ನು ಓದಿ ಮುಗಿಸಿದೆ.

ಕಾರ್ಪೆಂಟರ್ ತಮ್ಮ ಕಥೆಗಳಲ್ಲಿ ಇತರರಂತೆ ವರ್ತಮಾನವನ್ನು ಹೇಳುತ್ತ ಭೂತದಲ್ಲೇ ಇಡೀ ಕಾಲವನ್ನು ಕಳೆಯುವುದಿಲ್ಲ, ಅವರ ನೋಟವೇನಿದ್ದರು ವರ್ತಮಾನದಿಂದ ಭವಿಷ್ಯದ ಕಡೆಗಿನ ಸೀಳುನೋಟ.

ಕಾರ್ಪೆಂಟರ್ ಸಹ ಇವತ್ತಿನ ಸಮಕಾಲೀನ ಆತಂಕಗಳನ್ನೇ ವಸ್ತುವನ್ನಾಗಿಸಿಕೊಂಡಿದ್ದರೂ ಆ ಸಿದ್ಧಾಂತದ ಪ್ರತಿಪಾದನೆಗೆಂದೇ ಹೆಚ್ಚಿನ ಸಮಯ ವ್ಯಯಿಸಿ ಬೋರ್ ಹಿಡಿಸುವುದಿಲ್ಲ. ಅದೇನಿದ್ದರೂ ಓದುಗನಿಗೆ ದಕ್ಕುವುದು ಅಂತ್ಯದ ಒಂದೋ ಎರಡೊ ಪ್ಯಾರದಲ್ಲಿ. ಅದರಾಚೆಗೆ ಅವರು ಜನರ ಬದುಕನ್ನು ತಮ್ಮದೇ ಆದ ಕಣ್ಣಿನಲ್ಲಿ ಕಂಡು ಅದನ್ನ ಓದುಗರ ಮನಸ್ಸಿನಲ್ಲಿ ಅಚ್ಚಿಳಿಸುವುದರ ಕಡೆಗೆ ಹೆಚ್ಚು ಆಸಕ್ತಿ. ಆ ಕಾರಣಕ್ಕೆ ಅಲ್ಲಿನ ವಿವರಗಳು ನಮ್ಮೆಳಗೆ ಸ್ಥಾಯಿಯಾಗಿ ಉಳಿದುಕೊಂಡು ಬಿಡುತ್ತವೆ.

 ಸಿನೆಮಾ ಕೂಡ ಕಾರ್ಪೆಂಟರ್‌ರವರ ಆಸಕ್ತಿಯ ಕ್ಷೇತ್ರವಾಗಿರುವ ಕಾರಣಕ್ಕೊ ಏನೊ ಸಂಕಲನದಲ್ಲಿನ ಒಂದೆರೆಡು ಪ್ರಮುಖ ಕಥೆಗಳು ಬಿಡಿ ಬಿಡಿ ದೃಶ್ಯದಲ್ಲಿ ಕಥೆ ಹೇಳುತ್ತ ಬದಲಾಗುತ್ತ ಹೋಗುತ್ತವೆ. ಸ್ಕ್ರೀನ್‌ಪ್ಲೇ ಅನುಭವ ಕೊಡುತ್ತವೆ. ಈ ತಂತ್ರ ಯಾವುದೇ ರೀತಿಯ ತೊಡಕಿಗೆ ಕಾರಣವಾಗದೆ ಇನ್ನೊಂದು ಬಗೆಯಲ್ಲಿ ಇಷ್ಟ ಆಗುತ್ತ ಹೋಗುತ್ತದೆ.

