ಅನಂತ ಕುಮಾರ್ ಹೆಗಡೆಗೆ ನೋಟಿಸ್ ಜಾರಿ: ನಳಿನ್ ಕುಮಾರ್ ಕಟೀಲು
ಗಾಂಧೀಜಿ ಸೇರಿ ಸ್ವಾತಂತ್ರ್ಯ ಹೋರಾಟಗಾರರ ಅವಹೇಳನ

ಹೊಸದಿಲ್ಲಿ, ಫೆ.3: ಮಹಾತ್ಮಾ ಗಾಂಧೀಜಿ ವಿರುದ್ಧ ನೀಡಿರುವ ಹೇಳಿಕೆಯ ಹಿನ್ನೆಲೆಯಲ್ಲಿ ಪಕ್ಷದ ಸಂಸದ ಅನಂತ ಕುಮಾರ್ ಹೆಗಡೆಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿರುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ಹೆಗಡೆ ಹೇಳಿಕೆಗೆ ಪಕ್ಷದ ಹೈಕಮಾಂಡ್ ತೀವ್ರ ಆಕ್ಷೇಪ ಸೂಚಿಸಿದ್ದು ತನ್ನ ಹೇಳಿಕೆಯ ಬಗ್ಗೆ ವಿವರಣೆ ನೀಡುವಂತೆ ತಿಳಿಸಿ ನೋಟಿಸ್ ಜಾರಿಗೊಳಿಸಿದೆ ಎಂದು ನಳಿನ್ ಕುಮಾರ್ ಹೇಳಿದ್ದಾರೆ.
ಹೆಗಡೆ ಹೇಳಿಕೆಯ ಬಗ್ಗೆ ಬಿಜೆಪಿ ಹೈಕಮಾಂಡ್ ಗರಂ ಆಗಿದ್ದು ಕ್ಷಮಾಪಣೆ ಕೇಳುವಂತೆ ಹೆಗಡೆಗೆ ಸೂಚಿಸಬಹುದು ಎಂದು ಮೂಲಗಳು ತಿಳಿಸಿವೆ. ಹೆಗಡೆ ಹೇಳಿಕೆಯಿಂದ ಹತಾಶರಾಗಿರುವ ಪ್ರಧಾನಿ ಮೋದಿ, ಮಂಗಳವಾರ ನಡೆಯಲಿರುವ ಸಂಸದೀಯ ಪಕ್ಷದ ಸಭೆಗೆ ಹೆಗಡೆಯನ್ನು ಆಹ್ವಾನಿಸದಿರಲು ಸೂಚಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
Next Story





