ಎಂಟಿಎಂ ನಂಬರ್ ಬಳಸಿ ಹಣ ವರ್ಗಾವಣೆ
ಉಡುಪಿ, ಫೆ.3: ಎಟಿಎಂ ಕಾರ್ಡಿನ ನಂಬರ್ ದುರ್ಬಳಕೆ ಮಾಡಿ ವ್ಯಕ್ತಿ ಯೊಬ್ಬರ ಬ್ಯಾಂಕ್ ಖಾತೆಯಿಂದ ಸಾವಿರಾರು ರೂ. ಹಣ ವರ್ಗಾವಣೆ ಮಾಡಿ ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜ.30ರಿಂದ ಫೆ.1ರ ಮಧ್ಯಾವಧಿಯಲ್ಲಿ ಮಣಿಪಾಲದ ಇಮ್ರಾನ್ ಜಮೀಲ್ (23) ಎಂಬವರ ಎಟಿಎಂ ಕಾರ್ಡಿನ ನಂಬರನ್ನು ದುರ್ಬಳಕೆ ಮಾಡಿದ ದುಷ್ಕರ್ಮಿಗಳು, ಇಮ್ರಾನ್ ಬ್ಯಾಂಕ್ ಖಾತೆಯಿಂದ ಒಟ್ಟು 82,100 ರೂ. ಹಣವನ್ನು ಯುಪಿಐ ಟ್ರಾನ್ಸೆಕ್ಷನ್ ಹಾಗೂ ಪೇಟಿಎಂ ಮೂಲಕ ವರ್ಗಾ ವಣೆ ಮಾಡಿ ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
Next Story