 ಅಪ್ಪಟ ಗ್ರಾಮ್ಯ ಲೋಕದ ಮತ್ತು ನಗರ ಲೋಕದ ಭಿನ್ನ ಭಿನ್ನ ಅನುಭವ ಕಟ್ಟಿಕೊಡುವ ಪ್ರದೇಶ ಸೂಚಕ ಕಥೆಗಾರರ ಕಥೆಗಳನ್ನು ಕಂಡಿರುವ ನನಗೆ ನಗರಿಗರ ಅನುಭವ ಲೋಕ ಅವರ ವಸ್ತುವಿನ, ಪರಿಭಾಷೆಯ ಮತ್ತು ನಿರೂಪಣೆಯ ಕಾರಣವೂ ಸೇರಿ ಅಪತ್ಯವೆನಿಸಿದ್ದೆ ಹೆಚ್ಚು. ಆದರೆ ಕಾರ್ಪೆಂಟರ್ ಕಥೆಗಳು ಮೇಲ್ನೋಟಕ್ಕೆ ನಗರ ಕೇಂದ್ರಿತ ವಸ್ತು, ಪರಿಭಾಷೆ ಎನಿಸಿದರೂ ಅದು ಅಲ್ಲಿಂದ ಬಿಡಿಸಿಕೊಂಡು ಬಂದು ಬೇಗನೆ ಎಲ್ಲರದ್ದೆನಿಸಿ ಅಪ್ಪಿಕೊಂಡು ಜೊತೆನಡೆಸುತ್ತದೆ. ಕಾರ್ಪೆಂಟರ್ ಕಥೆಗಳಲ್ಲಿ ಬಹುದೊಡ್ಡ ತಾರಾಗಣವೇನೂ ಕಾಣಿಸುವುದಿಲ್ಲ. ಬಹುತೇಕ ಕಥೆಗಳಲ್ಲಿ ಒಬ್ಬನೆ ಇಲ್ಲವೆ ಇನ್ನೊಬ್ಬನೊಂದಿಗೆ ನಡೆಸುವ ಆಲಾಪವೇ ಹೆಚ್ಚು. ಇದೊಂದು ಬಗೆಯ ಅಂತರಂಗ ಶುದ್ಧಿಯಂತೆ ನಮ್ಮನ್ನು ತೊಳೆಯುತ್ತದೆ.

ಕಾರ್ಪೆಂಟರ್ ಕಥೆಗಳಲ್ಲಿನ ಪಾತ್ರಗಳು ಯಾವುದೇ ಕಾರಣಕ್ಕೂ ಒಂದೇ ಧರ್ಮ ಸೂಚಕವಾಗಿ ಇರುವುದೇ ಇಲ್ಲ. ಇಲ್ಲಿ ಸಲೀಸಾಗಿ ಮುಸ್ಲಿಮ್, ಕ್ರೈಸ್ತರನ್ನು ಸೂಚಿಸುವ ದಂಡಿ ಪಾತ್ರಗಳು, ಬದುಕುಗಳು ಸಿಗುತ್ತವೆ. ಇದೊಂದು ಬಗೆಯ ಗಾಂಧಿ ಕಣ್ಣಿನ ಭಾರತವೇ ಸರಿ. ಗಾಂಧಿ ಒಂದು ಕಡೆ ಒಂದು ದೇಶದ ಘನತೆ ಅಡಗಿರುವುದು ಆ ದೇಶ, ಅಲ್ಲಿನ ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಳ್ಳುತ್ತಿದೆ ಎಂಬುದರ ಮೇಲೆ ಎಂದು ಹೇಳಿದ್ದರ ನೆನಪು. ಈ ವಿಷಯದಲ್ಲಿ ಕಾರ್ಪೆಂಟರ್ ಎಷ್ಟು ಸ್ಪಷ್ಟವಾಗಿದ್ದಾರೆ ಅಂದರೆ ಇಲ್ಲಿನ ಕೆಲವು ಪಾತ್ರಗಳು ಉರ್ದುವಿನಲ್ಲಿ ದೀರ್ಘವಾಗಿ ಮಾತಾಡುತ್ತವೆ. ಅದನ್ನು ಸಾಮಾನ್ಯ ಓದುಗನಿಗೆ ಸುಲಭಿಸುವ ಗೋಜಿಗೆ ಇವರು ಹೋಗುವುದಿಲ್ಲ. ನನ್ನ ದೇಶಿಯರೇ ಆಡುವ ಈ ಭಾಷೆಯನ್ನು ಅರ್ಥಮಾಡಿಕೊಳ್ಳದಿರುವುದರಲ್ಲಿ ನಮ್ಮದೇ ಲೋಪವಿದೆ ಎನ್ನುವಷ್ಟು ಖಡಕ್ ಆಗಿದ್ದಾರೆ ಕಾರ್ಪೆಂಟರ್. ನನ್ನಂತಹವನಿಗೆ ಇದು ಸರಿಯೂ ಇರಬಹುದೆನಿಸದಿರದು.

