ತುಳು ಭಾಷೆಯಲ್ಲಿ ಸಂವಿಧಾನ ಪೀಠಿಕೆ ಬಿಡುಗಡೆ

ಮಂಗಳೂರು, ಫೆ.3: ಕರ್ನಾಟಕ ಸಾಹಿತ್ಯ ಅಕಾಡಮಿ, ಜೈ ತುಳುನಾಡ್ ಮತ್ತು ಬೆಂಗಳೂರು ತುಳುವಾಸ್ ಕೌನ್ಸಿಲ್‌ಗಳ ಸಹಯೋಗದಲ್ಲಿ ಇತ್ತೀಚೆಗೆ ನಗರದ ತುಳುಭವನದಲ್ಲಿ ತುಳು ಭಾಷೆ ೆ ಮತ್ತು ತುಳು ಲಿಪಿಯಲ್ಲಿ ಭಾರತದ ಸಂವಿಧಾನದ ಪೀಠಿಕೆಯನ್ನು ಬಿಡುಗಡೆ ಗೊಳಿಸಲಾಯಿತು.
ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್ ತುಳು ಲಿಪಿಯ ಸಂವಿಧಾನದ ಪೀಠಿಕೆ ಬಿಡುಗಡೆ ಗೊಳಿಸಿದರು. ಕರ್ನಾಟಕ ಸಾಹಿತ್ಯ ಅಕಾಡಮಿಯ ಸದಸ್ಯ ಡಾ.ಆಕಾಶ್ ರಾಜ್ ಜೈನ್ ಮಾತನಾಡಿ, ತುಳು ಭಾಷೆಯಲ್ಲಿ ಸಂವಿಧಾನದ ಬಿಡುಗಡೆ ಬಹುಕಾಲದ ಹಿಂದೆಯೇ ನಡೆಯಬೇಕಿದ್ದ ಕಾರ್ಯವಾಗಿತ್ತು. ಸಂವಿಧಾನದ ಪೀಠಿಕೆಯನ್ನು ತುಳು ಭಾಷೆ ಮತ್ತು ತುಳು ಲಿಪಿಯಲ್ಲಿ ರಚಿಸಿರುವುದು ಒಳ್ಳೆಯ ವಿಚಾರವಾಗಿದೆ ಎಂದರು.
ಈ ಸಂದರ್ಭ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಸದಸ್ಯ ಲೀಲಾಕ್ಷ ಕರ್ಕೇರ, ನಿಟ್ಟೆ ಶಶಿಧರ ಶೆಟ್ಟಿ, ಸಿದ್ದಕಟ್ಟೆ ಮಲ್ಲಿಕಾ ಅಜಿತ್ ಶೆಟ್ಟಿ, ಅಕಾಡಮಿಯ ರಿಜಿಸ್ಟ್ರಾರ್ ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.
Next Story





