ಟ್ವೆಕಾಂಡೋ ಚಾಂಪಿಯನ್‌ಶಿಪ್ : ಯೂಸುಫ್ ಹಫೀಝ್‌ಗೆ ಚಿನ್ನದ ಪದಕ

ಮಂಗಳೂರು, ಫೆ.3: ನಗರ ಹೊರವಲಯದ ನೀರುಮಾರ್ಗದಲ್ಲಿರುವ ಕರಾವಳಿ ಕಾಲೇಜಿನ ಪಾಲಿಟೆಕ್ನಿಕ್ ಡಿಪ್ಲೊಮಾ ಇನ್ ಅರೋನಾಟಿಕಲ್ ಇಂಜಿನಿಯರಿಂಗ್ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿ ಯೂಸುಫ್ ಹಫೀಝ್‌ಗೆ ಚಿನ್ನ ಹಾಗೂ ಬೆಳ್ಳಿಯ ಪದಕ ಲಭಿಸಿದೆ.
ಬೆಂಗಳೂರಿನ ರಾಜಾಜಿ ನಗರದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರ ಮಟ್ಟದ 3ನೇ ಫಾ ಕಪ್ ಟ್ವೆಕಾಂಡೋ ಚಾಂಪಿಯನ್‌ಶಿಪ್‌ನ 47 ಕೆಜಿ ಜ್ಯೂನಿಯರ್ ವಿಭಾಗದ ಕ್ಯೋರೋಗಿ ವಿಭಾಗದಲ್ಲಿ ಚಿನ್ನ ಮತ್ತು ಪೂಮ್ಸೆ ವಿಭಾಗದಲ್ಲಿ ಬೆಳ್ಳಿಯ ಪದಕ ಹಾಗೂ ಮಲ್ಲೇಶ್ವರಂನಲ್ಲಿ ನಡೆದ ರಾಜ್ಯ ಮಟ್ಟದ ಸೌತ್ ರೆನ್ ಟ್ವೆಕಾಂಡೊ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಪಡೆದಿರುತ್ತಾರೆ.
ಬಂಟ್ವಾಳದ ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆದ ಪ್ರಥಮ ದ.ಕ. ಜಿಲ್ಲಾ ಮಟ್ಟದ ಟ್ವೆಕಾಂಡೋ ಚಾಂಪಿಯನ್‌ಶಿಪ್‌ನಲ್ಲೂ ಎರಡು ಚಿನ್ನದ ಪದಕಗಳನ್ನು ಗಳಿಸುವ ಮೂಲಕ ಒಟ್ಟು 6 ಪದಕಗಳನ್ನು ಪಡೆದಿರುತ್ತಾರೆ.
Next Story