ಕಾರ್ಪೆಂಟರ್‌ರವರ ಕಥೆಗಳ ಮತ್ತೊಂದು ಗಮನಿಸತಕ್ಕಂತಹ ಅಂಶವೆಂದರೆ ಇವರ ಪ್ರತಿ ಕಥೆಯಲ್ಲೂ ಒಬ್ಬ ಕವಿಯೋ ಕಥೆಗಾರನೋ ಇದ್ದೇ ಇರುತ್ತಾನೆ. ಈ ಮೂಲಕ ಅವರು ತನ್ನೊಳಗಿನ ಕವಿಯನ್ನೊ ಅಥವಾ ಲೋಕದ ಕವಿಯನ್ನೋ ಪ್ರತಿ ಹಂತದಲ್ಲೂ ವಿಮರ್ಶೆಗೊಳಪಡಿಸುತ್ತಾರೆ. ಇದು ತತ್ವಜ್ಞಾನಿಯೊಬ್ಬ ಲೋಕ ಗ್ರಹಿಸುವ ಕ್ರಮವಿರಬಹುದೇನೊ.. ತಿಳಿಯದು.

ಈ ಸಂಕಲನದಲ್ಲಿ ಡೆತ್ ನೋಟ್ ಬಹಳ ಮುಖ್ಯವಾದ ಕಥೆ. ಸೇನೆಯಲ್ಲಿ ಪರಮವೀರ ಚಕ್ರ ಪಡೆದು ದೇಶದ ಉದ್ದಗಲಕ್ಕೂ ಸನ್ಮಾನಿಸಿಕೊಂಡ ಅಧಿಕಾರಿಯೊಬ್ಬ ತನ್ನ ಪತ್ನಿಯ ಕಾಮವನ್ನು ಗೆಲ್ಲಲಾಗದೆ ಮತ್ತೊಬ್ಬ ನಿಗರ್ಪಿಸಿ ಲೋಕದ ಗೌರವಗಳಿಗೆ ನಾನು ಅರ್ಹನೇ ಎಂದು ತನ್ನನ್ನೇ ತಾನು ಶಪಿಸಿಕೊಂಡು ಪರಿತಪಿಸುವ ಸ್ವಮರುಕದ ಕಥೆ. ಈ ಸಂಕಲನದ ಅತ್ಯಂತ ಗಟ್ಟಿ ಕಥೆಯೂ ಹೌದು. ಇದು ಉಂಟು ಮಾಡುವ ವಿಶಾದ, ಕಾಣಿಸುವ ದರ್ಶನ ಎಂಥವನಿಗೂ ಕಾಡಿಬಿಡುತ್ತದೆ. ಭಕ್ತ ಮಂಡಳಿಗಂತೂ ಬಿಸಿ ತುಪ್ಪವೇ ಸರಿ. ಇದರ ಶಕ್ತಿಯ ಕಾರಣಕ್ಕೊ ಏನೊ ನನ್ನಂತಹವನಿಗೆ ಇದೇ ಶೀರ್ಷಿಕೆ ಸಂಕಲನಕ್ಕೆ ಇದ್ದರೆ ಇನ್ನು ಅರ್ಥಪೂರ್ಣ ಎನಿಸಿದ್ದು ಸುಳ್ಳಲ್ಲ.

ಬ್ರಾಹ್ಮಿನ್ ಕೆಫೆಕಥೆಯೂ ಪ್ರಚಲಿತ ಆಹಾರ ರಾಜಕೀಯವನ್ನು ನೇರವಾಗಿಯೇ ಹೇಳುತ್ತದೆ. ಗೋಮಾಂಸ ಕೇಂದ್ರಿತ ಹಲವು ಕಥೆಗಳು ಬಂದಿದ್ದರೂ ಇದು ಹೇಗೆ ಭಿನ್ನ ಎಂದರೆ ಕಥೆಯ ಲವಲವಿಕೆಯಿಂದಾಗಿ ಮತ್ತು ಇವತ್ತಿನ ಫೇಸ್‌ಬುಕ್ ಹೋರಾಟಗಾರರ ಹೋರಾಟದ ಮಿತಿಯನ್ನು ಛೇಡಿಸುತ್ತ ಭ್ರಮೆ ಮತ್ತು ವಾಸ್ತವ ಎರಡನ್ನು ಬಯಲುಗೊಳಿಸುತ್ತದೆ.

