ಕ್ರೀಡಾಕೂಟಗಳಿಂದ ಸಮಾಜದ ಸೌಹಾರ್ದತೆ ಬಲವರ್ಧನೆ: ವಿಜಯಾನಂದ

ಶಿರ್ವ, ಫೆ.3: ಕ್ರೀಡಾಕೂಟಗಳು ಸಮಾಜದ ಸಂಘಟನೆ ಹಾಗೂ ಸೌಹಾರ್ದತೆಗೆ ಬಲವನ್ನು ನೀಡುತ್ತವೆ. ಪರಸ್ಪರ ಪರಿಚಯ, ಬಾಂಧವ್ಯ ವೃದ್ದಿಸಿ ಸಂಬಂಧಗಳನ್ನು ಗಟ್ಟಿಗೊಳಿಸುತ್ತವೆ ಎಂದು ಉಡುಪಿ ಜಿಪಂ ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನೆ ಕಾರ್ಯನಿರ್ವಹಣಾ ಯೋಜನಾ ಅಭಿಯಂತರ ವಿಜಯಾನಂದ ನಾಯಕ್ ಹೇಳಿದ್ದಾರೆ.
ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳದ ಹೇರೂರು ಕ್ರೀಡಾಂಗಣ ದಲ್ಲಿ ರವಿವಾರ ನಡೆದ ರಾಜಾಪುರ ಸಾರಸ್ವತ ಯುವವೃಂದ ನೇತೃತ್ವದಲ್ಲಿ ಎಂಟು ಕೂಡುಗಟ್ಟುಗಳಾದ ಮಟ್ಟಾರು ಬೆಳಂಜಾಲೆ, ಪಳ್ಳಿ ಅಡಪಾಡಿ, ಸೂಡಪುನಾರು, ಸಡಂಬೈಲು, ಮಾಣಿಪಾಡಿ, ಪೊದಮಲೆ, ಪಾಲಮೆ ಮತ್ತು ಹೇರೂರು ಬಂಟಕಲ್ಲು ಮಟ್ಟದ ಪುರುಷರ ಕ್ರಿಕೆಟ್, ಹಗ್ಗ ಜಗ್ಗಾಟ, ಮಹಿಳೆ ಯರ ತ್ರೋಬಾಲ್, ಹಗ್ಗಜಗ್ಗಾಟ ಸ್ಫರ್ಧೆಗಳ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡುತಿದ್ದರು.
ಮುಖ್ಯ ಅತಿಥಿಯಾಗಿ ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಮಾತನಾಡಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ತ್ರೋಬಾಲ್ ಆಟಗಾರ್ತಿ ನಿಧಿ ಪ್ರಭು ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ದೇವಳದ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ ಸಡಂಬೈಲು, ಆಡಳಿತ ಮಂಡಳಿ ಅಧ್ಯಕ್ಷ ಗಂಪದಬೈಲು ಜಯರಾಮ ಪ್ರಭು, ಯುವವೃಂದದ ಅಧ್ಯಕ್ಷ ವೀರೇಂದ್ರ ಪಾಟ್ಕರ್ ಕೋಡುಗುಡ್ಡೆ, ಕ್ರೀಡಾ ಕಾರ್ಯದರ್ಶಿ ಗೌರವ್ ಪ್ರಭು, ಕ್ರೀಡಾ ಸಮಿತಿಯ ಆಶೀಷ್ ಪಾಟ್ಕರ್, ಅಭಿಷೇಕ್ ನಾಯಕ್, ಪ್ರೀತಮ್ ಪ್ರಭು, ಕೂಡುಕಟ್ಟುಗಳ ಮುಖ್ಯಸ್ಥರುಗಳಾದ ಸುರೇಂದ್ರ ನಾಯಕ್, ನರಸಿಂಹ ಪ್ರಭು ಸೂಡ, ಶ್ರೀನಿವಾಸ ವಾಗ್ಲೆ, ರಾಜೇಂದ್ರ ಪಾಟ್ಕರ್, ಉಮೇಶ ಪ್ರಭು ಪಾಲಮೆ, ಪುಂಡಲೀಕ ಪ್ರಭು, ಸಂತೋಷ್ ನಾಯಕ್ ಉಪಸ್ಥಿತರಿದ್ದರು.
ಬಂಟಕಲ್ಲು ಕೂಡುಕಟ್ಟಿನ ಮುಖ್ಯಸ್ಥ ರಾಮರಾಯ ಪಾಟ್ಕರ್ ಸ್ವಾಗತಿಸಿದರು. ವಿಶ್ವನಾಥ ಬಾಂದೋಡ್ಕರ್ ಸ್ಪರ್ಧಾವಿಜೇತರ ಪಟ್ಟಿ ವಾಚಿಸಿದರು. ಯುವ ವೃಂದದ ಕಾರ್ಯದರ್ಶಿ ಅನಂತರಾಮ ವಾಗ್ಲೆ ವಂದಿಸಿದರು. ಶಿಕ್ಷಕ ದೇವದಾಸ ಪಾಟ್ಕರ್ ಮುದರಂಗಡಿ ಕಾರ್ಯಕ್ರಮ ನಿರೂಪಿಸಿದರು.
ಪೂರ್ವಾಹ್ನ ಪಂದ್ಯಾಟಗಳನ್ನು ಅನಿವಾಸಿ ಭಾರತೀಯ ವಿಶ್ವನಾಥ್ ಪಾಟ್ಕರ್ ಕುವೈಟ್ ಉದ್ಘಾಟಿಸಿದರು. ದೇವಳದ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ, ಉಪಾಧ್ಯಕ್ಷ ಉಮೇಶ ಪ್ರಭು ಪಾಲಮೆ ಉಪಸ್ಥಿತರಿದ್ದರು.