 ಕೀ ಚೈನ್ ಕಥೆ ಐಶಾರಾಮಿ ನಗರಿಗರ ಗಂಡು ಸೂಳೆಯರನ್ನು ಕುರಿತದ್ದಾಗಿದ್ದು ನನ್ನಂತಹ ಗ್ರಾಮ್ಯರಿಗೆ ಹೊಸ ಲೋಕ ದೃಷ್ಟಿಯನ್ನೇ ಮಾಡಿಸುತ್ತದೆ. ನೋಟ್ ಬಂದಿ ಕಥೆ ಡಿಮಾನಿಟೈಜೇಸನ್ ನಿಂದಾದ ಅನಾಹುತವನ್ನು ಭಾವನಾತ್ಮಕಗೊಳಿಸುವುದಾಗಿದ್ದರೂ ಕಲೀಲ್ ನಿದ್ದೆಗಣ್ಣಲ್ಲಿ ತೂಕಡಿಸುತ್ತ ಕೂತು ಉಚ್ಚೆ ಹುಯ್ಯುವುದನ್ನು ವ್ಯವದಾನದಿಂದ ಕಟ್ಟಿ ಕೊಟ್ಟಿರುವ ಬಗೆ ಮಾಸದೆ ಉಳಿಯುತ್ತದೆ. ಖಂಡವಿದೆಕೊ ಮಾಂಸವಿದೆಕೊ ಕಥೆ ಬ್ರಾಹ್ಮಣೀಕರಣಕ್ಕೊಳಗಾಗುವ ಅರೆ ತಿಳುವಳಿಕೆಯ ಹೆಣ್ಣುಮಗಳೊಬ್ಬಳ ಮತ್ತು ಆಕೆಯ ತಾಯಿಯ ಸಂಕಟವನ್ನು ಹೇಳಿ ಕರುಳಿಗೆ ಕತ್ತರಿ ಆಡಿಸುತ್ತದೆ.

 ಮ್ಯಾರಿಡ್ ವರ್ಜಿನ್ ಮತ್ತು ಒಂದು ಸಂದರ್ಶನ ಎರಡೂ ಒಂದೇ ಬಗೆಯ ನಿರೂಪಣೆಯನ್ನು ಹೊಂದಿದ್ದರೂ ಭಿನ್ನ ಬಗೆಯಲ್ಲಿ ಸಂಬಂಧಗಳನ್ನು ಮತ್ತು ಸಿದ್ಧಾಂತಗಳನ್ನು ನಿಕಷಕ್ಕೊಡ್ಡುತ್ತದೆ. ಇಲ್ಲಿ ಕಾರ್ಪೆಂಟರ್ ಅತ್ಯಂತ ಪ್ರಬುದ್ಧವಾಗಿ ಲೋಕ ಗ್ರಹಿಸುತ್ತಾರೆ ಮತ್ತು ಅವರು ಚರ್ಚಿಸುವ ಫಿಲಾಸಫಿಕಲ್ ಉತ್ತರ ಅಚ್ಚರಿ ಮೂಡಿಸುತ್ತದೆ.

ಅಟ್ರಾಸಿಟಿ ಈ ಸಂಕಲನದಲ್ಲೇ ಬಿನ್ನವಾದ ಕಥೆ. ಇಲ್ಲಿ ಅವರು ಗ್ರಾಮ್ಯ ಭಾಷೆಯ ಪ್ರಯೋಗಕ್ಕೂ ಇಳಿದು ನೋಡಿದ್ದಾರೆ. ಅಲ್ಲಲ್ಲೆ ಯಶಸ್ವಿಯೂ ಆಗಿದ್ದಾರೆ.

ಕಾರ್ಪೆಂಟರ್‌ರವರ ಈ ಬ್ರಾಹ್ಮಿನ್ ಕೆಫೆಯ ಸ್ಪೀಡ್‌ನಲ್ಲಿ ನಾವೂ ಕೈಜೋಡಿಸಿ ತಿರುಗ ಹೊರಟರೆ ಒಂದು ಜಂಪ್ ಮೇಲಕ್ಕೆ ಹಾರಿ ತಿರುಗಿದ ಅನುಭವವಾಗುವುದಂತು ಗ್ಯಾರಂಟಿ.

share
ಗುರುಪ್ರಸಾದ್ ಕಂಟಲಗೆರೆ
ಗುರುಪ್ರಸಾದ್ ಕಂಟಲಗೆರೆ
Next Story
X